ಮುಂದಿನ ಜನಗಣತಿ 100% ನಿಖರತೆಯೊಂದಿಗೆ ಸಂಪೂರ್ಣ ಡಿಜಿಟಲ್ – ಅಮಿತ್ ಶಾ…
ಮುಂದಿನ ಜನಗಣತಿ 100ರಷ್ಟು ನಿಖರತೆಯೊಂದಿಗೆ ಸಂಪೂರ್ಣ ಡಿಜಿಟಲ್ ಆಗಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಅವರು ಅಸ್ಸಾಂ ನಲ್ಲಿ ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯದ ಹೊಸ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಜನಗಣತಿಯೊಂದಿಗೆ ಜನನ ಮತ್ತು ಮರಣ ದಾಖಲಾತಿಯನ್ನು ಜೋಡಿಸಲಾಗುವುದು, ಎಲೆಕ್ಟ್ರಾನಿಕ್ ಪ್ರಕ್ರಿಯೆ ಮತ್ತು ಜನರ ಎಣಿಕೆಯೊಂದಿಗೆ, ದೇಶದಲ್ಲಿ ಪ್ರತಿ ಜನನ ಮತ್ತು ಸಾವಿನ ನಂತರ ಜನಗಣತಿಯನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ ಎಂದು ಗೃಹ ಸಚಿವರು ಹೇಳಿದರು.
ಡಿಜಿಟಲ್ ಜನಗಣತಿಯು ಮುಂದಿನ 25 ವರ್ಷಗಳ ದೇಶದ ನೀತಿಗಳನ್ನು ರೂಪಿಸುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021 ರ ಜನಗಣತಿ ವಿಳಂಬವಾಗಿದೆ. ಇದು 2024 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅಮಿತ್ ಷಾ ಹೇಳಿದರು. ಪರಿಪೂರ್ಣ ಜನಗಣತಿ ಇಲ್ಲದೆ ಯಾವುದೇ ಅಭಿವೃದ್ಧಿ ಕೆಲಸ ಅಥವಾ ಯೋಜನೆಗೆ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದರು.
ಒಬ್ಬ ವ್ಯಕ್ತಿಗೆ 18 ವರ್ಷ ತುಂಬಿದ ನಂತರ, ಅವರ ಹೆಸರನ್ನು ಜನಗಣತಿ ಕಚೇರಿಯಿಂದಲೇ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗುತ್ತದೆ. ಒಮ್ಮೆ ಆ ವ್ಯಕ್ತಿ ಸತ್ತರೆ ಮತದಾರರ ಪಟ್ಟಿಯಿಂದ, ಜನಗಣತಿ ಕಚೇರಿಯಿಂದ ಹೆಸರುಗಳನ್ನ ತೆಗೆದುಹಾಕಲಾಗುತ್ತದೆ. ಜನರು ವಿಳಾಸ ಬದಲಾಯಿಸುವ ವಿವರಗಳನ್ನು ಸಾಫ್ಟ್‌ವೇರ್ ಮೂಲಕ ನವೀಕರಿಸಲಾಗುತ್ತದೆ ಎಂದು ಅಮಿತ್ ಶಾ ಹೇಳಿದರು.








