ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ..
ಸದಾ ಒಂದಲ್ಲ ಒಂದು ವಿನೂತನ ಕೆಲಸಗಳ ಮೂಲಕ ಸುದ್ದಿಯಾಗುವ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀಗ ಮದುವೆ ಮನೆಯಲ್ಲಿ ಕರಿಮಣಿ ಪೋಣಿಸುವ ಮೂಲಕ ಸುದ್ದಿಯಾಗಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಮಾಸಡಿ ಗ್ರಾಮದ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಲೋಹಿತ್ ಅವರ ಸಹೋದರ ಬಸವರಾಜ್ ಅವರ ಮದುವೆಗೆ ಭೇಟಿ ನೀಡಿದ್ದರು. ತರಗನಹಳ್ಳಿ ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಮದುವೆ ಹಮ್ಮಿಕೊಂಡಿದ್ದರು.
ಈ ವೇಳೆ ಮದುವೆ ಮನೆಯಲ್ಲಿ ತಾಳಿ ಪೋಣಿಸುವ ಮೂಲಕ ನವ ಜೋಡಿ ನೂರು ಕಾಲ ಸುಖವಾಗಿರಲೆಂದು ಆಶೀರ್ವಾದ ಮಾಡಿ ಗಮನ ಸೆಳೆದಿದ್ದಾರೆ.
honnalli mla mp renukacharya attend wedding function