Hijab Controversy: ಸ್ಪಷ್ಟ ತೀರ್ಪಿಗೆ ಬಾರದ ಸುಪ್ರೀಂ – ಸಧ್ಯಕ್ಕೆ ಯಥಾಸ್ಥಿತಿ ಮುಂದುವರಿಕೆ…
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇದಿಸಿ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿನ ಕುರಿತು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀ ಕೋರ್ಟ್ ಗೆ ಸ್ಪಷ್ಟ ತೀರ್ಪು ನೀಡಲು ಸಾಧ್ಯವಾಗಲಿಲ್ಲ. 10 ದಿನಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ಹಿಜಾಬ್ ಧರಿಸುವುದನ್ನು ನಿಷೇಧಿಸುವ ಬಗ್ಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿತು. ಜಸ್ಟಿಸ್ ಗುಪ್ತಾ ಅವರು ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೈಕೋರ್ಟ್ ತೀರ್ಪು ಎತ್ತಿ ಹಿಡಿದ್ರೆ, ನ್ಯಾಯಮೂರ್ತಿ ಧುಲಿಯಾ ಅದನ್ನ ತಿರಸ್ಕರಿಸಿದರು.
ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಸರ್ಕಾರದ ಆದೇಶವನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಗುರುವಾರ ತೀರ್ಪು ನೀಡಿದ್ದಾರೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಕರ್ನಾಟಕ ಹೈಕೋರ್ಟ್ನ ಮಾರ್ಚ್ನಲ್ಲಿ ಸರ್ಕಾರದ ಆದೇಶಗಳನ್ನು ಎತ್ತಿಹಿಡಿದ ತೀರ್ಪನ್ನು ಎತ್ತಿಹಿಡಿದಿದ್ದಾರೆ.
ಹಾಗಾಗಿ ಹಿಜಾಬ್ ವಿವಾದ ಭಾರತದ ಮುಖ್ಯ ನ್ಯಾಯಾಧೀಶರು (CJI) ನ್ಯಾಯಮೂರ್ತಿ YU ಲಲಿತ್ ಅವರ ಅಂಗಳಕ್ಕೆ ತಲುಪಿದೆ.
ಸಧ್ಯಕ್ಕೆ, ಸುಪ್ರೀಂ ಸ್ಪಷ್ಟ ತೀರ್ಪಿಗೆ ಬಾರದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಯಥಾಸ್ಥತಿ ಮುಂದುವರೆಯಲಿದೆ. ಸುಪ್ರೀಂನಿಂದ ಮುಂದಿನ ತೀರ್ಪು ಬರುವವರೆಗೂ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮುಂದುವರೆಯುತ್ತದೆ.
Hijab Controversy: The Supreme Court does not reach a clear verdict
ಇದನ್ನೂ ಓದಿ: https://saakshatv.com/hijab-controvers…f-justices-court/








