ವ್ಯಾಯಾಮ ಮತ್ತು ಆಹಾರದ ನಿರ್ಬಂಧಗಳಿಲ್ಲದೆ ತೂಕ ಕಡಿಮೆ ಮಾಡಲು ಜೇನು ಮತ್ತು ಬೆಳ್ಳುಳ್ಳಿಯ ಮನೆಮದ್ದು Saakshatv healthtips weight loss
ಮಂಗಳೂರು, ಜನವರಿ19: ಬೆಳ್ಳುಳ್ಳಿಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಭಾರತೀಯ ಪಾಕಗಳಲ್ಲಿ ಹೆಚ್ಚಾಗಿ ಬಳಸುವ ಈ ಬೆಳ್ಳುಳ್ಳಿಯಲ್ಲಿ ಹಲವಾರು ಆರೋಗ್ಯದ ರಹಸ್ಯಗಳು ಅಡಗಿವೆ. Saakshatv healthtips weight loss
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಬೆಳ್ಳುಳ್ಳಿಯ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಅಪಧಮನಿಗಳ ಮೂಲಕ ರಕ್ತದ ಸುಗಮ ಹರಿವಿಗೆ ನೆರವಾಗುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಉರಿಯೂತದ ವಿರುದ್ಧ ಹೋರಾಡಲು ಸಹ ಇದು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಪ್ಲೇವೊನೋಯ್ಡ್ಸ್ ಡಿಎನ್ಎಗೆ ಹಾನಿಯಾಗದಂತೆ ಕಾಪಾಡುವ ಕಾರಣ ಇದು ಕ್ಯಾನ್ಸರ್ ಕಣಗಳು ಉಂಟಾಗುವುದನ್ನು ತಡೆಯಲು ನೆರವಾಗುತ್ತದೆ.
ಬೆಳ್ಳುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಡ್ ಅಂಶ ಹೆಚ್ಚಾಗಿರುವ ಕಾರಣ ಮಾನಸಿಕ ಒತ್ತಡ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ
ಅಷ್ಟೇ ಅಲ್ಲ ಬೆಳ್ಳುಳ್ಳಿ ಪರಿಣಾಮಕಾರಿಯಾಗಿ ತೂಕವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಇದು ಬಿ 6 ಮತ್ತು ಸಿ, ಫೈಬರ್, ಮ್ಯಾಂಗನೀಸ್, ಕ್ಯಾಲ್ಸಿಯಂನಂತಹ ಅನೇಕ ಜೀವಸತ್ವಗಳಿಂದ ತುಂಬಿದೆ. ಇದು ಯಾವುದೇ ಸಮಯದಲ್ಲೂ ಹೆಚ್ಚುವರಿ ಕೊಬ್ಬನ್ನು, ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ಸಹಾಯ ಮಾಡುವ ಸೂಪರ್ ಆಹಾರವಾಗಿದೆ. ಬೆಳ್ಳುಳ್ಳಿ ಸಹಾಯದಿಂದ ವ್ಯಾಯಾಮ ಮತ್ತು ಆಹಾರದ ನಿರ್ಬಂಧಗಳಿಲ್ಲದೆ ತೂಕವನ್ನು ಕಳೆದುಕೊಳ್ಳಬಹುದಾಗಿದೆ.
ಬೆಳ್ಳುಳ್ಳಿ ಸೇವನೆಯಿಂದ ತೂಕ ಇಳಿಸುವುದು ಹೇಗೆ
ನೀವು ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರೆ, ಅದು ಸುಲಭವಲ್ಲ ಎಂದು ನಿಮಗೆ ಈಗಾಗಲೇ ತಿಳಿದಿರುತ್ತದೆ. ಕೆಲವೊಮ್ಮೆ, ಶ್ರಮದಾಯಕ ವ್ಯಾಯಾಮದಿಂದ ಹಿಡಿದು ಆಹಾರ ಸೇವನೆಯನ್ನು ಕಡಿಮೆಗೊಳಿಸಿದರೂ ಸಹ, ತೂಕವನ್ನು ಕಳೆದುಕೊಳ್ಳಲು ಅಸಾಧ್ಯವಾಗಬಹುದು. ಆದರೆ ಹಸಿ ಬೆಳ್ಳುಳ್ಳಿ ಸೇವನೆ ತೂಕವು ಕಳೆದುಕೊಳ್ಳಲು ಒಂದು ಉತ್ತಮ ರಹಸ್ಯವಾಗಿದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯುವುದು, ಮುಂಜಾನೆ ನಿಂಬೆ ಮತ್ತು ಜೇನುತುಪ್ಪವನ್ನು ಸೇವಿಸುವುದು ಮತ್ತು ಇತರ ವಿಧಾನಗಳ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ ಇಲ್ಲಿ, ನಾವು ಬೆಳ್ಳುಳ್ಳಿಯನ್ನು ಜೇನುತುಪ್ಪದಲ್ಲಿ ಸೇರಿಸಿ ಹೇಗೆ ಪರಿಣಾಮಕಾರಿಯಾಗಿ ತೂಕವನ್ನು ಕಳೆದುಕೊಳ್ಳಬಹುದು ಎಂದು ತಿಳಿಸಿದ್ದೇವೆ .
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುವ ಸೂಪರ್ ಪವರ್‌ಫುಲ್ ಆಹಾರಗಳು
ಹಸಿ ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಪ್ರಯೋಜನಗಳು
ಖಾಲಿ ಹೊಟ್ಟೆಯಲ್ಲಿ ಎರಡು ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ, ಅದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ. ಅಷ್ಟೇ ಅಲ್ಲ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ಸಹ ಸುಧಾರಣೆಯನ್ನು ಕಾಣಬಹುದು.
