ಕೇರಳ: ವಿಶ್ವವಿಖ್ಯಾತ ಶಬರಿ ಮಲೆ ಅಯ್ಯಪ್ಪನ ಸನ್ನಿಧಾನ ಬಾಗಿಲನ್ನು ಇಂದಿನಿಂದ 5 ದಿನಗಳ ವರೆಗೂ ಮಾಸಿಕ ವಿಷೇಶ ಪೂಜೆಗಾಗಿ ತೆರೆಯಲಾಗಿದೆ. ಇಂದಿನಿಂದ ಆಗಸ್ಟ್ 21ರ ವರೆಗೆ ಅಯ್ಯಪ್ಪ ಸ್ವಾಮಿಗೆ ಮಾಸಿಕ ವಿಶೇಷ ಪೂಜೆ ನೆರವೇರಿಸಲಾಗುತ್ತದೆ ಎಂದು ಟ್ರವಾಂಕುರ್ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಎನ್.ವಾಸು ತಿಳಿಸಿದ್ದಾರೆ. ಇನ್ನೂ ಕೊರೊನಾ ಹಾವಳಿ ಹಿನ್ನೆಲೆ ಆಡಳಿತ ಮಂಡಳಿ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಭಗವಂತನ ದರ್ಶನಕ್ಕೆ ದೇಗುಲಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಲೇ ಬೇಕಾಗಿದೆ. ಅಲ್ಲದೇ ದೇವಾಲಯಕ್ಕೆ ಬರುವ ಮೊದಲು ಕೊರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದಿರುವ ಪ್ರಮಾಣ ಪತ್ರ ತೋರಿಸಬೇಕಿದೆ. ಇನ್ನೂ ಇಂದಿನಿಂದ ಆ. 21 ರವರೆಗೂ ದೇಗುಲ ಓಪನ್ ಇರಲಿದೆ. ಬಳಿಕ ಓಣಂ ಪ್ರಯುಕ್ತ ಮತ್ತೆ ಆ.29 ರಿಂದ ಸೆ.2ರ ವರೆಗೆ ದೇವಸ್ಥಾನವನ್ನು ತೆರೆಯಲಾಗುತ್ತದೆ.









