1860 ರಲ್ಲಿ ಭಾರತದ ಮೊದಲ ಬಜೆಟ್ ಪರಿಚಯ
ಬಜೆಟ್ ಇತಿಹಾಸವು 150 ವರ್ಷಕ್ಕಿಂತ ಹೆಚ್ಚು ಹಳೆಯದು
ಈಸ್ಟ್ ಇಂಡಿಯಾ ಕಂಪನಿಯ ಅವಧಿಯಲ್ಲಿ ಬಜೆಟ್ ಪರಿಚಯ
ಸ್ವಾತಂತ್ರ್ಯದ ನಂತರ 3 ತಿಂಗಳಲ್ಲಿ ಮೊದಲ ಬಜೆಟ್
ಭಾರತದ ಬಜೆಟ್ ಗೆ 150 ವರ್ಷಕ್ಕಿಂತ ಹೆಚ್ಚಿನ ಇತಿಹಾಸವಿದೆ. ಭಾರತದಲ್ಲಿದ ಈಸ್ಟ್ ಇಂಡಿಯಾ ಕಂಪನಿಯ ಅವಧಿಯಲ್ಲಿ ಬಜೆಟ್ ಅನ್ನು ಪರಿಚಯಿಸಲಾಗಿದೆ. History of budget saaksha tv
ಭಾರತದಲ್ಲಿ ಮೊದಲ ಬಜೆಟ್ನ್ನು ಈಸ್ಟ್ ಇಂಡಿಯಾ ಕಂಪನಿಯ ಜೇಮ್ಸ್ ವಿಲ್ಸನ್ 1860ರ ಫೆಬ್ರವರಿ 18ರಂದು ಮೊದಲ ಬಾರಿ ಮಂಡಿಸಿದರು.
ಸ್ವಾತಂತ್ರ್ಯದ ನಂತರ 3 ತಿಂಗಳಲ್ಲಿ ಭಾರತದ ಮೊದಲ ಬಜೆಟ್ ಅನ್ನು ಮಂಡಿಸಲಾಗಿದೆ. ಆರ್.ಕೆ. ಷಣ್ಮುಗಂ ಚೆಟ್ಟಿ ಅವರು ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡಿಸಿದರು.
ನವೆಂಬರ್ 26, 1947 ರಂದು 5 ಗಂಟೆಗೆ ಚೆಟ್ಟಿ ಸ್ವಾತಂತ್ಯ್ರ ಭಾರತದ ಮೊದಲ ಬಜೆಟ್ ಮಂಡಿಸಿದರು. ಇದು ಕೇವಲ ಏಳು ತಿಂಗಳ ಕಾಲದ ಬಜೆಟ್ ಆಗಿತ್ತು.
ಅಂದಹಾಗೆ ಬಜೆಟ್ ಎಂಬ ಶಬ್ಧ ಲ್ಯಾಟಿನ್ನ ಬುಲ್ಗಾ ಎಂಬ ಮೂಲ ಪದದಿಂದ ಬಂದಿದೆ. ಅಂದರೆ ಚರ್ಮದ ಚೀಲ ಎಂದರ್ಥ.
ಮೊದಲ ಬಜೆಟ್ ಪ್ರತಿಯನ್ನು ದೆಹಲಿಯ ಮಿಂಟೋ ರಸ್ತೆಯಲ್ಲಿರುವ ಸೆಕ್ಯೂರಿಟಿ ಪ್ರೆಸ್ನಲ್ಲಿ ಮುದ್ರಿಸಲಾಗುತ್ತಿದೆ.
ಆಂಗ್ಲರ ಪರಂಪರೆ ಅನ್ವಯ ಬಜೆಟ್ ಸಂಜೆ ಐದು ಗಂಟೆಗೆ ಮಂಡಿಸಲಾಗುತ್ತಿತ್ತು. ಆದರೆ 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಈ ಸಂಪ್ರದಾಯವನ್ನು ಮುರಿದರು.









