ಹೋಂಡಾ ಕಂಪನಿಯ ಹೊಸ ವಿನ್ಯಾಸದ ಬೈಕ್ ಹೋಂಡಾ ಸಿಬಿ 350 ಆರ್ ಎಸ್ ಶೀಘ್ರವೇ ಮಾರುಕಟ್ಟೆಗೆ
ಭಾರತದಲ್ಲಿ ನ್ಯೂ ಹೋಂಡಾ ಸಿಬಿ 350ಆರ್ಎಸ್ನ್ನು ಲಾಂಚ್ ಮಾಡೋದಾಗಿ ಹೋಂಡಾ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಕಂಪನಿ ಘೋಷಣೆ ಮಾಡಿದೆ. ಅಲ್ದೇ ಭಾರತದಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 1.96 ಲಕ್ಷ ರೂಪಾಯಿ ಇದೆ ಎಂದು ಕಂಪನಿ ತಿಳಿಸಿದೆ.
ಕಳೆದ ವರ್ಷ ಬಿಡುಗಡೆಯಾದ ಸಿಬಿ 350ಯ ಮಾದರಿಯನ್ನೇ ಹೋಂಡಾ ಸಿಬಿ 350ಆರ್ಎಸ್ ಹೊಂದಿದೆ. ಆದರೆ ಇದರಲ್ಲಿ ಕೆಲ ಬದಲಾವಣೆಗಳನ್ನ ಮಾಡಲಾಗಿದೆ. ಸೈಡ್ ಪ್ಯಾನೆಲ್, ಫ್ರಂಟ್ ಹಾಗೂ ರಿಯರ್ ಫೆಂಡರ್, ಹೆಡ್ಲ್ಯಾಂಪ್, ಹಾರ್ನ್ ಹೀಗೆ ಅನೇಕ ಭಾಗಗಳನ್ನ ಕಪ್ಪು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. ನೋಡಲು ಇನ್ನೂ ಅಟ್ರ್ಯಾಕ್ಟೀವ್ ಆಗಿದೆ. ಸಿಬಿ 350 ಆರ್ ಎಸ್ ರೇಡಿಯಂಟ್ ರೆಡ್ ಮೆಟಾಲಿಕ್ ಮತ್ತು ಬ್ಲ್ಯಾಕ್ ವಿತ್ ಪರ್ಲ್ ಸ್ಪೋರ್ಟ್ಸ್ ಹಳದಿ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.
ಶೀಘ್ರದಲ್ಲೇ E -SIM ಜಾರಿಗೆ : ಈ ವ್ಯವಸ್ಥೆಯ ವಿಶೇಷತೆಗಳು..!
ಹೊಸ ಎಲ್ ಇಡಿ ಟೈಲ್ ಲ್ಯಾಂಪ್ ವಿನ್ಯಾಸ, ಎಲ್ಇಡಿ ಸೂಚಕ, ಇಂಜಿನ್ ಅಡಿಯಲ್ಲಿ ಹೊಸ ಸ್ಕಿಡ್ ಪ್ಲೇಟ್, ಸಿಬಿ 350 ಫ್ರಂಟ್ ಫೋರ್ಕ್ ಗೇಟರ್ಗಳು ಹಾಗೂ ಆಸನವನ್ನ ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಈಗಾಗಲೇ ಈ ಹೊಸ ಬೈಕ್ಗೆ ಬುಕ್ಕಿಂಗ್ ಪ್ರಾರಂಭವಾಗಿದೆ. 2021ರ ಮಾರ್ಚ್ ಮಧ್ಯದಿಂದ ವಿತರಣೆ ಪ್ರಕ್ರಿಯೆ ಶುರು ಮಾಡುವ ನಿಸಾಧ್ಯತೆಯಿದೆ ಎನ್ನಲಾಗಿದೆ.








