Shivamogga | ಹಳ್ಳದಲ್ಲಿ ಬಿದ್ದು ಮಹಿಳೆ ಸಾವು | ಕುಟುಂಬಕ್ಕೆ ಪರಿಹಾರ
ಶಿವಮೊಗ್ಗ : ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮದಲ್ಲಿ ಮಹಿಳೆ ಒಬ್ಬರು ಹಳ್ಳಕ್ಕೆ ಜಾರಿ ಬಿದ್ದು ಮೃತಪಟ್ಟಿದ್ದರು.
ಇದೀಗ ಮೃತಪಟ್ಟ ಮಹಿಳೆಯ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಐದು ಲಕ್ಷ ರುಪಾಯಿ ಪರಿಹಾರ ನೀಡಿದ್ದಾರೆ.
ಸೋಮವಾರ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಗೋಡು ಗ್ರಾಮದಲ್ಲಿ ಭವಾನಿ ಶಂಕರನಾರಾಯಣ ಎಂಬುವವರು ಹಳ್ಳಕ್ಕೆ ಬಿದ್ದು ಕೊನೆಯುಸಿರೆಳೆದಿದ್ದರು.

ಮಳೆಯ ನಡುವೆ ಭವಾನಿಯವರು ತೋಟಕ್ಕೆ ಭೇಟಿ ನೀಡಿದ್ದರು.
ಸಂಜೆಯಾದ್ರೂ ಮನೆಗೆ ವಾಪಸ್ ಆಗದ ಕಾರಣ ಕುಟುಂಬಸ್ಥರು ತೋಟದ ಬಳಿ ಹುಡುಕಿದಾಗ ಹಳ್ಳದಲ್ಲಿ ಭವಾನಿಯವರ ಮೃತದೇಹ ಪತ್ತೆಯಾಗಿತ್ತು.
ಇತ್ತ ತಾಲೂಕು ಆಡಳಿತ ಭವಾನಿ ಮಳೆಯಿಂದ ಸಾವನ್ನಪ್ಪಿರುವ ಬಗ್ಗೆ ವರದಿ ಮಾಡಿತ್ತು.
ಇದರ ಅನ್ವಯ ತೀರ್ಥಹಳ್ಳಿ ಶಾಸಕರಾಗಿರುವ ಆರಗ ಜ್ಞಾನೇಂದ್ರ ಅಧಿಕಾರಿಗಳ ಜೊತೆ ಆಗಮಿಸಿ ಪರಿಹಾರದ ಚೆಕ್ ನೀಡಿದ್ದಾರೆ.








