ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರ ನಿಧನದಿಂದ ರಾಜ್ಯವು ತನ್ನ ಮೌಲ್ಯಾಧಾರಿತ ನಾಯಕರಲ್ಲಿ ಒಬ್ಬರನ್ನು ಕಳೆದುಕೊಂಡಿದೆ.
ಮಾಜಿ ಮುಖ್ಯಮಂತ್ರಿ, ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ. ಕೃಷ್ಣ ಅವರು ತಮ್ಮ ಜೀವನವನ್ನೆಲ್ಲಾ ಸಾರ್ವಜನಿಕ ಸೇವೆಗೆ ಅರ್ಪಿಸಿದ್ದರು. ಅವರ ಕೊನೆಯಾತ್ರೆಯು ನಾಳೆ ಅವರ ಸ್ವಗ್ರಾಮ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ನಡೆಯಲಿದೆ.
ಮಂಡ್ಯ ಜಿಲ್ಲೆಯಲ್ಲಿ ಇಂದು ರಜೆ:
ರಾಜ್ಯ ಸರ್ಕಾರವು ಶ್ರದ್ಧಾಂಜಲಿಯನ್ನು ಸಲ್ಲಿಸಲು ಕೃಷ್ಣ ಅವರ ತಾಯ್ನಾಡಾದ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ರಾಜ್ಯಾದ್ಯಂತ ನಾಳೆ ರಜೆ:
ನಾಳೆ (ಡಿಸೆಂಬರ್ 11, 2024) ರಾಜ್ಯದಾದ್ಯಂತ ಸರಕಾರೀ ರಜೆ ಘೋಷಣೆ ಮಾಡಲಾಗಿದೆ. ಈ ಮೂಲಕ ಎಸ್.ಎಂ. ಕೃಷ್ಣ ಅವರ ಸೇವೆಗಳಿಗೆ ಸಂತಾಪ ಸೂಚಿಸಲು ಸರ್ಕಾರ ಮುಂದಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ನಾಳೆ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲೆಲ್ಲಾ ರಜೆಯ ಪರಿಣಾಮ:
ಸರ್ಕಾರಿ ಕಚೇರಿಗಳು: ನಾಳೆ ಸರ್ಕಾರದ ಎಲ್ಲಾ ಕಚೇರಿಗಳು ಮುಚ್ಚಿರುತ್ತವೆ.
ಶಾಲಾ-ಕಾಲೇಜುಗಳು: ಖಾಸಗಿ ಮತ್ತು ಸರ್ಕಾರಿ ಎಲ್ಲಾ ಶಿಕ್ಷಣ ಸಂಸ್ಥೆಗಳು ನಾಳೆ ರಜೆ ಇರಲಿದೆ.








