Himachal Pradesh Election: ಹಿಮಾಚಲದಲ್ಲಿ ಶೇ.74.05 ಮತದಾನ…
ಹಿಮಾಚಲದಲ್ಲಿ ಶೇಕಡಾ 74.05 ಮತದಾನಇತ್ತೀಚಿನ ಅಂಕಿಅಂಶಗಳ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಶೇ.74 ಕ್ಕೂ ಹೆಚ್ಚು ಮತದಾನವಾಗಿದೆ.
ಭಾನುವಾರ ಬೆಳಿಗ್ಗೆ ಲಭ್ಯವಿರುವ “ಅಂದಾಜು ಪ್ರವೃತ್ತಿ” ಪ್ರಕಾರ, ಹಿಮಾಚಲ ಪ್ರದೇಶದ ಒಟ್ಟು ಮತದಾರರಲ್ಲಿ 74.05 ಮತದಾರರು ಮತ ಚಲಾಯಿಸಿದ್ದಾರೆ.
2017 ರಲ್ಲಿ ಶೇ.75.6ರಷ್ಟು ಮತದಾನವಾಗಿತ್ತು. ಗುಡ್ಡಗಾಡು ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ 55 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಶನಿವಾರ ಬೆಳಗ್ಗೆ 8 ಗಂಟೆಗೆ ನಿಧಾನಗತಿಯಲ್ಲಿ ಮತದಾನ ಆರಂಭವಾಯಿತು ಆದರೆ ದಿನ ಕಳೆದಂತೆ ಚುರುಕುಗೊಂಡಿತು.
ಮೊದಲ ಗಂಟೆಯಲ್ಲಿ ಶೇಕಡ 5ರಷ್ಟು ಮತದಾನವಾಗಿದ್ದು, ಬೆಳಗ್ಗೆ 11 ಗಂಟೆ ವೇಳೆಗೆ ಶೇ 17.98ರಷ್ಟು ಮತದಾನವಾಗಿದೆ. ಇದು ಮಧ್ಯಾಹ್ನ 1 ಗಂಟೆಯ ವೇಳೆಗೆ 37.19 ಪ್ರತಿಶತ ಮತ್ತು 3 ಗಂಟೆಯವರೆಗೆ 55.65 ಪ್ರತಿಶತದವರೆಗೆ ತಲುಪಿತು.
ರಾಜ್ಯ ಚುನಾವಣಾ ಅಧಿಕಾರಿಗಳು ಒದಗಿಸಿರುವ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ ಸಂಜೆ 5 ಗಂಟೆಯವರೆಗೆ ಶೇ.66.58 ರಷ್ಟು ಮತದಾನವಾಗಿದೆ.








