ಸ್ವದೇಶಿ ನಿರ್ಮಿತ ಅತ್ಯಾಧುನಿಕ ಫಿರಂಗಿಯ ಪ್ರಯೋಗ ಯಶಸ್ವಿ
ನವದೆಹಲಿ : ಸ್ವದೇಶಿ ನಿರ್ಮಿತ ಅತ್ಯಾಧುನಿಕ ಫಿರಂಗಿಯ ಪ್ರಯೋಗ ಯಶಸ್ವಿಯಾಗಿದೆ. ಈ ಮೂಲಕ ಭಾರತೀಯ ಸಶಸ್ತ್ರಪಡೆಗಳಿಗೆ ಮತ್ತಷ್ಟು ಬಲ ತುಂಬಿದೆ.
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಫಿರಂಗಿಯ ಅಭಿವೃದ್ಧಿಪಡಿಸಿದೆ. ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ATAGS) ಹೆಸರಿನ ಫಿರಂಗಿ ಇದಾಗಿದೆ. ಇದನ್ನು ಭಾರತ್ ಫೋರ್ಜ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಎಂಬ ಎರಡು ಕಂಪೆನಿಗಳಿಂದ ತಯಾರಿಸಲ್ಪಟ್ಟಿದೆ.
ಇದು ಭಾರತೀಯ ಸೇನೆಯ ಫಿರಂಗಿ ಆಧುನೀಕರಣ ಕಾರ್ಯಕ್ರಮದ ಭಾಗವಾಗಿ DRDO ನಿಂದ ಮಿಷನ್ ಮೋಡ್‌ನಲ್ಲಿ ಕೈಗೊಂಡ ಸಂಪೂರ್ಣ ಸ್ವದೇಶಿ ಟವ್ಡ್ ಫಿರಂಗಿ ಗನ್ ಸಿಸ್ಟಮ್ ಯೋಜನೆಯಾಗಿದೆ. ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ (ಪಿಎಫ್‌ಎಫ್‌ಆರ್) ನಲ್ಲಿ ಇವುಗಳ ಪ್ರಯೋಗ ಯಶಸ್ವಿಯಾಗಿದ್ದು ಮುಖ್ಯವಾಗಿ ಭಾರತೀಯ ಸೇನೆಯ ಟವರ್ ಹೊವಿಟ್ಜರ್ ಫ್ಲೀಟ್‌ಗೆ ಮುಖ್ಯ ಆಧಾರವಾಗಲಿವೆ. ಜೊತೆಗೆ ಬೋಫೋರ್ಸ್ ನ ಫಿರಂಗಿಗಳಿಗೆ ಬದಲಾಗಿಯೂ ಇವುಗಳನ್ನು ಬಳಸಬಹುದಾಗಿದೆ ಎಂದು ವರದಿಗಳು ಹೇಳಿವೆ.