ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯವು ಬೆಂಗಳೂರಿನ ಒಂದು ಪ್ರಮುಖ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳವಾಗಿದ್ದು, ತನ್ನ ಪ್ರಾಚೀನತೆ, ವಾಸ್ತುಶಿಲ್ಪ ಮತ್ತು ಮಹಿಮೆಯಿಂದಾಗಿ ಭಕ್ತರನ್ನು ಆಕರ್ಷಿಸುತ್ತದೆ.
ಶ್ರೀ ಸೋಮೇಶ್ವರಸ್ವಾಮಿ ದೇವಾಲಯವು 13ನೇ ಶತಮಾನಕ್ಕೆ ಸೇರಿದ್ದು, ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ, ಸುಮಾರು 1500 ವರ್ಷಗಳಷ್ಟು ಹಳೆಯದಾಗಿರುತ್ತದೆ ಎಂಬುದು ತಿಳಿದುಬರುತ್ತದೆ. ಆದರೆ ಕಟ್ಟಡವನ್ನು ಗಮನಿಸಿದಾಗ 13ನೇ ಶತಮಾನಕ್ಕೆ ಸೇರಿರಬಹುದು ಎಂಬುದು ಅರ್ಚಕರು ಮತ್ತು ಭಕ್ತಾದಿಗಳ ಅಭಿಪ್ರಾಯವಾಗಿದೆ. ಆದರೆ ಈ ಕುರಿತು ಯಾವುದೇ ಶಾಸನ ಗ್ರಂಥಗಳಲ್ಲಿ ಉಲ್ಲೇಖವಿರುವುದಿಲ್ಲ.
ಯಲಹಂಕನಾಥ ಪ್ರಭುವಾದ ಶ್ರೀ ಜಯಪ್ಪ ಗೌಡರು ಒಂದಾನೊಂದು ದಿನ ದೈವ ಪ್ರೇರಣೆಯಿಂದ ಬೇಟೆಗಾಗಿ ಈ ಸ್ಥಳಕ್ಕೆ ಬಂದಿದ್ದು, ಆಯಾಸದಿಂದ ಒಂದು ಮರದ ಕೆಳಗೆ ಮಲಗಿಕೊಂಡು ನಿದ್ರಿಸುವ ಸಮಯದಲ್ಲಿ ಕೂಡಲೆ ಗಾಡ ನಿದ್ರೆ ಬಂದು ಸ್ವಪ್ನದಲ್ಲಿ ಶ್ರೀ ಸೋಮೇಶ್ವರಸ್ವಾಮಿ ಪ್ರತ್ಯಕ್ಷವಾಗಿ, ಈ ರೀತಿ ಹೇಳುತ್ತಾರೆ ‘ಈ ಸ್ಥಳದಲ್ಲಿ ಹಿಂದೆ ಮಾಂಡವ್ಯ ಮಹಾ ಖುಷಿಗಳಿಂದ ಪೂಜಿಸಲ್ಪಡುತ್ತಿದ್ದು, ನಾನು ಈಗ ಕಲಿ ಪ್ರಾಬಲ್ಯದಿಂದ ಜನರಲ್ಲಿ ಭಕ್ತಿಯು ಕ್ಷೀಣವಾಗುತ್ತಾ ಬಂದು ಐಕ್ಯಮತ್ಯ ದೇಶಾಭಿಮಾನ ಸತ್ಯ ಪರಾಕ್ರಮಗಳಲ್ಲದೆ ಈ ಪುಣ್ಯ ಭೂಮಿಯನ್ನು ಮತದ್ವೇಷ ದೈವ ದೋಷದಿಂದ ಪೂಜಾ ವಿಗ್ರಹಗಳನ್ನು ದೇವಾಲಯಗಳನ್ನು ಪುಣ್ಯಕ್ಷೇತ್ರಗಳನ್ನು ಸನಾತನ ಧರ್ಮವನ್ನು ವಿಧರ್ಮಗಳು ನಾಶ ಮಾಡುತ್ತಿರುವುದರಿಂದಲೂ, ಈ ದೇಶ ಎಲ್ಲಾ ಧರ್ಮವನ್ನುದ್ದಾರ ಮಾಡಿ ಪ್ರಜೆಗಳನ್ನು ನ್ಯಾಯದಿಂದ ಪರಿಪಾಲನೆಯನ್ನು ಮಾಡುವ ಪ್ರಭುವಿಲ್ಲದ್ದುದರಿಂದಲೂ ಇಲ್ಲಿರುವ ಹುತ್ತದಲ್ಲಿ ಅಡಗಿರುವೆನು. ನೀನು ನನ್ನ ನಿಜವಾದ ಭಕ್ತನು ಧರ್ಮಪರಿಪಾಲಕನೂ ಆಗಿರುವುದರಿಂದ ನನ್ನನ್ನು ಹೊರಕ್ಕೆ ತೆಗೆದು ಪೂಜಿಸಿ ಶ್ರೇಯೋವಂತನಾಗು ಎಂದು ಅಪ್ಪಣೆಕೊಟ್ಟು ಅಂತರ್ಧಾನನಾದನು. ನಂತರ ಇವರು ಸ್ವಾಮಿಯವರ ದೇವಾಲಯವನ್ನು ನಿರ್ಮಿಸಿದರು ಎಂಬ ಪ್ರತೀತಿ ಇದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ದೇವಾಲಯದ ಮೂಲ ಮೂರ್ತಿ ಶ್ರೀ ಸೋಮೇಶ್ವರಸ್ವಾಮಿ ದೇವರು ಋಷಿ ಪ್ರತಿಷ್ಠೆಯಾಗಿರುತ್ತದೆ ಎಂಬುದು ಹಿರಿಯರಿಂದ ತಿಳಿದುಬಂದಿರುತ್ತದೆ. ಶ್ರೀ ಸ್ವಾಮಿ ದೇವರಿಗೆ ಹರಕೆ ಹೊತ್ತು ಪೂಜೆ ಮಾಡುವುದರಿಂದ ಶ್ರೀ ಸ್ವಾಮಿಯ ಅನುಗ್ರಹದಿಂದ ಅವರ ಕಷ್ಟ ಕಾರ್ಪಣ್ಯಗಳು, ಮಂಗಳ ಕಾರ್ಯಗಳು ಇತರೆ ಫಲಗಳು ಲಭಿಸುತ್ತವೆ ಮತ್ತು ವಿವಾಹ ಮತ್ತು ಸಂತಾನ ಪ್ರಾಪ್ತಿ ಲಭಿಸುತ್ತವೆ, ಅಪಮೃತ್ಯು ದೋಷ, ಜನ್ಮ ಮೃತ್ಯು ದೋಷ, ನಿವಾರಣೆಗಾಗಿ ಹರಕೆ ಹೊತ್ತು ದೋಷ ಪರಿಹಾರ ಮಾಡಿಕೊಳ್ಳುತ್ತಾರೆ. ಶ್ರೀ ಸ್ವಾಮಿಗೆ ಮಹಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭೀಷೇಕ ಪೂಜೆಗಳೇ ಶ್ರೀ ಸ್ವಾಮಿಗೆ ವಿಶೇಷವಾಗಿರುತ್ತದೆ.
