ಹಿಮಾಚಲ ಪ್ರದೇಶದಲ್ಲಿ ಇನ್ನೂ ಮುಂದೆ ಮಾಸ್ಕ್ ಕಡ್ಡಾಯವಲ್ಲ
ರಾಜ್ಯದಲ್ಲಿ ಕರೋನವೈರಸ್ ಪ್ರಕರಣಗಳಲ್ಲಿ ತೀವ್ರ ಕುಸಿತದ ನಂತರ ಹಿಮಾಚಲ ಪ್ರದೇಶ ಸರ್ಕಾರವು COVID-19 ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಆದರೆ ಮಾಸ್ಕ್ ಬಳಸುವುದನ್ನು ಮುಂದುವರಿಸಲು ಮತ್ತು ಕೈ ಸ್ವಚ್ಛತೆಯನ್ನ ಕಾಪಾಡಿಕೊಳ್ಳಲು ಜನರಿಗೆ ಸಲಹೆ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ.
“ರಾಜ್ಯದಲ್ಲಿನ ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಗಮನಿಸಿ ಮತ್ತು ಪಾಸಿಟಿವಿಟಿ ದರದಲ್ಲಿ ಕುಸಿತ ಕಂಡ ಕಾರಣ, ಒಟ್ಟಾರೆ ಸುಧಾರಣೆ ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರದ ಸನ್ನದ್ಧತೆಯನ್ನು ಪರಿಗಣಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.
“ಆದ್ದರಿಂದ, ರಾಜ್ಯ ಕಾರ್ಯಕಾರಿ ಸಮಿತಿ (SEC) ಹೊರಡಿಸಿದ್ದ COVID-19 ನಿಯಂತ್ರಣದ ಎಲ್ಲಾ ನಿರ್ಬಂಧಗಳನ್ನು ಈ ಮೂಲಕ ಹಿಂಪಡೆಯಲಾಗಿದೆ.”
ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಉಲ್ಬಣವು ಕಂಡುಬಂದಲ್ಲಿ, ಕಾಲಕಾಲಕ್ಕೆ ಆರೋಗ್ಯ ಸಚಿವಾಲಯವು ಸಲಹೆ ನೀಡಿದಂತೆ ಸ್ಥಳೀಯ ಮಟ್ಟದಲ್ಲಿ ತ್ವರಿತ ಮತ್ತು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದನ್ನು DDMA ಪರಿಗಣಿಸಬಹುದು ಎಂದು ಹೇಳಿದೆ.







