Hijab – Saffron controvercy : ಶಿವಮೊಗ್ಗದಲ್ಲಿ ಹಿಜಾಬ್ ವರ್ಸಸ್ ಕೇಸರಿ ಸಂಘರ್ಷ ಕಲ್ಲು ತೂರಾಟದಲ್ಲಿ ಇಬ್ಬರಿಗೆ ಗಾಯ
ಶಿವಮೊಗ್ಗ : ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ಭುಗಿಲೆದ್ದಿದೆ… ಹಿಜಬ್ ಗಾಗಿ ಮುಸ್ಲಿಂ ಯುವತಿಯರು ಪ್ರತಿಭಟನೆ ಮಾಡ್ತಿದ್ದರೆ ,, ಹಿಜಬ್ ತೆಗೆಯುವಂತೆ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು , ರಾಜಕೀಯ ತಿರುವು ಪಡೆದುಕೊಂಡಿದೆ.. ಸದ್ಯಕ್ಕೆ ಈ ಪ್ರಕರಣ ಈಗ ನ್ಯಾಯಾಲಯದ ಅಂಗಳದಲ್ಲಿದೆ.. ಅಂತಿಮವಾಗಿ ಸಂಬಂಧಿತ ಕೇಸ್ ಗಳ ವಿಚಾರಣೆ ನಡೆದ ನಂತರ ತೀರ್ಪು ಹೊರಬರಬೇಕಿದೆ..
ಇತ್ತ ಶಿವಮೊಗ್ಗದಲ್ಲೂ ಹಿಜಬ್ – ಕೇಸರಿ ಸಾಲು ವಿವಾದ ಭುಗಿಲೆದ್ದಿದೆ.. ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿದೆ.. ಪರಿಸ್ಥಿತಿ ನಿಯಂತ್ರಿಸಲು ವಿದ್ಯಾರ್ಥಿಗಳನ್ನು ಚದುರಿಸಿದ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಕೇಸರಿ ಶಾಲುತೊಟ್ಡ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬಿ.ಹೆಚ್ ರಸ್ತೆ ಚರ್ಚ್ ಬಳಿ ಘಟನೆ ನಡೆದಿದೆ.. ಒಂದೆಡೆ ಕೇಸರಿ ಮತ್ತು ಮತ್ತೊಂದೆಡೆ ಹಿಜಾಬ್ ಪರ ವಿದ್ಯಾರ್ತೀಗಳು ಪ್ರತಿಭಟನೆ ನಡೆಸಿದ್ದಾರೆ.. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.. ಎಸ್ಪಿ ಲಕ್ಷ್ಮಿ ಪ್ರಸಾದ್ ಸ್ತಳದಲ್ಲಿ ಮೊಕ್ಕಾಂ ಹೂಡಿದ್ದಾರೆ..









