ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಶುಭಕೋರಿದ ಹೊಂಬಾಳೆ ಫಿಲಂಸ್..!
ಯಶ್ ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿ ಹೊಂಬಾಳೆ ಫಿಲಮ್ಸ್ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.. ಹೊಂಬಾಳೆ ಫಿಲಂಸ್ ಮೂಲಕ ನಿರ್ಮಾಪಕ “ಕೆ.ಜಿ.ಎಫ್ 2” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಬಹು ನಿರೀಕ್ಷಿತ ಈ ಪ್ಯಾನ್ ಇಂಡಿಯಾ ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ.
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ… ಕೋವಿಎ ಇರದೇ ಇದ್ದಿದ್ದರೆ ಇಷ್ಟೊತ್ತಿಗೆ ಯಶ್ ಅಭಿಮಾನಿಗಳು ದೊಡ್ಡ ಜಾತ್ರೆಯಂತೆಯೇ ಅದ್ಧೂರಿಯಾಗೆ ರಾಖಿ ಭಾಯ್ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಿದ್ರು..
ಆದ್ರೆ ಕೊರೊನಾ ಹಾವಳಿಯಿಂದಾಗಿ ಯಶ್ , ಫ್ಯಾಮಿಲಿ ಮತ್ತು ಆಪ್ತರೊಂದಿಗೆ ಸರಳ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಯಶ್ ಜಾತ್ರೆ ಆರಂಭಿಸಿದ್ದಾರೆ ಅಭಿಮಾನಿಗಳು , ಕಾಮನ್ ಡಿಪಿ ರಿಲೀಸ್ ಮಾಡಲಾಗಿದೆ.. ಮತ್ತೊಂದೆಡೆ ಹ್ಯಾಪಿ ಬರ್ತ್ ಡೇ ಯಶ್ ಟ್ರೆಂಡ್ ಆಗ್ತಿದೆ.. ಯಶ್ ಅವರಿಗೆ ಸಿನಿಮಾ ಸೆಲೆಬ್ರಿಟಿಗಳು , ಗಣ್ಯರು ಸಹ ವಿಷ್ ಮಾಡ್ತಾಯಿದ್ದಾರೆ..








