ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲ, ಇನ್ನೂ ಎಳಸು: ಶಿವಕುಮಾರ್ ಗುಡುಗು Saaksha Tv
ಬೆಂಗಳೂರು : ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲ. ರೋಡ್ ನಲ್ಲಿ ನಾನು ನಡೆಯೋದಕ್ಕೆ ಇವರ ಅನುಮತಿ ಬೇಕಾ, ಇನ್ನೂ ಹೋಂ ಮಿನಿಸ್ಟರ್ ಎಳಸು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಗೆ ಸಂಬಂಧಿಸಿದಂತೆ ನಮ್ಮಲ್ಲಿಯಾರು ಅನುಮತಿ ಕೇಳಿಲ್ಲ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ಡಿ,ಕೆಶಿ ಟಾಂಗ್ ಕೊಟ್ಟಿದ್ದಾರೆ.
ಇಂದು ಮುಂಜಾನೆ ಸ್ಯಾಂಕಿ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲ. ರೋಡ್ ನಲ್ಲಿ ನಾನು ನಡೆಯೋದಕ್ಕೆ ಇವರ ಅನುಮತಿ ಬೇಕಾ, ಇನ್ನೂ ಹೋಂ ಮಿನಿಸ್ಟರ್ ಎಳಸು, ಅವರು ವಯಸ್ಸಲ್ಲಿ ದೊಡ್ಡವರಿರಬಹದು, ಆದರೆ ರಾಜಕೀಯದಲ್ಲಿ ಇನ್ನೂ ಎಳಸು ಎಂದು ತಿರುಗೇಟು ನೀಡಿದರು.
ಇದೇ ವೇಳೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬಗ್ಗೆ ಮಾತನಾಡಿದ ಡಿಕೆಶಿ, ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ತಾನೇ ದೇವೇಗೌಡರ ಎದುರು ಅವತ್ತು ಚುನಾವಣೆಗೆ ನಿಲ್ಲಿಸಿದ್ರು. ಸೋತಿರಬಹುದು, ಆದರೆ ಅಂಥ ಹೋರಾಟಗಾರರ ಮುಂದೆ ನನ್ನ ನಿಲ್ಲಿಸಬೇಕು ಅಂದರೆ ನನ್ನ ಹೋರಾಟದ ಗುಣ ಕೂಡ ಕಾರಣ ಅಲ್ವಾ ಎಂದು ಪ್ರಶ್ನಿಸಿದರು.