Hockey World Cup : ಹಾಕಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಭಾರತ
ಪೆನಾಲ್ಟಿ ಶೂಟೌಟ್ನಲ್ಲಿ ಎಡವಿದ ಭಾರತ ಹಾಕಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದು ಆಘಾತ ಅನುಭವಿಸಿದೆ. ಇದರೊಂದಿಗೆ ತವರಿನಲ್ಲಿ ವಿಶ್ವಕಪ್ ಗೆಲ್ಲುವ ಭಾರತದ ಕನಸು ನುಚ್ಚುನೂರಾಗಿದೆ.
ಭುವನೇಶ್ವರದ ಇಲ್ಲಿನ ಕಳಿಂಗಾ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ಸೋತಿತು.
ಭಾರತ ಪರ ಲಲಿತ್ ಉಪಧ್ಯಾಯ (17ನೇ ನಿಮಿಷ), ಸುಖ್ಜೀತ್ ಸಿಂಗ್ (24ನೇ ನಿಮಿಷ), ವರುಣ್ ಕುಮಾರ್ (40 ನಿಮಿಷ) ಗೋಲುಗಳನ್ನು ಹೊಡೆದರು.
ನ್ಯೂಜಿಲೆಂಡ್ ಪರ ಲಾನೆ ಸ್ಯಾಮ್ (28ನೇ ನಿಮಿ), ರಸ್ಸೆಲ್ ಕೇನ್ (43ನೇ ನಿಮಿ), ಫಿನ್ಡ್ಲೆ ಸಿಯಾನ್ (49ನೇ ನಿಮಿಷ) ಗೋಲುಗಳನ್ನು ಹೊಡೆದರು.
ಪಂದ್ಯದ ಆರಂಭದಲ್ಲೇ ಭಾರತ ಎದುರಾಳಿ ಮೇಲೆ ಒತ್ತಡ ಹಾಕಿತು. 13ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಪಡೆಯಿತು. ಆದರೆ ನ್ಯೂಜಿಲೆಂಡ್ ಡಿಫೆಂಡರ್ಗಳು ಅವಕಾಶ ನೀಡಲಿಲ್ಲ. ಮೊದಲ ಕ್ವಾರ್ಟರ್ನಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ.
2ನೇ ಕ್ವಾರ್ಟರ್ನ ಆರಂಭದಲ್ಲಿ ನ್ಯೂಜಿಲೆಂಡ್ ಗೊಲು ಹೊಡೆಯುವ ಅವಕಾಶದಿಂದ ವಂಚಿತವಾಯಿತು.
18ನೇ ನಿಮಿಷದಲ್ಲಿ ಭಾರತದ ಲಲಿತ್ ಗೋಲು ಹೊಡೆದು ಮುನ್ನಡೆ ನೀಡಿದರು. ನಂತರ ನೀಲಕಂಠ ಶರ್ಮಾ ಹೊಡೆದ ಗೋಲನ್ನು ರೆಫೆರಿ ಒಪ್ಪಲಿಲ್ಲ.
25ನೇ ನಿಮಿಷದಲ್ಲಿ ಸುಖ್ಜೀತ್ ಸಿಂಗ್ ಗೋಲು ಬಾರಿಸಿದರು. ಇದಾದ ಮೂರೆ ನಿಮಿಷದಲ್ಲಿ ಸೈಮನ್ ಚೈಲ್ಡ್ ಸಹಾಯದಿಂದ ಲಾನೆ ಸಾಮ್ ಗೋಲು ಹೊಡೆದು ನ್ಯೂಜಿಲೆಂಡ್ ಗೋಲಿನ ಅಂತರ ಕಡಿಮೆ ಮಾಡಿತು.
39ನೇ ನಿಮಿಷದಲ್ಲಿ ಭಾರತ ಆರನೆ ಪೆನಾಲ್ಟಿ ಅವಕಾಶ ಪಡೆಯಿತ್ತಾದರೂ ಪ್ರಯೋಜನವಾಗಲಿಲ್ಲ.
40ನೇ ನಿಮಿಷದಲ್ಲಿ ವರುಣ್ ಕುಮಾರ್ ಗೋಲು ಹೊಡೆದು ಮತ್ತೆ ಗೋಲಿನ ಅಂತರ ಹೆಚ್ಚಿಸಿದರು. 44ನೇ ನಿಮಿಷದಲ್ಲಿ ನ್ಯೂಜಿಲೆಂಡ್ ಪರ ಕೇನ ರಸೆಲ್ ಗೋಲು ಹೊಡೆದು ಮತ್ತೆ ವಿಶ್ವಾಸ ಹೆಚ್ಚಿಸಿದರು.
ಮೂರನೆ ಕ್ವಾರ್ಟರ್ ಅಂತ್ಯದ ವೇಳೆ ಭಾರತ 3-2 ಗೋಲು ಗಳಿಸಿತ್ತು. ನಾಲ್ಕನೆ ಮತ್ತು ಅಂತಿಮ ಕ್ವಾರ್ಟರ್ನಲ್ಲಿ ನ್ಯೂಜಿಲೆಂಡ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತು.
50ನೇ ನಿಮಿಷದಲ್ಲಿ ಫಿನ್ಡ್ಲೆ ಸಿಯಾನ್ ಗೊಲು ಹೊಡೆದರು. ಎರಡೂ ತಂಡಗಳು 3-3 ಗೋಲುಗಳಿಗೆ ತೃಪ್ತಿಪಟ್ಟವು.
ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಒಂದು ಗೋಲಿನ ಅಂತರದಿಂದ ಸೋಲು
ಪೆನಾಲ್ಟಿ ಶೂಟೌಟ್ನಲ್ಲಿ ಭಾರತ 4-5 ಗೋಲುಗಳಿಂದ ಸೋಲು ಕಂಡಿತು.
ಭಾರತ ಪರ ಅಭಿಷೇಕ್, ಸಿಂಗ್ ಸಂಶೀರ್ ಮೊದಲೆರಡು ಗೊಳುಗಳನ್ನು ಹೊಡೆದರು, ನಂತರ ನ್ಯೂಜಿಲೆಂಡ್ನ ಲಾನೆ ಸ್ಯಾಮ್,ಹಿಹಾ ಸ್ಯಾಮ್ ವುಡ್ಸ್ ನಿಕ್ ಗೋಲು ಹೊಡೆದು ಮುನ್ನಡೆ ನೀಡಿದರು.
ಭಾರತ ಪರ ನಾಯಕ ಹರ್ಮನ್ಪ್ರೀತ್ ಗೋಲು ಹೊಡೆದರು. ನಂತರ ಫಿಲೀಪ್ಸ್ ಗೋಲು ಹೊಡೆದರು. ಕೊನೆಯಲ್ಲಿ ಸುಖ್ಜೀತ್ ಸಿಂಗ್ ಮತ್ತು ಸಿಂಗ್ ಶಂಶೀರ್ ಗೋಲು ಹೊಡೆದರಾದರೂ ಪ್ರಯೋಜನವಾಗಲಿಲ್ಲ.








