`ಪ್ರಶಾಂತ್ ನೀಲ್ ಕಥೆ’ಯಲ್ಲಿ `ಬಘೀರನಾದ ಶ್ರೀಮುರಳಿ’
ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಮುರಳಿ ಅಭಿನಯದ ಮದಗಜ ಸಿನಿಮಾದ ಫಸ್ಟ್ ಲುಕ್ ಟೀಸರ್ ಈಗಾಗಲೇ ಬಿಡುಗಡೆಯಾಗಿ ಯುಟ್ಯೂಬ್ ನಲ್ಲಿ ರೌದ್ರ ನರ್ತನ ಮಾಡುತ್ತಿದೆ. ಈ ಮಧ್ಯೆ ಶ್ರೀ ಮುರಳಿಯ ಮುಂದಿನ ಸಿನಿಮಾ ಅನೌನ್ಸ್ ಆಗಿದೆ.
ಇತ್ತೀಚಿಗಷ್ಟೆ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಅನೌನ್ಸ್ ಮಾಡಿದ್ದ ಹೊಂಬಾಳೆ ಫಿಲ್ಮ್ಸ ಮತ್ತೊಂದು ಸಿನಿಮಾ ಬಹಿರಂಗ ಪಡಿಸುವುದಾಗಿ ಟ್ವೀಟ್ ಮಾಡಿತ್ತು.
ಶ್ರೀಮುರಳಿ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ ಹೇಳಿದ್ದ ಕಾರಣ, ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾ ಶ್ರೀಮುರಳಿ ಜೊತೆ ಎನ್ನುವ ಅನುಮಾನ ಎಲ್ಲರಲ್ಲೂ ಇತ್ತು.
ಅದರಂತೆ ಈಗ ಹೊಸ ಸಿನಿಮಾ ಘೋಷಣೆ ಆಗಿದ್ದು, ಮುರಳಿ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಸಿಕ್ಕಿದೆ.
ಪ್ರಶಾಂತ್ ನೀಲ್ ಕಥೆಯಲ್ಲಿ ಬಘೀರನಾದ ಶ್ರೀ ಮುರಳಿ
ಬಘೀರ ಎಂದ ಕೂಡಲೇ ಜಂಗಲ್ ಬುಕ್ ಸಿನಿಮಾದ ವಿಶೇಷ ಪಾತ್ರದ ಹೆಸರು ನೆನಪಾಗುತ್ತೆ. ಅದೇ ಹೆಸರನ್ನು ಶ್ರೀಮುರಳಿ ಮುಂದಿನ ಸಿನಿಮಾಗೆ ಇಟ್ಟಿರುವುದು ಕುತೂಹಲ ಮೂಡಿಸಿದೆ.
ವಿಶೇಷ ಎಂದರೆ ಈ ಸಿನಿಮಾದ ಕಥೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಬರೆದಿದ್ದಾರೆ. ಇದು ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಶ್ರೀಮುರಳಿ ಗಂಭೀರ ಲುಕ್ ಬೀರುವ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ.
‘ಸಮಾಜವು ಕಾಡಾಗಿ ಬದಲಾದಾಗ ಮತ್ತು ನ್ಯಾಯಕ್ಕಾಗಿ ಕೇವಲ ಒಂದು ಪ್ರಿಡೇಟರ್ ಘರ್ಜಿಸುತ್ತದೆ’ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಇದೇ ಸಿನಿಮಾದ ಟ್ಯಾಗ್ ಲೈನ್ ಕೂಡ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel