ಶ್ರೀ ವಸಂತವಲ್ಲಭರಾಯಸ್ವಾಮಿ ದೇವಾಲಯವು ಬೆಂಗಳೂರಿನ ವಸಂತಪುರದಲ್ಲಿರುವ ಒಂದು ಪುರಾತನ ವೈಷ್ಣವ ದೇವಾಲಯವಾಗಿದೆ. ಈ ದೇವಾಲಯವು ಶ್ರೀ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ.
ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯವು 12ನೇ ಶತಮಾನ 1200 ವರ್ಷಗಳ ಪುರಾತನ ದೇವಾಲಯವಾಗಿರುತ್ತದೆ. ಈ ದೇವಾಲಯವನ್ನು ಚೋಳ ವಂಶಸ್ಥರು ನಿರ್ಮಾಣ ಮಾಡಿದ್ದು ಈ ದೇವಾಲಯವು ಗುಪ್ತಗಿರಿ ಬೆಟ್ಟದ ಮೇಲೆ ಇರುತ್ತದೆ ದೇವಾಲಯದ ಜಾಗ ಇತ್ತಿಚೆಗೆ ನಗರವಾಗಿದೆ. ಶ್ರೀದೇವಿ ಭೂದೇವಿ ನಿಳಾದೇವಿ (ವಸಂತನಾಯಕಿ ಪದ್ಮಾವತಿ) ಸಮೇತ ಶ್ರೀ ವಸಂತ ವಲ್ಲಭರಾಯ ಸ್ವಾಮಿಯವರು ಪ್ರತಿಸ್ಟಾಪಿತವಾಗಿದ್ದಾರೆ.
ಈ ಕ್ಷೇತ್ರದಲ್ಲಿ ಬದರಿಕಾಶ್ರಮದಿಂದ ಬಂದ ಮಾಂಡವ್ಯ ಋಷಿಗಳು ಒಂದುದಿನ ತಂಗಿದ್ದು ಆಗ ಇಲ್ಲಿ ಶ್ರೀನಿವಾಸರಿರುವುದು ಗೊಚರಿಸಿದಾಗ ಗರ್ಭಗುಡಿಯಲ್ಲಿಯೆ ಸ್ವಯಂ ವ್ಯಕ್ತ ಶಿಲೆಯು ಕಂಡಿತು ಆಗ ಮಾಂಡವ್ಯ ಋಷಿಗಳು ತಪಸ್ಸನ್ನಾಚರಿಸಿ ಶ್ರೀನಿವಾಸರನ್ನು ದರ್ಶಿಸಿ ಈ ಜಾಗದಲ್ಲಿ ವಿಗ್ರಹವನ್ನು ಪ್ರತಿಸ್ಟಾಪಿಸಿದರು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ತಿರುಪತಿಯ ಶ್ರೀನಿವಾಸ ದೇವರು ನಾರಾಯಣವನ ಎಂಬಲ್ಲಿ ಪದ್ಮಾವತಿಯೊಡನೆ ಮದುವೆಯಾಗಿ ತಿರುಪತಿ ತಿರುಮಲದಲ್ಲಿ ಅವತಾರ ತಾಳಿ ಮದುವೆಯ ನಂತರ ಈ ವಸಂತಪುರವೆಂಬ ಕ್ಷೇತ್ರದಲ್ಲಿ ಶಂಕತೀರ್ಥ ಚಕ್ರತೀರ್ಥ ವಸಂತತೀರ್ಥ ದೇವತೀರ್ಥ ಪ್ಲವತೀರ್ಥ ಎಂಬ 5 ತೀರ್ಥದಲ್ಲಿ ಶ್ರೀ ಭೂದೇವಿ ನಿಳಾದೇವಿ ಸಮೇತ ಬಂದು ವಸಂತಸ್ನಾನ (ಮದುವೆಯ ಮರುದಿನ ಅರಿಶಣ ನೀರಿನಿಂದ ಸ್ನಾನ ಮಾಡುವುದು ಎಂಬುದಾಗಿದೆ. ಹೀಗೆ 5 ತೀರ್ಥದಲ್ಲಿ ಸ್ನಾನಮಾಡಿ ಅಭಯಹಸ್ತದಿಂದ 3 ಅಮ್ಮನವರ ಸಹಿತವಾಗಿ ಇಲ್ಲಿ ನೆಲೆಸಿರುತ್ತಾರೆ.ಆದ್ದರಿಂದ ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯ ಎಂದು ಪ್ರಸಿದ್ದಿಯಾಗಿದೆ.
