ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಕೊಟ್ಟೂರು ಪಟ್ಟಣದ ಮಧ್ಯ ಭಾಗದಲ್ಲಿ ಶ್ರೀ ಗುರು ಬಸವೇಶ್ವರಸ್ವಾಮಿ ದೇವಸ್ಥಾನವು ಇರುತ್ತದೆ. ಶ್ರೀ ಗುರು ಬಸವೇಶ್ವರಸ್ವಾಮಿ ದೇವಸ್ಥಾನವು ಮೂಲ ದೇವರು ಶ್ರೀ ವೀರಭದ್ರೇಶ್ವರ ದೇವಾಲಯವು ಸುಮಾರು 5ನೇ ಶತಮಾನದ ದೇವಾಲಯ ನಂತರ ಶ್ರೀ ಗುರು ಬಸವೇಶ್ವರ( ಶ್ರೀ ಕೊಟ್ಟೂರೇಶ್ವರ ) ದೇವಾಲಯವು ನಿರ್ಮಾಣ ಸುಮಾರು 1560 ರಿಂದ 1600 ನೇ ಶತಮಾನದ ದೇವಾಲಯವಾಗಿರುತ್ತದೆ. ಇಲ್ಲಿಗೆ 500 ರಿಂದ 550 ವರ್ಷಗಳಾದವು ಮತ್ತು ಹರಪನಹಳ್ಳಿಯ ಸೋಮಶೇಖರ ರಾಜನು ಭಕ್ತಿಯಿಂದ ದೇವಾಲಯವನ್ನು ನಿರ್ಮಿಸಿಕೊಟ್ಟಿರುತ್ತಾನೆ. ಏಕೆಂದರೇ ಮೇದಕೇರಿ ಸೈನವು ದಂಡೆತ್ತಿ ಬಂದಾಗ ಅವರಿಗೆ ಅನೇಕ ಜಂಗಮರ ರೂಪತಾಳಿ ಶತೃ ಸೈನವನ್ನು ಇಮ್ಮೆಟ್ಟಿಸಿ ಅವರಿಂದ ಸೋಮಶೇಖರ ರಾಜನನ್ನು ರಕ್ಷಿಸಿದ್ದರು.
ಮೂಲ ಮೂರ್ತಿ ವೀರಭದ್ರೇಶ್ವರನ ಮೂರ್ತಿ ಪುರ-ದೇವರು ಪ್ರತಿಷ್ಟಾಸಿದ್ದ ನಂತರ ಶ್ರೀ ಗುರು ಕೊಟ್ಟೂರೇಶ್ವರರು ಸಿದ್ದ ಪುರುಷರು ವಿಭೂತಿಯ ಸುತ್ತವರಿದು ಲೋಹದ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠೆಮಾಡಿ ಇದೇ ಉತ್ಸವಮೂರ್ತಿಯಾಗಿರುತ್ತದೆ. ಭಕ್ತರ ಇಚ್ಚಿಸಿದ ಕಾರ್ಯ ನೆರವೇರಲು, ಭಕ್ತರ ಕೋರಿಕೆ ಈಡೇರಲು ಇಹಲೋಕದ ಸುಖ-ಪರ ಲೋಕದ ಸುಖ ದೊರೆಯಲು ವೀರಶೈವ ಧರ್ಮದ ಮೂಲ ತತ್ವಗಳಾದ ಅಷ್ಠಾವರಣ-ಷಟಸ್ಠಲ-ಪಂಚಾಚಾರ ಸಿದ್ದಾಂತಗಳ ತತ್ವವದ ಮಹತ್ವ ತಿಳಿಸಲು ಸಿಂಹಾಸನದ ಮೇಲೆ ವಿರಾಜಮಾನವಾಗಿದೆ. ಮತ್ತು ಮೂಲ ಶ್ರೀ ವೀರಭದ್ರೇಶ್ವರನುಡಿಯನ್ನು 16ನೇ ಶತಮಾನದಲ್ಲಿ ಹರಪನಹಳ್ಳಿಯ ಪಾಳೇಗಾರರಾದ ಸೋಮಶೇಖರ ರಾಜನು ನಿರ್ಮಿಸಿದ್ದಾನೆ ಎಂಬ ಪ್ರತೀತಿ ಇದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಶ್ರೀ ಗುರು ಬಸವೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರು ವಿಶೇಷವಾಗಿ ಸೋಮವಾರ, ಗುರುವಾರ, ಅಮವಾಸ್ಯೆ ಹಬ್ಬಗಳು ವಿಶೇಷವಾಗಿ ಭಕ್ತಾಧಿಗಳು ಆಗಮಿಸುತ್ತಾರೆ. ಕಾರ್ತಿಕ ಮಾಸದಲ್ಲಿ “ ಕೊಟ್ಟೂರೇಶ ಲಿಂಗಮಾಲ” ಧರಿಸಿ ಕಾರ್ತಿಕ ಮಾಸ ಪರ್ಯಂತರ ಆಚರಿಸಿ ಕಾರ್ತಿಕ ಮಾಸ ಮುಗಿಯುವರೆಗೆ ಆಚರಿಸಿ ತಮ್ಮ ಇಷ್ಟದ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತಾರೆ. ಬಹಳ ವಿಶೇಷವಾಗಿ ಮಾಘ ಮಾಸದ ಮೂಲ ನಕ್ಷತ್ರದಲ್ಲಿ ಶ್ರೀ ಸ್ವಾಮಿಯ ಮಹಾರಥೋತ್ಸವಕ್ಕೆ ದೂರದ ಊರು ಪಟ್ಟಣದದಿಂದ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಕೊಳ್ಳಲು “ಪಾದಯಾತ್ರೆ” ಯಿಂದ ಬರಿಗಾಲಿನಿಂದ ಬೆತ್ತ ಹಿಡಿದು ಕೊಟ್ಟೂರೇಶ್ವರರ ನಾಮ ಜಪಿಸುತ್ತಾ, ಲಕ್ಷಲಕ್ಷ ಜನರು ಕೊಟ್ಟೂರಿಗೆ ಆಗಮಿಸುತ್ತಾರೆ. ಈ ದೃಶ್ಯ ನೋಡಲು ಬಹು ವಿಹಂಗಮ ಮತ್ತು ಆಶ್ಚರ್ಯಕರ ವಾಗಿರುತ್ತದೆ.
ಈ ಹಿಂದಿನ ಕಾಲದಲ್ಲಿ ಸಾವಿರಾರು ಜನ (ಬಂಡಿ) ಎತ್ತಿನಗಾಡಿಯನ್ನು ಕಟ್ಟಿಕೊಂಡು ಕುಟುಂಬ ಸಮೇತ ಬಂದು 2-3 ದಿನ ಇದ್ದು ಸಿಹಿಯನ್ನು ಮಾಡಿ ಜಂಗಮರಿಗೆ ಪ್ರಸಾದ – ದಕ್ಷಿಣೆ ಕೊಟ್ಟು “ಗಣಂಗಳ ತೃಪ್ತಿ “ ಮಾಡಿಸುತ್ತಿದ್ದರು. ಶ್ರಾವಣಮಾಸದಲ್ಲಿ ರುದ್ರಾಭಿಷೇಕ ಮಾಡಿಸಿ ದಾಸೋಹ ಮಾಡಿಸುತ್ತಾರೆ.
ವಿಶೇಷವಾಗಿ ಶ್ರೀ ಸ್ವಾಮಿಗೆ ನಿತ್ಯ ರುದ್ರಾಬಿಷೇಕ ಪೂಜಾ, ಪಂಚಾಮೃತ ಅಭಿಷೇಕ ಪೂಜಾ, ಅಷ್ಟೋತ್ತರ ನಾಮವಳಿ ಪೂಜಾ, ಮಹಾಮಂಗಳಾರತಿ ಪೂಜಾ ಎಲೆ ಪೂಜೆ ಮತ್ತು ದೀಪಾರಾಧನೆ ಪೂಜಾ ಹೂವು-ಹಣ್ಣಿನ ಅಲಂಕಾರದ ಪೂಜೆಗಳನ್ನು ಮಾಡುತ್ತಾರೆ. ಮತ್ತು ಶ್ರೀ ಸ್ವಾಮಿಗೆ ಮೂರು ಪೂಜಾ ಸಮಯದಲ್ಲಿ ಜಂಗಮ ಕ್ರೀಯಾಮೂರ್ತಿಗಳಿಂದ ಪಾದೋತಕ ಪ್ರಸಾದ ನೀಡುತ್ತಾರೆ.
ದೇವಾಲಯದ ಹಳೆಯ ಗ್ರಂಥದ ಪ್ರಕಾರ ಕೊಟ್ಟೂರು ಬಸವೇಶ್ವರ ಚಾರಿತ್ರ ಬಸವಲಿಂಗ ಕವಿ ರಚಿಸಿರುವ ಪುರಾಣವಿದೆ. ಹಾಗೂ ಗಚ್ಚಿನ ಮಠದಲ್ಲಿ ( ಕೊಟ್ಟೂರೇಶ್ವರರು ) ಜೀವಂತ ಸಮಾಧಿಮಠ ಶಾಸನದ ಲಿಪಿ ಇದೆ. ಮತ್ತು ಶಿವನಿಗೆ ಸಂಭAದಿಸಿದ ಚಿತ್ರಗಳು ವೀರಭದ್ರೇಶ್ವರನ ವಿಶೇಷ ಭಂಗಿಯ ಚಿತ್ರöಗಳು ಬಸವಣ್ಣನ ಮೂರ್ತಿಗಳು ಹಾಗೂ ಕಂಬದಲ್ಲಿ ಚೌಡಮ್ಮದೇವಿ ಮತ್ತು ಗುಡಿಯ ಮೇಲೆ ಜುಂಜಪ್ಪ ದೇವರು ಇರುತದ್ತೆ. ಮತ್ತು ಈಗಲೂ ಕಾಣಬಹುದಾಗಿದೆ. ವಿಶೇಷವಾಗಿ ಮಡಿನೀರು ಸುರಿಯುವುದು, ಕಾರ್ತೀಕೋತ್ಸವ ಸಮಯದಲ್ಲಿ ಒಣ ಕೊಬ್ಬರಿ ಸುಡುವುದು, ಡೀಡುನಮಸ್ಕಾರ ಹಾಕುವುದು ಕಾತೀಕ ದೀಪ ಹಚ್ಚುವುದು. ಹಾಗೂ ಪ್ರಸಾದ ರೂಪದಲ್ಲಿ ಶ್ರೀ ಸ್ವಾಮಿಯ ಆರ್ಶಿವಾದ ಕಾಯಿಗಳಉ ಮತ್ತು ಪಾದೋದಕ ಸೇವನೆಯು ಸಹ ನಡೆಯುತ್ತದೆ ಎಂದು ತಿಳಿದುಬಂದಿದೆ.
ಬಾಗಿಲು ತೆರೆಯುವ ಸಮಯ:
05:00 AM IST – 10:00 AM IST
05:00 AM IST – 10:00 AM IST
ಬಾಗಿಲು ಮುಚ್ಚುವ ಸಮಯ:
10:00 PM IST – 10:00 PM IST
ಸಾಮಾನ್ಯ ದರ್ಶನ