Himachal : ಚುನಾಯಿತ ಶಾಸಕರ ಸಭೆ ಕರೆದ ಕಾಂಗ್ರೆಸ್… ನಾಯಕನ ಆಯ್ಕೆಯೇ ಸವಾಲು..
ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯಿಂದ ಅಧಿಕಾರವನ್ನ ಕಸಿದುಕೊಂಡಿರುವ ಕಾಂಗ್ರೆಸ್, ತನ್ನ ಎಲ್ಲಾ ಹೊಸ ಚುನಾಯಿತ ಶಾಸಕರ ಸಭೆ ಕರೆದಿದೆ. ಸಭೆಯಲ್ಲಿ ಸಿಎಲ್ ಪಿ ನಝಖಾಯಕರನ್ ಆಯ್ಕೆ ಮಾಡುಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡುವ ನಿರ್ಣಯವನ್ನ ಅಂಗೀಕರಿಸುವ ಸಾಧ್ಯತೆಯಿದೆ.
1985 ರಿಂದ ಯಾವುದೇ ಪಕ್ಷಕ್ಕೆ ಪುನಃ ಅಧಿಕಾರ ಕೊಡದಿರುವ ಸಂಪ್ರದಾಯವನ್ನ ಗುಡ್ಡಗಾಡು ರಾಜ್ಯದ ಜನತೆ ಪಾಲಿಸುಕೊಂಡು ಬರುತ್ತಿದ್ದಾರೆ. 68 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನ ಪಡೆದುಕೊಂಡಿದೆ.
ಶುಕ್ರವಾರ ಶಿಮ್ಲಾದಲ್ಲಿ ಸಭೆ ನಡೆಯಲಿದೆ ಎಂದು ವಿರೋಧ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳ ಬಲ್ಲ ನಾಯಕನನ್ನ ಆರಿಸಿವುದು ಕಾಂಗ್ರೆಸ್ ಗೆ ತಕ್ಷಣದ ಸವಾಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷೆ ಪ್ರತಿಭಾ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ.
ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ ಅವರು ಗುರುವಾರ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ರಚಿಸಲು ಅವಕಾಶ ಸಿಗುತ್ತಿರುವುದಕ್ಕೆ ಕಾಂಗ್ರೆಸ್‌ಗೆ ಸಂತಸವಾಗಿದೆ ಮತ್ತು ರಾಜ್ಯದ ಜನತೆಗೆ ನೀಡಿರುವ 10 ಭರವಸೆಗಳನ್ನು ಈಡೇರಿಸಲು ಪಕ್ಷವು ಎಲ್ಲವನ್ನೂ ಮಾಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಲ್‌ಪಿ ನಾಯಕನನ್ನು ನಿರ್ಧರಿಸಲು ಶಾಸಕರು ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Himachal: Congress has called a meeting of elected MLAs… The challenge is to choose a leader..








