Holi | ಭಾರತದಾದ್ಯಂತ ಹೋಳಿ ಹಬ್ಬದ ಸಂಭ್ರಮ
ಮೋಜು-ಮಸ್ತಿಗಳಿಂದ ಕೂಡಿರುವ ಬಣ್ಣದ ಹಬ್ಬ
ವಸಂತ ಋತುವಿನ ಆರಂಭದ ಸಂಕೇತದ ಹಬ್ಬ
ಬಣ್ಣಗಳಿಂದ ಕೂಡಿರುವ ಜೀವನವನ್ನ ಆನಂದಿಸೋಣ
ವಿವಿಧ ರೀತಿ ಸಂಪ್ರದಾಯದೊಂದಿಗೆ ಹಬ್ಬ ಆಚರಣೆ
ಭಾರತದಾದ್ಯಂತ ಬಣ್ಣದ ಹಬ್ಬ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.
ಈ ಹಬ್ಬವು ಸಾಕಷ್ಟು ಮೋಜು-ಮಸ್ತಿಗಳಿಂದ ಕೂಡಿರುವುದರಿಂದ ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಇದನ್ನು ಅತ್ಯಂತ ಹರ್ಷೋದ್ಗಾರಗಳಿಂದ ಆಚರಿಸುತ್ತಿದ್ದಾರೆ.
ಒಬ್ಬರಿಗೊಬ್ಬರು ವಿವಿಧ ಬಣ್ಣಗಳನ್ನು ಮೈಮೇಲೆ ಎರಚಿಕೊಳ್ಳುತ್ತ ಉತ್ಸಾಹ ನಲಿಯುತ್ತಾರೆ.
ಭಾರತದ ಮಟ್ಟಿಗೆ ಹೇಳುವುದಾದರೆ ಇದು ವಸಂತ ಋತುವಿನ ಆರಂಭದ ಸಂಕೇತವಾಗಿ ಆಚರಿಸಲ್ಪಡುವ ಹಬ್ಬವಾಗಿದೆ.
ಇನ್ನು ಈ ಹಬ್ಬಕ್ಕೆ ಹಲವಾರು ಐತಿಹ್ಯಗಳಿವೆ. ಭಾರತದ ವಿವಿಧ ಭಾಗಗಳಲ್ಲಿ ಇದನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ.
ವಿವಿಧ ರೀತಿ ಸಂಪ್ರದಾಯದೊಂದಿಗೆ ಜನರು ಹಬ್ಬ ಆಚರಣೆ ಮಾಡುತ್ತಾರೆ.
ಒಟ್ಟಾರೆ ಹೋಳಿ ಹಬ್ಬದ ವಿಧಿ-ವಿಧಾನಗಳು ಏನೇ ಇದ್ದರೂ ಇದರ ಮೂಲ ತಿರುಳು ಒಂದೇ – ಜೀವನವೂ ವಿವಿಧ ಬಣ್ಣಗಳಿಂದ ಕೂಡಿದ್ದು ಅದನ್ನು ಅದ್ಭುತವಾಗಿ ಆನಂದಿಸಬೇಕು ಎಂದು ಹೋಳಿ ಹಬ್ಬ ಸಾರಿ ಹೇಳುತ್ತದೆ. Holi related special stories news Significance








