Hijab Protest : ಗದಗ – ಹಿಜಾಬ್ ಕಳಚಲು ನಿರಾಕರಿಸಿ ವಾಪಸ್ ಆದ ವಿದ್ಯಾರ್ಥಿನಿಯರು
ಗದಗ : ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಹಿಜಾಬ್ ಹಗ್ಗಹಗ್ಗಾಟ ಮುಂದುವರೆದಿದೆ. ಹಳೆ ಕೋರ್ಟ್ ಆವರಣದಲ್ಲಿ ಇರೋ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಳಿ ಹಿಜಾಬ್ ಹೈ ಡ್ರಾಮಾ ನಡೆದಿದೆ.
ವಿದ್ಯಾರ್ಥಿನಿಯರು ಇಂದೂ ಸಹ ಹಿಜಾಬ್ ಹಾಕಿಕೊಂಡು ಬಂದಿದ್ದರು.. ಹಿಜಾಬ್ ಹಾಕಿಕೊಂಡು ಕ್ಲಾಸ್ ನಲ್ಲಿ ಕೂರುತ್ತೇವೆಂದು ವಿದ್ಯಾರ್ಥಿನಿಯರ ಪಟ್ಟು ಹಿಡಿದಿದ್ದಾರೆ.. ಆದ್ರೆ ಹೈ ಕೋರ್ಟ್ ಆದೇಶ ಸರ್ಕಾರದ ಸೂಚನೆ ಹಿನ್ನೆಲೆ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಕಾಲೇಜು ಆಡಳಿತ ಮಂಡಳಿ ಅವಕಾಶ ನೀಡಿಲ್ಲ.
ಹೀಗಾಗಿ ಆಕ್ರಶದಲ್ಲೇ 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಾಲೇಜಿನಿಂದ ವಾಪಾಸ್ಸ್ ನಡೆದಿದ್ದಾರೆ. ಈ ವೇಳೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದರು.. ಈ ಮಹಿಳಾ ಕಾಲೇಜಿನಲ್ಲಿ ಒಟ್ಟು 69 ಮುಸ್ಲಿಂ ವಿದ್ಯಾರ್ಥನಿಯರಿದ್ದಾರೆ. ವಿವಾದಿಂದಾಗಿ ಬಹುತೇಕ ವಿದ್ಯಾರ್ಥನಿಯರು ಗೈರಾಗಿದ್ದರು.. ಕೆಲವೇ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕ್ಲಾಸ್ ಗೆ ಹಾಜರಾಗಿದ್ದರು..