ಪ್ರಧಾನಿ ಹಿಂದೂ ಧರ್ಮವನ್ನ ಮರೆತಿದ್ದಾರೆ, ಚುನಾವಣೆಗೂ ಮುನ್ನ ಸಂತನಂತೆ ಪೋಸ್ ಕೊಡುತ್ತಾರೆ – ಮಮತಾ ಬ್ಯಾನರ್ಜಿ..
ಒಂದು ಕಡೆ ದೇಶದಲ್ಲಿ ಹಿಂದೂ ಧರ್ಮವನ್ನು ನಾಶಪಡಿಸಲಾಗುತ್ತಿದೆ. ಆದರೆ, ಚುನಾವಣಾ ಸಮಯದಲ್ಲಿ ಮತಗಳನ್ನು ಗಳಿಸಲು ಪ್ರಧಾನಿ ಮೋದಿ “ಸಂತ” ನಂತೆ ಪೋಸ್ ನೀಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಸತ್ಯ ಮತ್ತು ಇತಿಹಾಸವನ್ನು ಬದಲಾಯಿಸುತ್ತಿದೆ ಮತ್ತು ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠರು ಆರೋಪಿಸಿದ್ದಾರೆ. Hinduism being forgotten but PM poses as sant before polls: Mamata Banerjee.
“ಅವರು [ಬಿಜೆಪಿ] ಎಲ್ಲವನ್ನೂ ನಾಶಪಡಿಸುತ್ತಿದ್ದಾರೆ. ಇತಿಹಾಸ ಬದಲಾಗಿದೆ. ದಲಿತರು, ಆದಿವಾಸಿಗಳನ್ನ ಹಿಂಸಿಸುತ್ತಿದ್ದಾರೆ. ಮೂಲ ಹಿಂದೂ ಧರ್ಮವನ್ನು ಮರೆಯಲಾಗುತ್ತಿದೆ, ಆದರೆ ಚುನಾವಣೆ ಬಂದಾಗ ಅವರು (ಪ್ರಧಾನಿ ಮೋದಿ) ‘ಸಾಧು’ ಆಗುತ್ತಾರೆ. ಅವರು ‘ಸಂತ’ರಂತೆ ಪೋಸ್ ಕೊಡುತ್ತಾರೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಂಡಿಯಾ ಗೇಟ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯ ಕುರಿತು ಮಾತನಾಡಿದ ಮಮತ “ಮೋದಿ ಮೊದಲು ದೆಹಲಿಯಲ್ಲಿ ಅಮರ್ ಜವಾನ್ ಜ್ಯೋತಿಯನ್ನು ತೆಗೆದು ನೇತಾಜಿ ಅವರ ಹೊಲೊಗ್ರಾಮ್ ಅನ್ನು ಹಾಕಿದರು. ಈಗ ಹೊಲೊಗ್ರಾಮ್ ಕೂಡ ಕಾಣೆಯಾಗಿದೆ. ಚುನಾವಣೆ ಬಂದಾಗ ಅವರು ಐಕಾನ್ ಹೆಸರುಗಳನ್ನ ನೆನಪಿಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.








