ಅದ್ಭುತ ಔಷಧೀಯ ಸಸ್ಯ “ಹಿಪ್ಪಲಿ” ಯಲ್ಲಿದೆ ದೀರ್ಘಾಯುಷ್ಯದ ಗುಟ್ಟು…!
ಹಿಪ್ಪಲಿ, ಇದು ಒಂದು ಅದ್ಭುತ ಔಷಧೀಯ ಸಸ್ಯ. ಇದು ನೆಲದ ಮೇಲೆ ಹರಡುವಂತಹ ಔಷಧೀಯ ಸಸ್ಯ. ಇದನ್ನು ಒಣಗಿಸಿ ಮಸಾಲೆ ಪದಾರ್ಥವಾಗಿಯೂ ಬಳಸಲಾಗುತ್ತದೆ. ಇದು ಪೈಪರೇಸಿಯ ಎಂಬ ಸಸ್ಯಜಾತಿಗೆ ಸೇರಿದ ಗಿಡವಾಗಿದ್ದು, 5 ಅಥವಾ 6ನೇ ಶತಮಾನದಲ್ಲಿ ಗ್ರೀಸ್ ದೇಶವನ್ನು ತಲುಪಿತು ಎಂದು ಹೇಳಲಾಗುತ್ತದೆ. ದಿಢೀರೆಂದು ನೋಡಿದರೆ ಕಾಳುಮೆಣಸಿನ ಜಾತಿಗೆ ಇದು ಸೇರಿದ್ದೇನೋ ಎಂಬಂತಾಗುತ್ತದೆಯಾದರೂ ಕಾಳುಮೆಣಸು ಮತ್ತು ಹಿಪ್ಪಲಿ ಎರಡೂ ಸಂಪೂರ್ಣ ವಿಭಿನ್ನ.
ಇನ್ನು ಈ ಹಿಪ್ಪಲಿಯನ್ನು ಹಿಪ್ಲಿ, ಕುನಾ ಎಂದೂ ಸಹ ಕರೆಯಲಾಗುತ್ತದೆ. ಆಂಗ್ಲಭಾಷೆಯಲ್ಲಿ ಇದನ್ನು ಲಾಂಗ್ ಪೆಪ್ಪರ್ ಎಂದು ಕರೆಯುತ್ತಾರೆ. ಈ ಹಿಪ್ಪಲಿ ಸ್ತನ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಕೊಲೋನ್, ಲ್ಯುಕೇಮಿಯಾ, ಪ್ರಾಥಮಿಕ ಮೆದುಳಿನ ಗಡ್ಡೆಗಳು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಔಷಧವಾಗಿ ಉಪಯೋಗಕ್ಕೆ ಬರುತ್ತದೆ. ಅಸ್ತಮಾ ಸಮಸ್ಯೆಗೆ ಉತ್ತಮ ಗಿಡಮೂಲಿಕೆಯಾಗಿದೆ. ಕೂದಲು ಸಮೃದ್ಧವಾಗಿ ಬೆಳೆಯುವಲ್ಲೂ ಹಿಪ್ಪಲಿ ಸಹಕಾರಿ. ದೇಹದಲ್ಲಿನ ತ್ಯಜ್ಯವನ್ನು ಸಮರ್ಪಕವಾಗಿ ಇದು ನಿವಾರಿಸುತ್ತದೆ. ಗಂಟಲು ನೋವಿನಿಂದ ಬಳಲುವವರಿಗೂ ಇದು ರಾಮಬಾಣ. ರಕ್ತ ಹೀನತೆ ಮತ್ತು ರಕ್ತ ಪರಿಚಲನೆಗೆ ಇದು ಉಪಯುಕ್ತ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನು ಕೇಶವೃದ್ಧಿಗೂ ಬಳಸಲಾಗುತ್ತದೆ. ನಿಯಮಿತವಾಗಿ ಹಿಪ್ಪಲಿಯನ್ನು ಸೇವಿಸುವವರು ದಿರ್ಘಾಯುಷಿಗಳಾಗುತ್ತಾರೆ ಎನ್ನುವ ನಂಬಿಕೆಯಿದೆ. ನಿದ್ರಾಹೀನತೆಯಿಂದ ಬಳಲುವವರಿಗೂ ಇದು ಅತ್ಯುತ್ತಮವಾದ ಔಷದಿಯಾಗಿದ್ದು, ನರಗಳನ್ನು ಸೆಳೆದು ರಾತ್ರಿ ನಿದ್ದೆ ಬರುವ ಹಾಗೆ ಮಾಡುತ್ತದೆ. ಹಿಪ್ಪಲಿಕಾಯಿ ಮತ್ತು ಬೇರುಗಳನ್ನು ಸಂಧಿವಾತ ಮತ್ತು ಸೊಂಟ ನೋವು ನಿವಾರಿಸಲು, ಜ್ವರ ನಿವಾರಕ ಹಾಗೊ ಕಾಮೋತ್ತೇಜಕವಾಗಿ ಮತ್ತು ಶಕ್ತಿವರ್ಧಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಮಾಹಿತಿ ಮತ್ತು ಲೇಖನ: ಅಂಬಿಕಾ ಸೀತೂರು