Himachal pradesh election result : BJP ಮಿಷನ್ ‘ರಿಪೀಟ್’ ಮಿಷನ್ ‘ಇಂಪಾಸಿಬಲ್’..!!!
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ 2022 ನೇ ಸಾಲಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ..
ಬೆಳಿಗ್ಗೆ ಇಂದಲೇ ಮತ ಎಣಿಕೆ ನಡೆಯುತ್ತಿದೆ..
ಗುಜರಾತ್ ನಲ್ಲಿ ಈಗಾಗಲೇ ಬಿಜೆಪಿ ಲೀಡ್ ನಲ್ಲಿದ್ದು , ಸತತ 7 ನೇ ಬಾರಿಗೆ ಗುಜರಾತ್ ನಲ್ಲಿ ಬಿಜೆಪಿಯೇ ಅಧಿಕಾರದ ಗದ್ದುಗೇರುವುದು ಖಚಿತವಾಗಿದೆ..
ಇತ್ತ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವಂತೆ ಕಾಣುತ್ತಿದೆ… ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಲೀಡ್ ನಲ್ಲಿದೆ.. ಆಡಳಿತ ರೂಢ ಪಕ್ಷ ಬಿಜೆಪಿಗೆ ಬಹುತೇಕ ಹಿನ್ನೆಡೆಯಾಗುವ ಸಾಧ್ಯತೆಯಿದೆ..
ಸದ್ಯಕ್ಕೆ
ಬಿಜೆಪಿ – 28
ಕಾಂಗ್ರೆಸ್ – 37
ಆಪ್ -0
ಇತರೇ 3
ಹಾಗೆ ನೋಡಿದ್ರೆ ಹಿಮಾಚಲ ಪ್ರದೇಶ ರಾಜಕೀಯ , ಎಲೆಕ್ಷನ್ ಇತಿಹಾಸ ವಿಶೇಷತೆ ನೋಡಿದ್ರೆ , ಹಿಮಾಚಲ ಪ್ರದೇಶದಲ್ಲಿ 30 ವರ್ಷಗಳಿಂದ ಯಾವ ಪಕ್ಷವೂ ಸತತವಾಗಿ ಎರಡು ಬಾರಿ ಅಧಿಕಾರದ ಗದ್ದುಗೇರಿಲ್ಲ.. ಈ ಟ್ರೆಂಡ್ ಬ್ರೇಕ್ ಮಾಡಲು ಬಿಜೆಪಿ ಮಿಷನ್ ರಿಪೀಟ್ ಅಭಿಯಾನವೂ ವಿಫಲವಾದಂತೆ ಕಾಣ್ತಿದೆ.. ಸ್ಪಷ್ಟ ಬಹುಮತ ಸಿಕ್ಕಿ ಕಾಂಗ್ರೆಸ್ ಈ ಬಾರಿ ಹಿಮಾಚಲ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ..
ಮ್ಯಾಜಿಕ್ ನಂಬರ್ 35 ಆಗಿದ್ದು , ಸದ್ಯಕ್ಕೆ ಕಾಂಗ್ರೆಸ್ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು , ಸಂಜೆ ವೇಳೆಗೆ ಒಂದು ಕಂಪ್ಲೀಟ್ ವಚಿತ್ರಣ ಸಿಗಲಿದೆ..
ಅಂದ್ಹಾಗೆ ಆಪ್ ಹಿಮಾಚಲ ಪ್ರದೇಶದಲ್ಲಿ ಖಾತೆಯನ್ನೇ ತೆರೆದಿಲ್ಲ… ಆಮ್ ಆದ್ಮಿ ಪಾರ್ಟಿಯ ಜಾದೂ ಗುಡ್ಡ ಗಾಡು ರಾಜ್ಯದಲ್ಲಿ ನಡೆಯಲಿಲ್ಲ….
Himachal pradesh election result , congress leads








