ಮಾಂಡವ್ಯ ಋಷಿಗಳು ವೇದಾರಣ್ಯದಲ್ಲಿ ತಪಸ್ಸನ್ನು ಆಚರಿಸಿರುವುದರಿಂದ ಮಾಂಡವ್ಯ ಕ್ಷೇತ್ರ, ಮಾಂಡವ್ಯ ನಗರ, ಮಂಡ್ಯ ಎಂದು ಹೆಸರಾಯಿತು. ಹಿಂದೆ ಗಂಗರು ತಲಕಾಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರವನ್ನು ಆಳ್ವಿಕೆ ಮಾಡಿಕೊಂಡು ಬರುತ್ತಿದ್ದರು. ಇವರು ಸ್ವತಂತ್ರರಾಗಿ ಕ್ರಿ.ಶ.350ರಿಂದ 550 ರವರೆಗೆ ನಂತರ, 1004ರವರೆಗೆ ಚಾಲುಕ್ಯರಿಗೆ ಸಾಮಂತರಾಗಿ ಆಳ್ವಿಕೆ ನಡೆಸಿದರು.
ಸಾಮಂತರಾಗಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು ಕ್ರಿ.ಶ.1001ರ ಅವಧಿಯಲ್ಲಿ ಇಂದ್ರವರ್ಮಾ ಎಂಬ ಪಾಳೇಗಾರ ಮಂಡ್ಯ ಪ್ರದೇಶವನ್ನು ಆಳ್ವಿಕೆ ನಡೆಸುತ್ತಿದ್ದನು ಇವನಿಗೆ ಸಂತಾನ ಪ್ರಾಪ್ತಿ ಇರಲಿಲ್ಲ. ಆಗ ಮಾಂಡವ್ಯ ಋಷಿಗಳನ್ನು ಕೇಳಿಕೊಂಡಾಗ ಅವರು ಲಕ್ಷ್ಮೀ ಸಮೇತನಾಗಿರುವ ಶ್ರೀ ಜನಾರ್ದನ ಸ್ವಾಮಿಯನ್ನು ಪ್ರತಿಷ್ಠಾಪಿಸು ಇದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಆಗ ಮಾಂಡವ್ಯ ಋಷಿಗಳ ಮಾರ್ಗದರ್ಶನದಂತೆ ಇಂದ್ರವರ್ಮಾನು ಶ್ರೀಲಕ್ಷ್ಮೀಜನಾರ್ದನಸ್ವಾಮಿಯವರನ್ನು ಪ್ರತಿಷ್ಠಾಪಿಸಿದನು. ಪ್ರತಿಷ್ಠಾಪಿಸಿದ ನಂತರ ಇಂದ್ರವರ್ಮನಿಗೆ ಪುತ್ರ ಸಂತಾನವಾಯಿತು. ಇದರ ನೆನಪಿಗಾಗಿ ಮಂಡ್ಯ ನಗರದಲ್ಲಿ ಕೋಟೆಯನ್ನು ನಿರ್ಮಾಣ ಮಾಡಿ ದಾನ ಧರ್ಮಗಳನ್ನು ಮಾಡಿದನು. ಈಗ ಕೋಟೆ ಇಲ್ಲದಿದ್ದರೂ ವೀರಗಲ್ಲು ಮಾತ್ರ ಹೆಬ್ಬಾಗಿಲಿನ ಬಳಿ ಕಾಣಬಹುದಾಗಿದೆ. ದೇವರಿಗೆ ನಡೆಯುವ ಚರ್ತುಬೀದಿ ನಾಲ್ಕು ಬೀದಿಯ ಉತ್ಸವಕ್ಕೆ ಕೋಟೆ ಉತ್ಸವ ಎಂದು ಈಗಲೂ ಕರೆಯುವುದು ವಾಡಿಕೆ.
ಇಂದ್ರವರ್ಮಾನು ತನ್ನ ಮಗನಿಗೆ ಸೋಮವರ್ಮಾ ಎಂದು ನಾಮಕರಣ ಮಾಡಿದನು. ಅವನು ಮುಂದೆ ಸಕಲೇಶ್ವರಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಿದನು. ಅಂದಿನಿಂದ ಇಂದಿನವರೆಗೂ ಯಾರಿಗೆ ಸಂತಾನವಿರುವುದಿಲ್ಲವೊ ಅವರು ಬಂದು ಹರಕೆ ಮಾಡಿಕೊಂಡರೆ ಸಂತಾನ ಪ್ರಾಪ್ತವಾಗುತ್ತಿರುವುದು ಇಂದಿಗೂ ಸತ್ಯವಾಗಿದೆ. ಈ ಕಾರಣದಿಂದ ಜನಾರ್ದನಸ್ವಾಮಿಗೆ ‘ಮಕ್ಕಳ ಜನಾರ್ದನʼ ವರದರಾಜ’ ಎಂಬ ಅಡ್ಡ ಹೆಸರುಗಳು ಬಂದಿದೆ.
ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನದಲ್ಲಿರುವ ಮಹಾಲಕ್ಷ್ಮೀ ಅಮ್ಮನವರನ್ನು ವೇದವಲ್ಲೀ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಮಾಂಡವ್ಯ ಖುಷಿಗಳು ಕ್ರೂರಮೃಗಾಧಿ ಎಲ್ಲಾ ಪ್ರಾಣಿಗಳಿಗೂ ಸಹ ವೇದವನ್ನು ಹೇಳಿಕೊಡುತ್ತಿದ್ದರು. ಆದ್ದರಿಂದ ಅವರು ತಪಸ್ಸನ್ನು ಆಚರಿಸಿದ ಅರಣ್ಯಕ್ಕೆ ವೇದಾರಣ್ಯ ಎಂಬ ಹೆಸರು ಬಂದಿತು. ಆದ್ದರಿಂದ ಮಹಾಲಕ್ಷ್ಮೀ ಅಮ್ಮನವರನ್ನು ವೇದವಲ್ಲೀ ಅಮ್ಮನವರು ಎಂದು ಕರೆಯುವುದು ವಾಡಿಕೆ.
ದೇವಸ್ಥಾನ ಸುಮಾರು 2 ಎಕರೆಯ ಪ್ರದೇಶದ ಮಧ್ಯದಲ್ಲಿದ್ದು ರಾಜಗೋಪುರವನ್ನು ನಿರ್ಮಿಸಲಾಗಿದೆ. ದೇವಾಲಯವು ಪ್ರಾಕಾರ ವಿಮಾನಗೋಪುರ, ಗರ್ಭಗೃಹ, ಶುಕನಾಸಿ, ನವರಂಗಗಳನ್ನು ಹೊಂದಿದೆ. ಗಂಗರ ಲಾಂಛನವಾದ ಆನೆಯನ್ನು ಇಂದಿಗೂ ದೇವಸ್ಥಾನದ ಮುಂಭಾಗ ಕಾಣಬಹುದು.
ಬಾಗಿಲು ತೆರೆಯುವ ಸಮಯ:
07:30 AM IST – 12:30 PM IST
05:30 AM IST – 09:30 AM IST
ಬಾಗಿಲು ಮುಚ್ಚುವ ಸಮಯ:
09:30 AM IST – 09:30 AM IST
ಸರ್ವ ದರ್ಶನ