ಖತರ್ನಾಕ್ ಕಪಲ್ ನಿಂದ ಹನಿಟ್ರ್ಯಾಪ್ – 30 ಮಹಿಳೆಯರಿಂದ 300 ಮಂದಿಯಿಂದ ಕೋಟಿ ಕೋಟಿ ಸುಲಿಗೆ..!
ಉತ್ತರಪ್ರದೇಶ : ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣಗಳು ಸಾಮಾನ್ಯವೆಂಬಂತೆ ಆಗ್ಬಿಟ್ಟಿದೆ. ಬ್ಲಾಕ್ ಮೇಲ್ ಮಾಡಿಸೋದು , ಹುಡುಗಿಯರನ್ನು ಬಿಟ್ಟು ಉದ್ಯಮಿಗಳು ಮತ್ತು ಶ್ರೀಮಂತರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಸುಲಿಗೆ ಮಾಡುವುದನ್ನೇ ಕೆಲವರು ವೃತ್ತಿ ಮಾಡಿಕೊಂಡು ಕೋಟೀ ಕೋಟಿ ಪೀಕ್ತಾಯಿದ್ದಾರೆ.
ಇಂತಹದ್ದೇ ಕಸುಬಿಗಿಳಿದಿದ್ದ ಖತರ್ನಾಕ್ ದಂಪತಿಗಳು 30 ಮಹಿಳೆಯರನ್ನಿಟ್ಟುಕೊಂಡು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದರು. ಈ ದಂಪತಿ ದೇಶಾದ್ಯಂತ ಸುಮಾರು 300 ಮಂದಿಗೆ ಹನಿಟ್ರ್ಯಾಪ್ ಮಾಡಿದ್ದು, ಒಂದೇ ವರ್ಷದಲ್ಲಿ 20 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದಾರೆ. ಈ ದಂಪತಿ ಕಳ್ಳಾಟ ಗೊತ್ತಾಗಿದ್ದು, ಪೊಲೀಸರಿಂದ ಇದೀಗ ಬಂಧನಕ್ಕೊಳಗಾಗಿದ್ದಾರೆ.
ದೆಹಲಿ – 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ
ಯೋಗೇಶ್ ಮತ್ತು ಸಪ್ನಾಗೌತಮ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಗಾಜಿಯಾಬಾದ್ ಮೂಲದವರಾಗಿದ್ದಾರೆ. ಯೋಗೇಶ್ ಶ್ರೀಮಂತರು, ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಮೊದಲು ಅವರ ಬ್ಯಾಂಕ್ ವಹಿವಾಟಿನ ಜೊತೆಗೆ ಫೋನ್ ನಂಬರ್ ಸಹಿತ ವಿವರ ತಿಳಿದುಕೊಳ್ಳುತ್ತಿದ್ದ. ನಂತರ ಯೋಗೇಶ್ ಪತ್ನಿ ಸಪ್ನಾ, ಜಾಲತಾಣಗಳಲ್ಲಿ ನಕಲಿ ಖಾತೆ ತೆಗೆದು, ಅವರೊಂದಿಗೆ ಚಾಟ್ ಮಾಡುತ್ತಿದ್ದಳು. ಅಲ್ಲದೆ ಈ ಕೆಲಸಕ್ಕೆ ಸುಮಾರು 30 ಮಹಿಳೆಯರನ್ನೂ ನೇಮಿಸಿದ್ದಳು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ವೆಬ್‍ಸೈಟ್ ಒಂದರಲ್ಲಿ ಸೆಕ್ಸ್ ಚಾಟ್ ನಡೆಸಿಯೂ ಕಮೀಷನ್ ಪಡೆಯುತ್ತಿದ್ದರು ಎಂಬ ವಿಚಾರವೂ ಕೂಡ ಬಹಿರಂಗವಾಗಿದೆ.