ಈ ದೇವಾಲಯದಲ್ಲಿ ತಿರುಮಲ ದೇವಸ್ಥಾನದಂತೆಯೇ ಪೂಜೆಗಳು ನಡೆಯುತ್ತವೆ ಹಾಗಾಗಿ ಈ ದೇವಾಲಯವನ್ನು ಬೆಂಗಳೂರಿನ ತಿರುಪತಿ ಎಂದು ಕರೆಯುತ್ತಾರೆ.
ಈ ದೇವಾಲಯದ ವಿಶೇಷ ಪೂಜೆಗಳು ಎಂದರೆ ಹಬ್ಬಹರಿದಿನ 4 ಶ್ರಾವಣ ಶನಿವಾರಗಳು, ಮಾಘಮಾಸ, ಬ್ರಹ್ಮೋತ್ಸವ (ರಥಸಪ್ತಮಿಯಿಂದ ಶಿವರಾತ್ರಿಯ ವರೆಗೆ) ವೈಕುಂಠ ಏಕಾದಶಿ ಪ್ರತಿ ಶನಿವಾರ ಭಾನುವಾರಗಳು ವಿಶೇಷ ಹಾಗೂ ಕಂಕಣ ಭಾಗ್ಯಕ್ಕಾಗಿ ಪ್ರತಿ ನಿತ್ಯ ಕಲ್ಯಾಣೋತ್ಸವಗಳು, ಭಕ್ತಾದಿಗಳಿಂದ ಶೇವೆ ನಡೆಯುತ್ತದೆ. ದರ್ನುಮಾಸದಲ್ಲಿ ಬೆಳಗ್ಗಿನ ಪೂಜೆ ಕಂಕಣ ಭಾಗ್ಯಕ್ಕೆ, ರೊಹಿಣಿ ನಕ್ಷತ್ರದ ದಿನ ಶ್ರೀ ಸಂತಾನ ಕೃಷ್ಣ, ಪೂಜೆಯು ನಡೆಯುತ್ತದೆ.
ಶನಿವಾರದಂದು ಮಾತ್ರ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಇರುವ ಕಾರಣ ಭಾನುವಾರದಿಂದ ಶುಕ್ರವಾರದವರೆಗೆ ಉದ್ವವ ಮೂರ್ತಿಗೆ ಅಭಿಷೇಕ ಮಾಡಿಸುತ್ತಾರೆ ಬ್ರಹ್ಮೋತ್ಸವದ ತೇರಿನ ನಂತರ 2ನೇ ದಿನ ವಸಂತೋತ್ಸವ(ಅರಿಶನಸ್ನಾನ,ಅವಭೃತಸ್ನಾನವನ್ನು )ಮಾಡಿದರೆ ಕಂಕಣ ಬಾಗ್ಯ ಕೂಡಿಬಂದು ಬೇಗ ಮದುವೆಯಾಗುತ್ತದೆ ಎಂದು ಭಕ್ತರ ನಂಬಿಕೆ.
ವಸಂತ ಕಲ್ಯಾಣಿಯನ್ನು ಇನ್ಪೊಸಿಸ್ ಕಂಪನಿಯವರು ಜೀರ್ಣೋದ್ಧಾರ ಮಾಡಿಸಿರುತ್ತಾರೆ ಅದು ನೊಡುಗರಿಗೆ ಪ್ರೇಕ್ಷಣಿಯ ಸ್ಥಳವಾಗಿರುತ್ತದೆ. ಹಾಗೂ ಪ್ರತಿ ವರ್ಷ ಬ್ರಹ್ಮೋತ್ಸವದ ತೇರಿನ ನಂತರ 2ನೇ ದಿನ ಶ್ರೀ ಭೂದೇವಿ ನಿಳಾದೇವಿ ಸಮೇತ ವಸಂತವಲ್ಲಭರಾಯ ಸ್ವಾಮಿಯ ಉತ್ಸವ ಮೂರ್ತಿಯನ್ನು ತಂದು ಅರಿಶಿಣ ಸ್ನಾನ ಮಾಡಿಸಿ, ಆ ನೀರು ಕಲ್ಯಾಣಿಗೆ ಹೊಗುತ್ತದೆ, ಆ ಕಲ್ಯಾಣಿಯಲ್ಲಿ ಮುಳುಗುವ ಪ್ರತಿಯೊಬ್ಬರಿಗು, ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಇದೆ.
ಬಾಗಿಲು ತೆರೆಯುವ ಸಮಯ
07:30 AM IST – 12:00 PM IST
05:30 PM IST – 08:30 PM IST
ಬಾಗಿಲು ಮುಚ್ಚುವ ಸಮಯ
08:30 PM IST – 07:30 AM