ಶ್ರೀಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನವು ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ವಂದಾರಗುಪ್ಪೆ ಗ್ರಾಮದ ಹೊರಭಾಗದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಬೆಂಗಳೂರಿನಿಂದ 55 ಕಿ.ಮೀ. ದೂರ, ಮೈಸೂರಿನಿಂದ 85 ಕಿ.ಮೀ.ದೂರದಲ್ಲಿದೆ. ರಾಮನಗರ ಜಿಲ್ಲಾ ಕೇಂದ್ರದಿಂದ 6 ಕಿ.ಮೀ. ಮತ್ತು ಚನ್ನಪಟ್ಟಣ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ.ದೂರದಲ್ಲಿದೆ.
ಶ್ರೀಕೆಂಗಲ್ ಆಂಜನೇಯಸ್ವಾಮಿ ದೇವಾಲಯವು ಶ್ರೀಮಹರ್ಷಿ ಕಣ್ವ ಮುನಿಗಳಿಂದ ಆರಾಧಿಸಲ್ಪಟ್ಟ ದೇವಾಲಯವೆಂದು ಜನಜನಿತವಾಗಿದೆ. ಈ ದೇವಾಲಯವು ಕ್ರಿ.ಶ. ಸುಮಾರು 12ನೇ ಶತಮಾನಕ್ಕೆ ಸೇರಿದ ಪುರಾತನ ದೇವಾಲಯ ಎಂಬುದು ನಂಬಿಕೆಯಾಗಿದೆ. ಈ ಬಗ್ಗೆ ಯಾವುದೇ ಐತಿಹಾಸಿಕ ಅಥವಾ ಪೌರಾಣಿಕ ದಾಖಲೆಗಳು ಲಭ್ಯವಿರುವುದಿಲ್ಲ. ಶ್ರೀ ವ್ಯಾಸರಾಯರಿಂದ ಆರಾಧಿಸಲ್ಪಟ್ಟ ಶ್ರೀಕೆಂಗಲ್ ಆಂಜನೇಯಸ್ವಾಮಿ ದೇವಾಲಯವು ಅಯ್ಯನಗುಡಿ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಪ್ರತಿ ನಿತ್ಯ ಸಾವಿರಾರು ಭಕ್ತರು ಆಗಮಿಸುವ ಶ್ರೀಕ್ಷೇತ್ರದ ಸ್ವಾಮಿಯವರು ಕೆಂಪು ಕಲ್ಲಿನಲ್ಲಿ ಉಧ್ಬವವಾಗಿರುವುದರಿಂದ ಶ್ರೀಕೆಂಗಲ್ ಆಂಜನೇಯ ಎಂಬ ಹೆಸರೂ ಕ್ರಮೇಣ ರೂಢಿಗೆ ಬಂದಿರುತ್ತದೆ.
ಪ್ರಸ್ತುತ ಶ್ರೀಕೆಂಗಲ್ ಆಂಜನೇಯಸ್ವಾಮಿ ಎಂದೇ ಕರೆಯಲ್ಪಡುತ್ತಿರುವ ಶ್ರೀಯವರು ಉತ್ತರಾಭಿಮುಖವಾಗಿ ನೋಡುತ್ತಿದ್ದು, ಕ್ರಮೇಣ ಈಶಾನ್ಯ ದಿಕ್ಕಿಗೆ ತಿರುಗುತ್ತಿರುವುದಾಗಿ ಭಕ್ತಾದಿಗಳು ಗಮನಿಸಿರುವ ಪವಾಡವಾಗಿದೆ. ಸಾಮಾನ್ಯವಾಗಿ ಶ್ರೀಆಂಜನೇಯಸ್ವಾಮಿ ದೇವಾಲಯಗಳು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿರುವುದು ಕಂಡು