ವಿಶ್ವದಾಖಲೆಗಳ ನಿರ್ಮಿಸಿದ್ದಹಾಲಿವುಡ್ ಸೂಪರ್ ಡೂಪರ್ ಹಿಟ್ ಚಿತ್ರವಾದ “ಅವತಾರ್” ನ ಭಾಗ -2 ಅಂದ್ರೆ ಅವತಾರ್ 2 ನ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದೆ.
ವಿಶ್ವಾದ್ಯಂತ ಜನಪ್ರಿಯತೆ ಪಡೆದಿದ್ದ “ಅವತಾರ್” ಚಿತ್ರದ ಎರಡನೇ ಭಾಗ ‘ಅವತಾರ್ 2’ ಚಿತ್ರೀಕರಣ ಪೂರ್ಣವಾಗಿದೆ ಎಂದು ನಿರ್ದೇಶಕ ಜೇಮ್ಸ್ ಕ್ಯಾಮರನ್ ತಿಳಿಸಿದ್ದಾರೆ.
2009 ರಲ್ಲಿ ‘ಅವತಾರ್’ ಸಿನಿಮಾ ಬಿಡುಗಡೆ ಆಗಿ ಬ್ಲಾಕ್ ಬಾಸ್ಟರ್ ಆಗಿ ಹೊರಹೊಮ್ಮಿತ್ತು.
ಇನ್ನೂ ಆಗಲೇ ಭಾಗ -2 ಅನ್ನು ಸಹ ಘೋಷಣೆ ಮಾಡಲಾಗಿತ್ತು. ಚಿತ್ರ ಅನೌನ್ಸ್ ಆದ ಬರೋಬ್ಬರಿ 10 ವರ್ಷಗಳ ಬಳಿಕ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಇನ್ನೂ ಅವತಾರ್ ಯಾವಾಗ ರರಿಲೀಸ್ ಆಗುತ್ತಿದ್ದ ಸಿನಿಪ್ರಿಯರಿಗೆ ಡಬಲ್ ಖುಷಿ ಸಿಕ್ಕಿದೆ.
ಅದೇನಪ್ಪಾ ಅಂದ್ರೆ ಭಾಗ -2 ಜೊತೆಗೆ , ಭಾಗ 3 ರ ಚಿತ್ರೀಕರಣವೂ ಈಗಾಗಲೇ ಶೇ 95 ಮುಗಿದಿದೆಯಂತೆ.
ಹೀಗಾಗಿ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.
ಅವತಾರ್ 2 ಸಿನಿಮಾ ಡಿಸೆಂಬರ್ 16, 2022 ಕ್ಕೆ ತೆರೆಗಪ್ಪಳಿಸಲಿದೆ.
ಅವತಾರ್ 3 ಸಿನಿಮಾ ಡಿಸೆಂಬರ್ 20, 2024 ಕ್ಕೆ ರರಿಲೀಸ್ ಆಗಲಿದೆ.
ಅವತಾರ್ 4 ಸಿನಿಮಾ ಡಿಸೆಂಬರ್ 18, 2026 ಕ್ಕೆ ಹಾಗೂ ಅವತಾರ್ 5 ಸಿನಿಮಾವು ಡಿಸೆಂಬರ್ 22, 2028 ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.







