Hijab | ಆದೇಶ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ
ಬೆಂಗಳೂರು : ಹಿಜಾಬ್ ಧರಿಸಿ ಶಾಲೆಗೆ ಬರುವಂತಿಲ್ಲ. ಫೆಬ್ರವರಿ 5 ರಂದು ರಾಜ್ಯ ಸರ್ಕಾರ ಹಿಜಾಬ್ ನಿಷೇಧ ಕುರಿತು ಸುತ್ತೊಲೆ ಹೊರಡಿಸಿದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಸುಪ್ರೀಂ ಕೋರ್ಟ್ ವಿಭಿನ್ನವಾಗಿ ತೀರ್ಪು ಬಂದಿದೆ. ಹಿಜಾಬ್ ಧರಿಸಿ ಶಾಲೆಗೆ ಬರುವಂತಿಲ್ಲ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್, ಪಿಎಫ್ಐ ಅರ್ಥ ಮಾಡಿಕೊಳ್ಳಬೇಕು, ಸಮಾಜಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ.
ಕೋರ್ಟ್ ಹಿಜಾಬ್ ಧರಿಸಿ ಬರಬಾರದು ಅಂದಾಗ ಸುಪ್ರೀಂ ಕೋರ್ಟ್ ಹೋಗ್ತಾರೆ. ಇದರಿಂದ ಅರ್ಥ ಆಗುತ್ತೆ ಮತೀಯ ಶಕ್ತಿ ಎಷ್ಟಿದೆ.

ಮುಸ್ಲಿಂ ರಾಷ್ಟ್ರ ಇರಾನ್, ಇರಾಕ್ನಲ್ಲಿ ಹಿಜಾಬ್ ಬೇಡ ಅಂತ ಇದ್ದಾಗ, ಶಾಲೆಯಲ್ಲಿ ಹಿಜಾಬ್ ಬೇಕು ಅಂತ ಇಲ್ಲಿ ಪ್ರತಿಭಟನೆ ಮಾಡ್ತಾರೆ ಎಂದು ಹೇಳಿದರು.
ಪಿಎಫ್ಐ ಇನ್ನಾದ್ರೂ ಬದಲಾಗಬೇಕು. ಈಗಾಗಲೇ ಪಿಎಫ್ಐ ನಿಷೇಧ ಮಾಡಲಾಗಿದೆ. ಕಾಂಗ್ರೆಸ್ ಇದನ್ನ ಪುಷ್ಠೀಕರಿಸುವ ಕೆಲಸ ಮಾಡಿತು. ಸಿದ್ದರಾಮಯ್ಯ ಸ್ವಾಮೀಜಿ ಕೂಡ ಕಾವಿ ಹಾಕ್ತಾರೆ ಅಂತ ಹೇಳಿದ್ರು.
ಕಾಂಗ್ರೆಸ್ ಕೂಡ ಹಿಜಾಬ್ ಚೋಡೋ ಅಂತ ಭಾರತ್ ಜೋಡೋದಲ್ಲಿ ಜೋಡಿಸಿಕೊಳ್ಳಲಿ. ಇದರಿಂದ ಒಳ್ಳೆಯದು ವಾತಾವರಣ ಸೃಷ್ಟಿಯಾಗಲಿದೆ.
ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿ ಕಾಣಬೇಕು ಅಂತ ಶಾಲಾ ಸಮವಸ್ತ್ರ ತರಲಾಗಿದೆ. ಯಾವುದೇ ಕಾರಣಕ್ಕೂ ಫೆಬ್ರವರಿ 5ರಂದು ಹೊರಡಿಸಿದ ಆದೇಶ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.