ಬರುತ್ತದೆ. ಆದರೆ ಶ್ರೀಕ್ಷೇತ್ರದಲ್ಲಿ ಪೂರ್ವಾಭಿಮುಖ ದೇವಸ್ಥಾನವಾಗಿರುವುದೂ ಒಂದು ವಿಶೇಷವಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಶ್ರೀಕ್ಷೇತ್ರದಲ್ಲಿ ಮಾತ್ರ ಕಾಣಸಿಗುವ ಕೆಂಪು ಬಣ್ಣದ ಏಕಶಿಲೆಯ ಕಲ್ಲಿನಲ್ಲಿ ಉಧ್ಬವವಾಗಿರುವ ಸ್ವಾಮಿಯವರಿಗೆ ಶಂಖು ಚಕ್ರ, ಬಾಲದಲ್ಲಿ ಗಂಟೆ ಇರುತ್ತದೆ. ಸ್ವಾಮಿಯವರ ಎಡಭಾಗದಲ್ಲಿ ಸೌಗಂಧಿಕ ಪುಷ್ಪವನ್ನು ಕಾಣಬಹುದು. ಶ್ರೀ ಹನುಮಂತ ದೇವರು ಆಯಾಸ ನಿವಾರಣೆಗಾಗಿ ರಕ್ತಚಂದನವನ್ನು ದೇಹಕ್ಕೆ ಲೇಪನ ಮಾಡಿಕೊಂಡು ಶ್ರೀಕ್ಷೇತ್ರದ ಕೆಂಪು ಕಲ್ಲಿನಲ್ಲಿ ನೆಲೆಸಿದರು ಎಂಬುದು ನಂಬಿಕೆಯಾಗಿದೆ. ಸ್ವಾಮಿಯವರ ಆಲಯದಲ್ಲಿ ಕೋದಂಡರಾಮ ಸಹಿತ ಸೀತಾ ಲಕ್ಷ್ಮಣರು ಹಾಗೂ ಲಕ್ಷ್ಮೀ ಸಮೇತ ಶ್ರೀನರಸಿಂಹಸ್ವಾಮಿಯವರು ನೆಲೆಸಿದ್ದಾರೆ. ಹಾಗೂ ಶ್ರೀದೇವಿ-ಭೂದೇವಿ ಗರುಡನ ಸಮೇತ ಶ್ರೀವೆಂಕಟರಮಣಸ್ವಾಮಿಯವರು ಸಹ ನೆಲೆಗೊಂಡಿರುತ್ತಾರೆ.
ಪ್ರತಿ ವರ್ಷ ಉತ್ತರಾಯಣ ಪುಣ್ಯಕಾಲ ಆರಂಭಗೊಳ್ಳುವ ಸಂಕ್ರಾಂತಿ ಸಮಯದಲ್ಲಿ ಪಾಂಚಾರಾತ್ರಾಗಮ ರೀತ್ಯ ಜಾತ್ರಾ ಮಹೋತ್ಸವವು ಬಹಳ ವಿಜೃಂಬಣೆಯಿಂದ ನಡೆಯುತ್ತದೆ. ಉತ್ತರಾಯಣ ಪುಣ್ಯ ಕಾಲದ ಮೊದಲ ದಿನ ಸೂರ್ಯನ ಕಿರಣಗಳು ಸ್ವಾಮಿಯವರ ಪಾದ ಸ್ಪರ್ಶ ಮಾಡುವುದು ವಿಶೇಷವಾಗಿದೆ. ಸುಪ್ರಸಿದ್ಧ ಬಾರಿ ದನಗಳ ಜಾತ್ರೆ ಈ ಸಮಯದಲ್ಲಿಯೇ ನಡೆಯುತ್ತದೆ. ಅಯ್ಯನ ಗುಡಿ ದನಗಳ ಜಾತ್ರೆ ಎಂದೇ ಪ್ರಸಿದ್ದವಾಗಿರುವ ಈ ಜಾತ್ರೆಗೆ ಜಿಲ್ಲೆ- ಹೊರಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ದನಗಳನ್ನು ಮಾರುವವರು ಹಾಗೂ ಕೊಂಡುಕೊಳ್ಳುವವರು ಆಗಮಿಸುತ್ತಾರೆ. ವಾರಗಳ ಕಾಲ ನಡೆಯುವ ಈ ಜಾತ್ರೆ ಬಗ್ಗೆ ಜನರಲ್ಲಿ ಒಂದು ನಂಬಿಕೆ ಇದೆ. ಶ್ರೀಕ್ಷೇತ್ರ ಸುತ್ತಲೂ ಹುಲಿಮುತ್ತಿಗೆ ಕಾಡು ಇದ್ದು, ಒಮ್ಮೆ ಬಡ ರೈತನೋರ್ವ ಹಸುವಿನ ಜೊತೆ ಪ್ರಯಾಣ ಮಾಡುತ್ತಿದ್ದಾಗ ರಾತ್ರಿಯಾದದ್ದರಿಂದ ಶ್ರೀಕ್ಷೇತ್ರದಲ್ಲಿ ಉಳಿದುಕೊಂಡಿದ್ದನಂತೆ. ಬೆಳಿಗ್ಗೆ ಎದ್ದು ನೋಡಿದಾಗ ಹಸು ಕಾಣೆಯಾಗಿರುವುದನ್ನು ಕಂಡು ಕಾಡಿನ ಎಲ್ಲಾ ಕಡೆ ಹುಡುಕಿದಾಗ ಎಲ್ಲೂ ಕಾಣಬರಲಿಲ್ಲವಂತೆ. ಕಡೆಗೆ ಬಡ ರೈತ ಸ್ವಾಮಿಯವರ ಮೊರೆ ಹೋದಾಗ ಅವನ ಹಸು ಮತ್ತು ಹುಲಿ ಶ್ರೀದೇವಾಲಯದ ಹಿಂಭಾಗದ ಕಾಡಿನಲ್ಲಿ ಒಂದೇ ಕಡೆ ಇದ್ದುದು ಕಂಡು ಬಂದಿತಂತೆ. ಈ ಪವಾಡವನ್ನು ಕಂಡು ಬೆರಗಾದ ರೈತ ಅಂದಿನಿಂದ ಶ್ರೀಕ್ಷೇತ್ರದಲ್ಲಿ ದನಗಳ ಜಾತ್ರೆ ಪ್ರಾರಂಭಿಸಿದನಂತೆ.
ಶ್ರೀಯವರಿಗೆ ಶ್ರಾವಣ ಮಾಸದ ಮೊದಲ ಶನಿವಾರ ಹಾಗೂ ಹನುಮ ಜಯಂತಿ ದಿವಸ ನವನೀತ (ಬೆಣ್ಣೆ) ಅಲಂಕಾರ ನಡೆಯುತ್ತದೆ. ಮಕ್ಕಳಾಗದವರಿಗೆ ಸಂತಾನ ಭಾಗ್ಯ, ಮದುವೆಯಾಗದವರಿಗೆ ಕಂಕಣ ಭಾಗ್ಯ ನೀಡುವ ರೋಗ ಬಾಧೆಗಳಿಗೆ ಸಂಜೀವಿನಿಯಾಗಿ ಅಭಯಾಸ್ಥ ಮೂರ್ತಿಯಾಗಿ ಸ್ವಾಮಿಯವರು ನೆಲೆಗೊಂಡಿದ್ದಾರೆ. ಭಕ್ತಾದಿಗಳು ಇಷ್ಟಾರ್ಥ ಸಿದ್ಧಿಗಾಗಿ ಮೊರೆ ಹೊತ್ತು 12 ಪ್ರದಕ್ಷಿಣೆ ಮಾಡಿದರೆ ಇಷ್ಟಾರ್ಥ ಈಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಬಾಗಿಲು ತೆರೆಯುವ ಸಮಯ:
06:30 AM IST – 08:30 PM IST
04:00 PM IST – 08:30 PM IST
ಬಾಗಿಲು ಮುಚ್ಚುವ ಸಮಯ:
02:00 PM IST – 04:00 PM IST
ಶ್ರೀ ದೇವಾಲಯದಲ್ಲಿ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಮತ್ತು 04.00 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ. ವಾರದ ಪ್ರತಿ ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ಬೆಳಿಗ್ಗೆ 7-00 ಗಂಟೆಯಿಂದ ರಾತ್ರಿ 8-30 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.