Hijab Controvercy : ಹೊರರಾಜ್ಯಗಳಿಂದ ಹಿಜಬ್ ಹೋರಾಟದ ಸಲಹೆ, ತರಬೇತಿಗಾಗಿ ಬಂದಿರುವ ಮಾಹಿತಿ ಇದೆ : ರಘುಪತಿ ಭಟ್
ಉಡುಪಿ : ಹೈದರಾಬಾದ್ ಕೇರಳದಿಂದ ರಾಜ್ಯಕ್ಕೆ ಹಿಜಬ್ ಹೋರಾಟಕ್ಕೆ ಟ್ರೈನರ್ಸ್ ಬಂದಿದ್ದಾರೆ ಎಂಬ ಮಾಹಿತಿ ಇದೆ..
ಹಿಜಬ್ ಹೋರಾಟದ ಸಲಹೆ, ತರಬೇತಿಗಾಗಿ ಬಂದಿದ್ದಾರೆ ಎನ್ನಲಾಗ್ತಿದೆ..
ಹೈದರಾಬಾದ್ ನಿಂದ ಇಲ್ಲಿಗೆ ಬಂದು ಮಾಡಲು ಏನಿದೆ
ಹೊರರಾಜ್ಯಗಳಿಂದ ಟ್ರೈನರ್ಸ್ ಬಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ.
ಉಡುಪಿಗೆ ಹೈದರಾಬಾದ್ನಿಂದ ಕೆಲವರು ಬಂದು ಇಲ್ಲಿ ಓಡಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ..
ಉಡುಪಿಯಲ್ಲಿ ಹಿಜಬ್ – ಕೇಸರಿ ಶಾಲು ಸಂಘರ್ಷದ ವಿಚಾರವಾಗಿ ಮಾತನಾಡಿದ ಅವರು ರಾಜ್ಯ ಸರ್ಕಾರಕ್ಕೆ ನಾನು ಈಗಾಗಲೇ ಪತ್ರವನ್ನು ಕೊಟ್ಟಿದ್ದೇನೆ. ಹಿಜಬ್ ವಿವಾದವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇನೆ.
ಉಡುಪಿ ಜಿಲ್ಲೆಯ ಮುಸಲ್ಮಾನ ಮುಖಂಡರು ನಮ್ಮ ಜೊತೆ ಚೆನ್ನಾಗಿದ್ದಾರೆ. ಜಿಲ್ಲಾ ಮುಸ್ಲಿಂ ಮುಖಂಡರ ಜೊತೆ ಹಲವಾರು ಸಭೆಗಳು ಆಗಿದೆ. ಇದರ ಹಿಂದೆ ಒಂದು ಅಂತರಾಷ್ಟ್ರೀಯ ಷಡ್ಯಂತ್ರ ಇರೋದು ಗೊತ್ತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ಎಂದಿದ್ದಾರೆ..








