ದೇವರಾಯನದುರ್ಗದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಕರ್ನಾಟಕದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ತುಮಕೂರು ಜಿಲ್ಲೆಯಲ್ಲಿದೆ. ಈ ದೇವಾಲಯವು ನರಸಿಂಹ ಸ್ವಾಮಿಗೆ ಸಮರ್ಪಿತವಾಗಿದೆ.
ದೇವರಾಯನದುರ್ಗ ಬೆಟ್ಟದ ಮೇಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಭಕ್ತರಿಗೆ ಪವಿತ್ರ ಸ್ಥಳವಾಗಿದೆ. ಇಲ್ಲಿನ ನೈಸರ್ಗಿಕ ಸೌಂದರ್ಯವು ಮನಸ್ಸನ್ನು ಶಾಂತಗೊಳಿಸುತ್ತದೆ. ಈ ದೇವಾಲಯವು ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಒಂದು ಜನಪ್ರಿಯ ತಾಣವಾಗಿದೆ.
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಸುಮಾರು 12 ಮತ್ತು 13 ನೇ ಶತಮಾನಕ್ಕೆ ಸೇರಿದ್ದಾಗಿದೆ. ಸುಮಾರು 700 ವರ್ಷಗಳ ಹಿಂದಿನ ದೇವಾಲಯವಾಗಿದೆ. ಈ ಬಗ್ಗೆ ಶ್ರೀ ಕೆ.ಜಿ. ಲಕ್ಷ್ಮೀನಾರಾಯಣಪ್ಪ (ಕೆ.ಗು.ಲ) ಇವರು 2018ನೇ ಸಾಲಿನಲ್ಲಿ ಬರೆದಿರುವ ದೇವರಾಯನದುರ್ಗ ದಿವ್ಯ ದರ್ಶನ (ತುಮಕೂರು ಜಿಲ್ಲಾ ದೇವಾಲಯಗಳು) ಪುಸ್ತಕದಲ್ಲಿ ಉಲ್ಲೇಖವಿದೆ. ಇತಿಹಾಸದ ಪ್ರಕಾರ ಪಾಳೇಗಾರರು ನಿರ್ಮಿಸಿದ ದೇವಾಲಯವಾಗಿದೆ. ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಬೆಟ್ಟದ ಮೇಲೆ ಇರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಈ ಮೂರ್ತಿಯು ದೈವ ಆರ್ಷ ಪ್ರಯೋಗ ಎಂದು ಪ್ರಚಲಿತದಲ್ಲಿದೆ. ಶ್ರೀ ಭೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಬೆಟ್ಟದ ಮೇಲೆ ಗ್ರಾಮದ ಮಧ್ಯೆ ಇರುತ್ತದೆ. ಈ ಮೂರ್ತಿಯು ದೂರ್ವಾಸ ಮುನಿಗಳಿಂದ ಪ್ರತಿಷ್ಟಿತ ಎಂದು ಪ್ರಚಲಿತದಲ್ಲಿದೆ. ಎರಡು ದೇವಾಲಯದಲ್ಲಿ ಮಹಾಲಕ್ಷ್ಮೀ ದೇವತೆಯನ್ನು ಮೈಸೂರು ಅರಸರ ಮಹಾರಾಣಿಯವರು ಪ್ರತಿಷ್ಟಾಪಿಸಿರುತ್ತಾರೆ ಎಂದು ಪ್ರತೀತಿ. ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಬೆಟ್ಟದ ಬಂಡೆಗಳ ಮಧ್ಯೆ ದಿವ್ಯ ಮೂರ್ತಿಯಾಗಿರುತ್ತದೆ. ಶ್ರೀ ಭೋಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ರಾಜಗೋಪುರದ ಕೆಳಗಡೆ ಒಂದು ಶಾಸನವಿದ್ದು, ಈ ಶಾಸನವನ್ನು ಒದಲು ಸರಿಯಾಗಿ ಕಾಣುವುದಿಲ್ಲ. ದೇವಾಲಯದ ಗೋಡೆಗಳು ಶಿಲೆಯಿಂದ ನಿರ್ಮೀತವಾಗಿದ್ದು, ಯಾವುದೇ ಚಿತ್ರಕಲೆಗಳು ಕಂಡುಬರುವುದಿಲ್ಲ. ಎರಡು ದೇವಾಲಯದ ಪುಷ್ಕರಣಿ / ಕಲ್ಯಾಣಿಗಳು ಇದ್ದು, ಈ ತೀರ್ಥದಿಂದ ಭಕ್ತರು ಸಂಕಲ್ಪ ಮಾಡಿ ಸ್ನಾನವನ್ನು ಮಾಡಿದರೆ ಆರೋಗ್ಯ ವೃದ್ಧಿ ಮತ್ತು ಇಷ್ಟಾರ್ಥ ಸಿದ್ದಿ ನೆರವೇರುವವು ಎಂಬುದು ಭಕ್ತರ ನಂಬಿಕೆ ಹಾಗೂ ಪ್ರತೀತಿ. ಈ ದೇವಾಲಯದಲ್ಲಿ ವಿಶೇಷವಾಗಿ ಸ್ವಾತಿ ನಕ್ಷತ್ರದಂದು ಸುದರ್ಶನ ಹೋಮ ಸೇವೆ, ಕಲ್ಯಾಣೋತ್ಸವ ಮುಂತಾದ ಪೂಜೆ ಉತ್ಸವಗಳನ್ನು ಆಚರಿಸುವುದರಿಂದ ಭಕ್ತರು ಅವರವರ ಕಷ್ಟ ಕಾರ್ಪಣ್ಯಗಳನ್ನು ನಿವಾರಣೆ ಮಾಡಿ ಮನೋಕಾಮನೆಗಳನ್ನು ಹೊಂದುತ್ತಿರುತ್ತಾರೆ. ಇಷ್ಟಾರ್ಥ ಸಿದ್ದಿಗಾಗಿ ಹೆಜ್ಜೆ ನಮಸ್ಕಾರ, ಹೆಜ್ಜೆ ಮಂಗಳಾರತಿ, ಗರುಡ ರಥೋತ್ಸವ ಹಾಗೂ ಉರುಳು ದಿಂಡು ಸೇವೆ,ಗರುಡ ಬುತ್ತಿ (ಗರುಡ ಪ್ರಸಾದ) ನೆರವೇರಿಸುವುದರಿಂದ ಭಕ್ತರ ಇಷ್ಟಾರ್ಥ ಸಿದ್ದಿಯಾಗುತ್ತದೆ. ನರಸಿಂಹ ದೇವರಿಗೆ ಜೇನುತುಪ್ಪ ಸೇವೆ ನೆರವೇರಿಸುವುದರಿಂದ ಭಕ್ತರಿಗೆ ಆರೋಗ್ಯ ಭಾಗ್ಯ ಉಂಟಾಗುತ್ತದೆ. ತೀರ್ಥ ಕಾಯಿಯಿಂದಲೂ ದೇವರ ಫಲವನ್ನು ಹೊಂದುತ್ತಿರುವುದರಿಂದ ತೀರ್ಥಕಾಯಿಯನ್ನು ದೇವರ ಮುಂದೆ ಇಟ್ಟು ಪ್ರಾರ್ಥಿಸಿಕೊಡಲಾಗುತ್ತದೆ.
