Hijab controversy | ಸಂಸತ್ ನಲ್ಲಿ “ ಹಿಜಾಬ್ ವಿವಾದ” ಸದ್ದು hijab-controversy
ನವದೆಹಲಿ : ರಾಜ್ಯದಲ್ಲಿ ಭಾರಿ ಸುದ್ದಿಯಾಗುತ್ತಿರುವ ಹಿಜಾಬ್ ವಿವಾದ ಇದೀಗ ಲೋಕಸಭೆಯಲ್ಲಿ ಸದ್ದು ಮಾಡಿದೆ.
ಇಂದಿನ ಲೋಕಸಭಾ ಕಲಾಪದ ವೇಳೆ ತಮಿಳುನಾಡು ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಅವರು ಹಿಜಾಬ್ ವಿವಾದವನ್ನು ಪ್ರಸ್ತಾಪಿಸಿದರು.
ಸೆಂಥಿಲ್ ಅವರು ಲೋಕಸಭೆಯಲ್ಲಿ “ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರಿಗೆ ಅವಕಾಶ ನೀಡುತ್ತಿಲ್ಲ.
ಹಿಜಾಬ್ ಧರಿಸಿದವರಿಗೆ ತರಗತಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ.
ಕೂಡಲೇ ಈ ಬಗ್ಗೆ ಹೊಸ ನಿಯಮ ಮಾಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ಜೊತೆಗೆ ಕೇಂದ್ರ ಸರ್ಕಾರ ಹಿಜಾಬ್ ವಿವಾದದಲ್ಲಿ ಮಧ್ಯಪ್ರವೇಶ ಮಾಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತ ಕರ್ನಾಟಕದಲ್ಲಿ ಹಿಜಾಬ್ ವಿವಾದ ಜಿಲ್ಲೆಯಿಂದ ಜಿಲ್ಲೆಗೆ ವ್ಯಾಪಿಸುತ್ತಿದೆ.
ಇಷ್ಟು ದಿನ ಮಲೆನಾಡು ಜಿಲ್ಲೆಗಳಲ್ಲಿ ಸದ್ದು ಮಾಡಿದ್ದ ಹಿಜಾಬ್ ವಿವಾದ ಇಂದು ಬೆಳಗಾವಿಯಲ್ಲೂ ಹಿಜಾಬ್ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಪ್ರವೇಶಿಸಿದ್ದಾರೆ.









