ಗೃಹ ಸಚಿವ ಅಮಿತ್ ಶಾ ಮತ್ತೆ ಏಮ್ಸ್ ಗೆ ದಾಖಲು
ಹೊಸದಿಲ್ಲಿ, ಸೆಪ್ಟೆಂಬರ್13: ಪೋಸ್ಟ್ ಕೋವಿಡ್ ಚಿಕಿತ್ಸೆಯನ್ನು ಪಡೆದ ನಂತರ ಆಗಸ್ಟ್ 31 ರಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಿಂದ ಬಿಡುಗಡೆಯಾದ ಗೃಹ ಸಚಿವ ಅಮಿತ್ ಶಾ ಅವರನ್ನು ಮತ್ತೊಮ್ಮೆ ಏಮ್ಸ್ ಗೆ ದಾಖಲಿಸಲಾಗಿದೆ. ಅವರು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆಯಾದರೂ ಇದನ್ನು ಆಸ್ಪತ್ರೆಯ ಮೂಲಗಳು ದೃಢೀಕರಿಸಿಲ್ಲ.
ಶನಿವಾರ ರಾತ್ರಿ 11 ರ ಸುಮಾರಿಗೆ ಅಮಿತ್ ಷಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ರಾತ್ರಿ. ವಿವಿಐಪಿಗಳಿಗಾಗಿ ಕಾಯ್ದಿರಿಸಲಾಗಿರುವ ಸಿಎನ್ ಟವರ್‌ನಲ್ಲಿ ಗೃಹ ಸಚಿವರನ್ನು ಇರಿಸಲಾಗಿದೆ. ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಶಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ.