`ಬಿಜೆಪಿಯಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ, ದುಡ್ಡಿದ್ದವರಿಗೆ ಮಾತ್ರ ಬೆಲೆ’
ಕಲಬುರಗಿ : ಸದ್ಯ ಬಿಜೆಪಿಯಲ್ಲಿದ ಪ್ರಾಮಾಣಿಕತೆಗೆ ಬೆಲೆ ಇಲ್ಲ, ಇಲ್ಲಿ ದುಡ್ಡಿದ್ದವರಿಗೆ ಮಾತ್ರ ಬೆಲೆ, ಅವರಿಎಗ ಮಾತ್ರ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ ಎಂದು ಚಿತ್ತಪುರ ಮಾಜಿ ಶಾಸಕ ವಾಲ್ಮೀಕ ನಾಯಕ ಬೇಸರ ಹೊರಹಾಕಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಮಾರು 33 ವರ್ಷಗಳಿಂದ ಪಕ್ಷದಲ್ಲಿದ್ದು, ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ.
ಹಳ್ಳಿ ಹಳ್ಳಿ ಸುತ್ತಿ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಆದರೂ ನನಗೆ ಸೂಕ್ತ ಸ್ಥಾನಮಾನ ನೀಡದೇ ಕಡೆಗಣಿಸಲಾಗುತ್ತಿದೆ ಎಂದು ಅಳು ತೋಡಿಕೊಂಡಿದ್ದಾರೆ.
ರಾಜಕೀಯವಾಗಿ ನನಗೆ ಗಾಡ್ ಫಾದರ್ ಇಲ್ಲ. ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ, ಬಿಎಸ್ ಯಡಿಯಡಿಯೂರಪ್ಪನವರೇ ನನಗೆ ನಾಯಕರು.
ಪಕ್ಷದ ಆದೇಶದ ಮೇರೆಗೆ ರೈಲು ರೋಖೋ ಚಳುವಳಿ, ರಸ್ತೆ ತಡೆ ಸೇರಿದಂತೆ ಹಲವಾರು ಹೋರಾಟ ಮಾಡಿದ್ದೇನೆ. ಪಕ್ಷಕ್ಕಾಗಿ ಲಾಠಿ ಏಟು ತಿಂದಿದ್ದೇನೆ, ಜೈಲಿಗೂ ಹೋಗಿದ್ದೇನೆ.
ಚುನಾವಣೆ ಸಂದರ್ಭ ಸೋಲು ಗೆಲುವು ಸಾಮಾನ್ಯ. ಗೆದ್ದಿದ್ದೇನೆ, ಬಳಿಕ ಸೋತಾಗಲೂ ಸುಮ್ಮನೆ ಕುಳಿತುಕೊಳ್ಳದೇ ಪಕ್ಷ ಸಂಘಟನೆಗೆ ಶ್ರಮಿಸಿರುವೆ.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಆದರೆ, ಮೂರು ದಶಕದ ನನ್ನ ಸೇವೆಗೆ ಸರಿಯಾದ ಸ್ಥಾನ ಮಾನ ನೀಡದೆ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದೇ ವೇಳೆ ಪಕ್ಷ ತೊರೆಯುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ನಾಯಕರು ನನ್ನ ಮೂರು ದಶಕದ ಸೇವೆಯನ್ನು ಯಾಕೆ ಪರಿಗಣಿಸುತ್ತಿಲ್ಲ ಎಂಬ ದುಃಖ ನನ್ನನ್ನ ಕಾಡುತ್ತಿದೆ.
ಆದರೂ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ವಾಲ್ಮೀಕ ನಾಯಕ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









