Himachal Rain: ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟ, ಪ್ರವಾದಲ್ಲಿ ನಾಲ್ಕು ಮಂದಿ ನಾಪತ್ತೆ…
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಭುಂತರ್ ಮಾರ್ಗ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಮಣಿಕರಣ್ ಕಣಿವೆಯ ಚೋಜ್ ನಾಲಾದಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ 4 ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆಯಲ್ಲಿ 3 ಮನೆ, 1 ಅತಿಥಿ ಗೃಹ, 3 ಕ್ಯಾಂಪಿಂಗ್ ಸೈಟ್, 1 ಗೋಶಾಲೆ ಸೇರಿದಂತೆ 4 ಹಸುಗಳು ಕೊಚ್ಚಿ ಹೋಗಿವೆ.. Himachal Rain: Cloudburst in Himachal Pradesh, four missing
https://twitter.com/i/status/1544541715629244416
ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಜಿಲ್ಲಾಡಳಿತ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿವೆ. ಹಾನಿಯ ಅವಲೋಕನಕ್ಕೆ ಬಂದ ಜಿಲ್ಲಾಡಳಿತ ತಂಡ ಸೇರಿದಂತೆ ಅಗ್ನಿಶಾಮಕ ದಳದ ವಾಹನಗಳು ಸಹ ಪ್ರವಾಹದಲ್ಲಿ ಸಿಲುಕಿಕೊಂಡಿವೆ. ಭೂಕುಸಿತದಿಂದ ರಸ್ತೆಯನ್ನು ಮುಚ್ಚಲಾಗಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ.
https://twitter.com/i/status/1544561422033530884
ಮತ್ತೊಂದೆಡೆ ಪಾರ್ವತಿ ನದಿಯ ಸೇತುವೆ ಕೊಚ್ಚಿ ಹೋಗಿದ್ದರಿಂದ ಚೋಜ್ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಪಾರ್ವತಿ ನದಿ ಮತ್ತು ಚೋಜ್ ನಾಲಾ ಸಂಗಮ ಸ್ಥಳದಲ್ಲಿ ನಿರ್ಮಿಸಲಾದ ಮನೆಗಳು ಮತ್ತು ರೆಸ್ಟೋರೆಂಟ್‌ಗಳು ಕೊಚ್ಚಿಹೋಗಿವೆ. ಈ ಮನೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಎಷ್ಟು ಜನರು ಇದ್ದರು, ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ.
https://twitter.com/i/status/1544550992472989696
ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸೈಂಜ್ ಕಣಿವೆಯಲ್ಲಿ ಹಲವು ರಸ್ತೆಗಳು ಬಂದ್ ಆಗಿವೆ. ಶಂಶಾರ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಇದಲ್ಲದೆ, ಬಂಜಾರ್, ಅನಿ, ಕುಲು ಮತ್ತು ಮನಾಲಿ ಪ್ರದೇಶಗಳಲ್ಲಿನ ಅನೇಕ ರಸ್ತೆಗಳು ಭೂಕುಸಿತದಿಂದ ಮುಚ್ಚಲ್ಪಟ್ಟಿವೆ ಎಂದು ವರದಿಯಾಗಿದೆ.