ಶ್ರೀ ಕ್ಷೇತ್ರವು ಬಹುಕಾಲದಿಂದಲೂ ಸಾಧು ಸಂತರಿಗೆಲ್ಲ ತಪೋಭೂಮಿ ಎಂದೇ ಪ್ರಖ್ಯ್ಯಾತವಾಗಿತ್ತು. ಈ ನಿಸರ್ಗದಾಶ್ರಯದಲ್ಲಿ ದೂರ್ವಾಸರು, ಅಗಸ್ತ್ಯರು, ದೇವದತ್ತ, ಧನಂಜಯ, ಪರಾಶರರು, ಶ್ರೀ ಚಕ್ರ, ವೃಷಭ, ಅಲ್ಲದೆ ಪುರಾಣ ಪುರುಷೋತ್ತಮರೆಂದೆನಿಸಿದ ಶ್ರೀ ಸೀತಾರಾಮ ಲಕ್ಷ್ಮಣರು ಇಲ್ಲಿಯ ಪರಿಸರದಲ್ಲಿ ಕೆಲವು ಕಾಲ ವಾಸವಾಗಿದ್ದರೆಂಬ ವಿಚಾರವೂ ಸಹ ಸ್ಥಳ ಪುರಾಣಗಳ ಅಧ್ಯಯನದಿಂದ ತಿಳಿದು ಬಂದಿದೆ. ಈ ದೇವಾಲಯಗಳಿಗೆ ಬರುವ ಮಾರ್ಗ ಮಧ್ಯೆಯಲ್ಲಿ ಬೆಟ್ಟದ ಕೆಳ ಭಾಗದಲ್ಲಿ ನಾಮದಚಿಲುಮೆ ಎಂಬ ಪುಣ್ಯ ಸ್ಥಳವಿದ್ದು, ಈ ಸ್ಥಳದಲ್ಲಿ ಶ್ರೀ ರಾಮ, ಲಕ್ಷ್ಮಣ, ಸೀತೆ ಇವರುಗಳು ವನವಾಸ ಸಮಯದಲ್ಲಿ ಒಂದು ದಿನ ಬೆಳಗ್ಗೆ ಬಂಡೆಯ ಮೇಲೆ ರಾಮ ಕುಳಿತಿದ್ದ, ಆಗ ಹಣೆಗೆ ತಿಲಕವಿಡುವ ಸಂದರ್ಭ ಬಂತು. ನೀರಿಗಾಗಿ ಸುತ್ತಲೂ ನೋಡಿದ, ನೀರು ಸಿಗಲಿಲ್ಲ ಸ್ಥಳದಲ್ಲೇ ಬಾಣ ಹೂಡಿ ಬಂಡೆಯ ಮೇಲೆ ಬಿಟ್ಟಾಗ, ಬಾಣ ಬಂಡೆಯ ಒಳ ಹುಕ್ಕು ರಂದ್ರವಾಗಿ ನೀರಿನ ಬುಗ್ಗೆ ಚಿಮ್ಮಿತು. ಆ ನೀರಿನ ಸಹಾಯದಿಂದ ರಾಮ ಹಣೆಗೆ ನಾಮವನ್ನಿಟ್ಟುಕೊಂಡ. ಈ ಪ್ರದೇಶ ನಾಮದ ಚಿಲುಮೆ ಎಂದೇ ಪ್ರಖ್ಯಾತವಾಯಿತು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಂಕೆಗಳು ಇರುತ್ತವೆ.
ಈ ಸ್ಥಳವನ್ನು ಯುಗಾಂತರಗಳ ಹಿಂದೆ (ಕೃತಯುಗದಲ್ಲಿ) ಈ ಪರ್ವತ ಪ್ರದೇಶಗಳನ್ನು ಉಕ್ಕೇಲಾದ್ರಿ ಎಂದೂ, ತ್ರೇತಾಯುಗದಲ್ಲಿ ಸಿಂಹಾದ್ರಿ ಎಂದೂ, ದ್ವಾಪರದಲ್ಲಿ ಸಿದ್ದಗಿರಿ ಎಂದೂ, ಈಗಿನ ಕಲಿಯುಗದಲ್ಲಿ ಕರಿಗಿರಿಗಳೆಂದೂ ಕರೆಯಲಾಗಿರುವುದಾಗಿ ಸ್ಥಳ ಪುರಾಣಗಳ ಅಭ್ಯಾಸದಿಂದ ತಿಳಿದು ಬಂದಿದೆ. ಕರಿಗಿರಿ ಕ್ಷೇತ್ರದ ಮಹಿಮೆ ವರ್ಣನೆಯನ್ನು ಬ್ರಹ್ಮಾಂಡ ಪುರಾಣ ಮತ್ತು ನಾರದ ಪುರಾಣದಲ್ಲಿ ಉಲ್ಲೇಖವಿದೆ. ಶ್ರೀ ಕ್ಷೇತ್ರದಲ್ಲಿ ಜಯಮಂಗಲಿ ನದಿ ಹುಟ್ಟಿ, ಉತ್ತರ ಪಿನಾಕಿನಿ ಹಾಗೂ ತುಂಗಭದ್ರಾ ನದಿಗಳ ಮೂಲಕ ಹರಿದು ಮುಂದೆ ಕೃಷ್ಣಾ ಪ್ರವಾಹವನ್ನು ಕೂಡಿಕೊಳ್ಳುತ್ತದೆ. ಇಲ್ಲಿ ಹುಟ್ಟಿದ ಶಿಂಷಾ ನದಿಯು ಮುಂದೆ ತುಮಕೂರು, ಗುಬ್ಬಿಯ ವಿಶಾಲವಾದ ಕಡಬ ಕೆರೆಗಳ ಮೂಲಕ ಶಿವನ ಸಮುದ್ರದ ಬಳಿ ಕಾವೇರಿ ಮೂಲವನ್ನು ಸೇರಿಕೊಳ್ಳುತ್ತದೆ ಎಂಬ ಪ್ರತೀತಿ ಇದೆ. ಶ್ರೀ ಕುಂಭಿ ಬೆಟ್ಟದ ಮೇಲೆ ದೇವಾಲಯದ ಮುಂಭಾಗದಲ್ಲಿ ನರಸಿಂಹ ತೀರ್ಥ ಎಂಬ ಹೆಸರಿನ ಪುಟ್ಟದಾದ ಪುಷ್ಕರಣಿ ಇದೆ. ಹಾಗೂ ನರಸಿಂಹ ದೇವರಮಂದಿರದ ತಳಭಾಗದಲ್ಲಿ ಗುಹಾಂತರ್ಗತ ಪುಷ್ಕರಣಿಯ ಪಾದತೀರ್ಥವಿದೆ. ಸೂರ್ಯನ ಕಿರಣಗಳು ಈ ಜಲವನ್ನು ಸ್ಪರ್ಶ ಮಾಡುವುದಿಲ್ಲ. ಈ ಪುಷ್ಕರಣಿಯಲ್ಲಿ ಒಂದು ಸುದರ್ಶನ ಶಿಲಾ ಚಕ್ರವಿದೆ. ಬ್ರಹ್ಮದೇವನು ಶ್ರೀ ಯೋಗನರಸಿಂಹಸ್ವಾಮಿಯನ್ನು ಭಕ್ತಿಯಿಂದ ಪ್ರತಿಷ್ಠಾಪಿಸಿದ ಸ್ಥಳವಿದು ಎಂದು ಭಾವಿಕರು ಆ ಜಲವನ್ನು ಭಕ್ತಿಯಿಂದ ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ. ಶ್ರೀ ಕ್ಷೇತ್ರಕ್ಕೆ ಕರಿಗಿರಿ ಕ್ಷೇತ್ರ, ಕುಸುಮಾದ್ರಿ ಎಂಬ ಹೆಸರು ಸಹ ಇದೆ. ಶ್ರೀ ಯೋಗಲಕ್ಷ್ಮೀ ನರಸಿಂಹ ಸ್ವಾಮಿಯು ಉತ್ತರಾಭಿ ಮುಖವಾಗಿದ್ದು, ಭಕ್ತರನ್ನು ಉದ್ದರಿಸಲು ಬ್ರಹ್ಮದೇವರು ಕೈಗೊಂಡ ತಪಸ್ಸಿಗೆ ಮೆಚ್ಚಿ, ವಿಷ್ಣುವು ಯೋಗನರಸಿಂಹಸ್ವಾಮಿ ರೂಪದಲ್ಲಿ ಕುಂಭಿ ಬೆಟ್ಟದಲ್ಲಿ ನೆಲೆಸಿದ್ದಾರೆ. ಶ್ರೀ ಭೋಗಲಕ್ಷ್ಮೀನರಸಿಂಹಸ್ವಾಮಿಯು ಪೂರ್ವಾಭಿಮುಖವಾಗಿ ಇದ್ದು, ದೂರ್ವಾಸ ಮುನಿಗಳು ಪ್ರತಿಷ್ಠಾಪಿಸಿರುತ್ತಾರೆ. ನೆಲಮಟ್ಟದಿಂದ ಕುಂಭಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಆಂಜನೇಯ ಮತ್ತು ಗರುಡ ಇವರಿಬ್ಬರ 8-10 ಅಡಿ ಎತ್ತರವಿರುವ ಉಬ್ಬು ಚಿತ್ರ ವಿಗ್ರಹಗಳಿವೆ. ಸಪ್ತದ್ವಾರಗಳಿಂದ ಕೂಡಿದ ಇಲ್ಲಿನ ಏಳು ಸುತ್ತಿನ ಕೋಟೆ ವಿಜಯನಗರದ ಅರಸರ ಕಾಲದಲ್ಲಿ ಒಂದು ಆಯಕಟ್ಟಿನ ದುರ್ಗಮ ಸೇನಾಕೇಂದ್ರವಾಗಿತ್ತು. ಪಾಳು ಬಿದ್ದಿರುವ ಕೋಟೆಗಳು, ಬುರುಜುಗಳು, ಬತೇರಿಗಳನ್ನು ಈಗಲೂ ಕಾಣಬಹುದು. ಮೈಸೂರು ಅರಸರ ಕಾಲದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವನ್ನು ಕಂಠೀರವ ನರಸರಾಜರು ಕಟ್ಟಿಸಿದರೆಂದೂ ನಂತರ ಕೃಷ್ಣರಾಜ ಒಡೆಯರು ಪುನರುಜ್ಜೀವನಗೊಳಿಸಿದರೆಂದೂ ತಿಳಿಸುತ್ತದೆ. ಶ್ರೀ ಪುಣ್ಯಕ್ಷೇತ್ರಕ್ಕೆ ಪ್ರವೇಶಿಸುವ ದ್ವಾರದಲ್ಲಿ ಇರುವ ದೊಡ್ಡ ಬಂಡೆಯ ಮೇಲೆ ನಿಂತು, ಮಹಾರಾಜರು ಮುಂದೆ ಪ್ರಯಾಣ ಮಾಡುವ ಮೊದಲು, ಆರತಿ ಸೇವೆ ಸಲ್ಲಿಸುತ್ತಿದ್ದುದರಿಂದ ಈ ಬಂಡೆ “ಆರತಿ ಬಂಡೆ”ಯೆಂದು ಹೆಸರು ಪಡೆದಿದೆ. ವಿಜಯನಗರದ ಅವನತಿಯಾದ ಮೇಲೆ ಮೈಸೂರಿನಲ್ಲಿ ರಾಜ ಒಡೆಯರು ರಾಜರಾಗಿದ್ದರು, ದೇವರಾಜನೆಂಬ ದಳವಾಯಿ ರಾಜ ಒಡೆಯರ ನೆಚ್ಚಿನ ಭಂಟನಾಗಿದ್ದನು. ಉತ್ತರದ ಸೀಮೆಯನ್ನು ಗೆಲ್ಲಲು ಒಡೆಯರು ದೇವರಾಜನನ್ನು ನೈನ್ಯ ಸಮೇತ ಕಳುಹಿಸಿದರು. ಈ ದೇವರಾಜನು ಈ ದುರ್ಗದ ದರೋಡೆಕೋರನಾದ ಜಾತಕನೊಡನೆ ಯುದ್ದ ಮಾಡಿ 1608ರಲ್ಲಿ ಆತನನ್ನು ಕೊಂದು, ಈ ದುರ್ಗವನ್ನು ಮೈಸೂರು ರಾಜ್ಯಕ್ಕೆ ಸೇರಿಸಿದರು. ರಾಜ ಒಡೆಯರೂ ಈ ದುರ್ಗಕ್ಕೆ ಬಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿಯನ್ನು ಭಕ್ತಿಯಿಂದ ಭಜಿಸಿ ದೇವರಾಜನು ಗೆದ್ದುದರಿಂದ ಈ ದುರ್ಗಕ್ಕೆ ದೇವರಾಯನದುರ್ಗವೆಂದು ಹೆಸರಿಟ್ಟರು ಎಂದು ದೇವರಾಯನದುರ್ಗದ ಕ್ಷೇತ್ರ ಪರಿಚಯ ಮತ್ತು ಶ್ರೀ ಲಕ್ಷ್ಮೀನರಸಿಂಹ ಪಂಚರತ್ನಸ್ತೋತ್ರಂ ಪುಸ್ತಕದಲ್ಲಿ ಉಲ್ಲೇಖವಿದೆ.
ಬಾಗಿಲು ತೆರೆಯುವ ಸಮಯ
08:30 AM IST – IST
IST – 04:30 PM IST
ಬಾಗಿಲು ಮುಚ್ಚುವ ಸಮಯ
07:30 PM IST – 07:30 PM IST
ದಿನನಿತ್ಯ ಸಾರ್ವಜನಿಕ ದರ್ಶನ ಇರುತ್ತದೆ. ವಿಶೇಷ ದಿನಗಳಲ್ಲಿ ರೂ. 50.00 ಗಳಿಗೆ ನೇರ ದರ್ಶನ ವ್ಯವಸ್ಥೆ ಇರುತ್ತದೆ.