ಹಾಲಿವುಡಡ್ ಸಿನಿಮಾದ ಖ್ಯಾತ ನಿರ್ದೇಶಕ ಪೀಟರ್ ಬಾಗ್ದಾನವಿಚ್ ನಿಧನ
ಅಮೆರಿಕಾ : ದಿ ಲಾಸ್ಟ್ ಪಿಕ್ಚರ್ ಶೋ, ವಾಟ್ಸಪ್ ಡಾಕ್, ಪೇಪರ್ ಮೂನ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿರುವ ಹಾಲಿವುಡ್ ನ ಖ್ಯಾತ ನಿರ್ದೇಶಕ ,ಆಸ್ಕರ್ ಪ್ರಶಸ್ತಿ ಪುರಸ್ಕೃತ , ಪೀಟರ್ ಬಾಗ್ಡಾನವಿಚ್ ವಿಧಿವಶರಾಗಿದ್ದಾರೆ. 82 ವರ್ಷದ ಪೀಟರ್ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನ ಹೊಂದಿದ್ದು ಹಿಟ್ ಸಿನಿಮಾಗಳನ್ನ ನೀಡಿದ್ದರು.. ನಿರ್ದೇಶಕರಾಗುವ ಮುನ್ನ ಅವರು ವಿಮರ್ಶಕರಾಗಿ ಗುರುತಿಸಿಕೊಂಡಿದ್ದರು..
ನಟನಾಗಿಯೂ ಪೀಟರ್ ಬಾಗ್ಡಾನವಿಚ್ ಚಿಒರಪರಿಚಿರತರಾಗಿದ್ದರು. ಅನೇಕ ಸಾಕ್ಷ್ಯಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು. ಸಿನಿಮಾ ಸಂಬಂಧಿತ ಹಲವು ಕೃತಿಗಳನ್ನು ಕೂಡ ಅವರ ರಚಿಸಿದ್ದರು. ಅಲ್ಲದೇ ಗೋಲ್ಡನ್ ಗ್ಲೋಬ್, ಆಸ್ಕರ್, ಗ್ರ್ಯಾಮಿ ಅವಾರ್ಡ್ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಇದೀಗ ವಯೋಸಹಜ ಕಾಯಿಲೆಯಿಂದಾಗಿ ಇವರು ಇಹಲೋಕ ತ್ಯಜಿಸಿದ್ದು ಬಾಲಿವುಡ್ ಮಂದಿ ಕಂಬನಿ ಮಿಡಿದಿದ್ದಾರೆ..