ಉತ್ತಮ ರೋಗನಿರೋಧಕ ಶಕ್ತಿಯನ್ನು ಪಡೆಯಲು ಕೂಡ ಬೆಳ್ಳುಳ್ಳಿ ಸಹಕಾರಿಯಾಗಿದೆ. ಇದು ಶೀತ ಮತ್ತು ಜ್ವರವನ್ನು ಕಡಿಮೆಗೊಳಿಸುವುದರ ಜೊತೆಗೆ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ.
ಆದರೆ ಇದಕ್ಕೆ ನೀವು ಜೇನುತುಪ್ಪವನ್ನು ಸೇರಿಸಿದಾಗ, ಅದು ನಿಮ್ಮನ್ನು ಸಂಪೂರ್ಣವಾಗಿ ನಿರ್ವಿಷಗೊಳಿಸುವ ಪ್ರಬಲ ಟಾನಿಕ್ ಆಗುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಮತ್ತು ಚಯಾಪಚಯವನ್ನು ಹೆಚ್ಚಿಸಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೇನು ಹಸಿವನ್ನು ತಡೆಯುತ್ತದೆ ಮತ್ತು ಇದು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮುಕ್ತವಾಗಿದೆ. ಇದರ ಸೇವನೆ ದಿನವಿಡೀ ನಿಮ್ಮನ್ನು ಚೈತನ್ಯಗೊಳಿಸುತ್ತದೆ. ಜೊತೆಗೆ ಬೆಳ್ಳುಳ್ಳಿ ನಿಮ್ಮ ತೂಕವನ್ನು ಕಡಿಮೆ ಮಾಡಲು ಮತ್ತು ರೋಗಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.
ಸುಲಭವಾಗಿ ತೂಕವನ್ನು ಕಡಿಮೆ ಮಾಡಲು ಜೇನು ಮತ್ತು ಬೆಳ್ಳುಳ್ಳಿಯ ಟಾನಿಕ್ ತಯಾರಿಸುವ ಬಗೆ ಹೇಗೆ ?
ಗಾಜಿನ ಜಾರು ತೆಗೆದುಕೊಂಡು ಅದರಲ್ಲಿ ಅರ್ಧದಷ್ಟು ಶುದ್ಧವಾದ ಮತ್ತು ಸಾವಯವ ಜೇನುತುಪ್ಪವನ್ನು ತುಂಬಿಸಿ. ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಜೇನುತುಪ್ಪದ ಜಾರಿಗೆ ಸೇರಿಸಿ. ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ಜೇನುತುಪ್ಪದಲ್ಲಿ ಮುಳುಗಿಸಬೇಕು. ಜೇನಿನಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಬೆರೆಸಿಟ್ಟಿರುವ ಗಾಜಿನ ಜಾರನ್ನು ಒಂದು ತಿಂಗಳವರೆಗೆ ಹಾಗೆಯೇ ಮುಚ್ಚಿಡಿ. ಇದು ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಪೋಷಕಾಂಶಗಳನ್ನು ವಿಲೀನಗೊಳಿಸಲು ಅನುವು ಮಾಡಿಕೊಡುತ್ತದೆ.
ಇದನ್ನು ಸೇವಿಸುವ ಬಗೆ ಹೇಗೆ
ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದಾಗಿದೆ. ಗಾಜಿನ ಜಾರಿನಲ್ಲಿರುವ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ಸೇವಿಸಿ. ಇದನ್ನು ಪ್ರತಿದಿನ ಒಂದು ತಿಂಗಳವರೆಗೆ ಪ್ರಯತ್ನಿಸಿದರೆ ಗಮನಾರ್ಹ ಬದಲಾವಣೆಯನ್ನು ನೀವು ಗಮನಿಸಬಹುದು.
ಎಚ್ಚರಿಕೆ :
ಇದು ಯಾರಾದರೂ ಬಳಸಬಹುದಾದ ಆರೋಗ್ಯಕರ ಟಾನಿಕ್ ಆಗಿದೆ. ಆದರೆ ನೀವು ಆಸ್ತಮಾದಿಂದ ಬಳಲುತ್ತಿದ್ದರೆ, ಇದನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಆಸ್ತಮಾದಿಂದ ಬಳಲುತ್ತಿರುವವರಿಗೆ ಬೆಳ್ಳುಳ್ಳಿ ಒಳ್ಳೆಯದಲ್ಲ. ಅಷ್ಟೇ ಅಲ್ಲ ಇದನ್ನು ಅತಿಯಾಗಿ ಬಳಸದಂತೆ ಕೂಡ ಎಚ್ಚರಿಕೆ ವಹಿಸಿ. ದಿನಕ್ಕೆ ಕೇವಲ 2-3 ಬೆಳ್ಳುಳ್ಳಿ ಎಸಳುಗಳನ್ನು ಬಳಸಿಕೊಂಡು ಈ ಟಾನಿಕ್ ಅನ್ನು ಸೇವಿಸಿ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ಆದ್ದರಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಬೇಡಿ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಚಹಾದೊಂದಿಗೆ ಈ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ https://t.co/4Zj2CInM6s
— Saaksha TV (@SaakshaTv) January 17, 2021
ಸ್ಮಾರ್ಟ್ಫೋನ್ ಖರೀದಿಸಬೇಕೆಂದಿದ್ದೀರಾ? ಹಾಗಿದ್ದರೆ ಕೆಲವು ದಿನ ಕಾಯಿರಿhttps://t.co/w7BPVNZ9sj
— Saaksha TV (@SaakshaTv) January 18, 2021