ಶ್ರೀ ಸ್ವಾಮಿಯವರಿಗೆ ಪ್ರತಿ ಸೋಮವಾರ ಮಹಾಭಿಷೇಕ, ಅಲಂಕಾರಗಳು, ಮಹಾಮಂಗಳಾರತಿ, ಪ್ರತಿ ಮಾಸ ಪ್ರದೋಷ, ಮಹಾಶಿವರಾತ್ರಿ, ಕಾರ್ತಿಕಮಾಸ ಪೂಜೆ, ಶಿವ ದೀಪೋತ್ಸವ, ಬ್ರಹ್ಮೋತ್ಸವ, ಪಲ್ಲಕ್ಕಿ ಉತ್ಸವ, ಇನ್ನು ಇತರೆ ವಿಶೇಷ ಪೂಜೆಗಳು ನಡೆಯುತ್ತವೆ. ಇತರೆ ಹಬ್ಬಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಶ್ರೀ ದೇವಾಲಯವು ಹಲಸೂರಿನ ಮಧ್ಯ ಭಾಗದಲ್ಲಿರುತ್ತದೆ. ಈ ದೇವಾಲಯವನ್ನು ಕಾಲಾಂತರದಲ್ಲಿ ಯಾವ ರಾಜ/ಅರಸ ಪಾಳೇಗಾರ ಅಥವಾ ಯಾರಾದರು ಜೀರ್ಣೋದ್ದಾರಗೊಳಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇರುವುದಿಲ್ಲ. ದೇವಾಲಯದ ಮೂಲ ಮೂರ್ತಿಯು ಶಿಲೆಯಿಂದ ರಚಿಸಲ್ಪಟ್ಟಿರುತ್ತದೆ. ಈ ದೇವಾಲಯದ ಕಂಬಗಳಲ್ಲಿ ಗಣೇಶ, ಶಿವ, ವಿಷ್ಣು, ವಿವಿಧ ಶಿಲ್ಪಕಲೆಗಳು ಕೆತ್ತನೆಯಾಗಿರುತ್ತವೆ. ಶ್ರೀ ದೇವಾಲಯದಲ್ಲಿ ಕಾರ್ತಿಕ ಮಾಸ, ಮಾಘ ಮಾಸಗಳಲ್ಲಿ ಭಕ್ತಾಧಿಗಳು ದೇವರಿಗೆ ದೀಪಾರಾಧನೆ ಮಾಡಿದಲ್ಲಿ ಭಕ್ತಾದಿಗಳ ಪ್ರಾರ್ಥನೆಯು ನೆರವೇರುವುದಾಗಿ ನಂಬಿಕೆ ಇದೆ. ಮಹಾಶಿವರಾತ್ರಿಯ ಪೂಜೆಗೂ ಸಹ ವಿಶೇಷ ಫಲ ಲಭಿಸುವುದಾಗಿ ನಂಬಿಕೆಯಿದೆ. ದೇವಾಲಯದ ಒಳ ಆವರಣದಲ್ಲಿ ಕಲ್ಯಾಣಿ ಇರುತ್ತದೆ. ಆದರೆ ಭಕ್ತಾದಿಗಳಿಗೆ ಕಲ್ಯಾಣಿಯಲ್ಲಿ ಸ್ನಾನ ಮಾಡಲು ಅವಕಾಶವಿರುವುದಿಲ್ಲ. ಭಕ್ತಾದಿಗಳಿಗೆ ಅವರ ಕೋರಿಕೆಯಂತೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ತೀರ್ಥಕಾಯಿ ನಿಂಬೆಹಣ್ಣು ಇಟ್ಟು ಪೂಜೆ ಮಾಡಿ ಕೊಡಲಾಗುತ್ತದೆ.
ಬಾಗಿಲು ತೆರೆಯುವ ಸಮಯ
06:29 AM IST – 12:30 PM IST
05:30 PM IST – 08:30 PM IST
ಸಾಮಾನ್ಯ ದರ್ಶನ