Hockey WC ಹಾಕಿ ವಿಶ್ವಕಪ್ ಗೆ ಕಲರ್ ಫುಲ್ ಚಾಲನೆ
ಬಹುನಿರೀಕ್ಷಿತಾ 15ನೇ ಆವೃತ್ತಿಯ ಎಫ್ಐಎಚ್ ಪುರುಷರ ಹಾಕಿ ವಿಸ್ವಕಪ್ಗೆ ಒಡಿಶಾದ ಕಟಕ್ ನಲ್ಲಿರುವ ಬಾಬರಬತಿ ಕ್ರೀಡಾಂಗಣದಲ್ಲಿ ವಿಧ್ಯುಕ್ತ ಅದ್ಧೂರಿ ಚಾಲನೆ ಸಿಕ್ಕಿದೆ.
ಒಡಿಶಾ ಸಿಎಂ ನವೀನ್ ಪಟ್ನಾಯಕ್ , ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಟೂರ್ನಿಗೆ ಚಾಲನೆ ನೀಡಿದರು.
45 ಸಾವಿರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಸುಮಾರು 4-5 ಗಂಟೆಗಳ ಕಾಲ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಒಡಿಶಾದ ಸಾಂಪ್ರದಾಯಿಕ ಬುಡಕಟ್ಟು ನೃತ್ಯದೊಂದಿಗೆ ಪ್ರಾರಂಭಗೊಂಡು ಕಾರ್ಯಕ್ರಮಕ್ಕೆ ಹಲವು ತಾರೆಯರು ಮೆರಗು ನೀಡಿದರು. ತ್ರಿವರ್ಣ ಧ್ವಜದ ಬಣ್ಣಗಳೊಂದಿಗೆ ಭಾರತದ ವೈಭವ ಸಾರುವ ನೃತ್ಯ ಪ್ರದರ್ಶಿಸಿದ್ದು ಎಲ್ಲರ ಗಮನ ಸೆಲೆಯಿತು.
ಖ್ಯಾತ ಬಾಲಿವುಡ್ ತಾರೆಯರಾದ ದಿಶಾ ಪಟಾನಿ ಹಾಗೂ ರಣ್ವೀರ್ ಸಿಂಗ್ರ ನೃತ್ಯ ಪ್ರದರ್ಶನ ಕಾರ್ಯಕ್ರಮದ ಪ್ರಮುಕ ಹೈಲೆಟ್ ಆಗಿತ್ತು.
ಪಂದ್ಯಗಳು ಶುಕ್ರವಾರದಿಂದ ಆರಂಭವಾಗಲಿದ್ದು ಜ.29ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ನೂತನವಾಗಿ ನಿರ್ಮಾಣಗೊಂಡ ರೊರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣ ಹಾಗೂ ಭುವನೇಶ್ವರದ ಕಳಿಂಗಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳಲಿದ್ದು ಡಿ ಗುಂಪಿನಲ್ಲಿ ಇಂಗ್ಲೆಂಡ್, ಸ್ಪೇನ್ ಹಾಗೂ ವೇಲ್ಸ್ ಜೊತೆ ಸ್ಥಾನ ಪಡೆದಿದೆ.








