ಕೇಂದ್ರ ಸರ್ಕಾರದ ಸಚಿವೆಯಾಗಿರುವ ಕುಮಾರಿ ಶೋಭಾ ಕರಂದ್ಲಾಜೆ ಮತ್ತು ಕೆ.ಆರ್. ಪುರ ಕ್ಷೇತ್ರದ ಶಾಸಕರಾದ ಶ್ರೀ ಬಿಎ ಬಸವರಾಜು ಅವರು ಬಿಜೆಪಿ ಪಕ್ಷದ ಪ್ರಮುಖ ಪದಾಧಿಕಾರಿಗಳೊಂದಿಗೆ ಕಲ್ಕೆರೆ ಮುಖ್ಯ ರಸ್ತೆಯ ರಾಮಮೂರ್ತಿ ನಗರದ ಹನುಮನಾಳು ಕೇಬಲ್ ಆನಂದ್ ಅವರನ್ನು ಸನ್ಮಾನಿಸಲು ಅವರ ನಿವಾಸಕ್ಕೆ ಭೇಟಿ ನೀಡಿದರು. ಇದು ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಕೇವಲ ಒಂದು ತಿಂಗಳಲ್ಲಿ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ ಸಾಧನೆಗಾಗಿ ಸನ್ಮಾನ ಕಾರ್ಯಕ್ರಮವಾಗಿದೆ.
ಈ ಸಂದರ್ಭದಲ್ಲಿ, ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿರುವ ಸಾಮಾನ್ಯ ಕಾರ್ಯಕರ್ತರ ನಿರಂತರ ಪ್ರಯತ್ನಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಬೇಕೆಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಮುನೇಗೌಡರು, ಸೇಸಮ್ಮ, ಗೌರಮ್ಮ, ಸ್ಥಳೀಯ ಮುಖಂಡರುಗಳಾದ ನಂಜೇಗೌಡ, ನರೇಂದ್ರ, ಕೆ ಎಂ ರವಿಚಂದ್ರ, ನಂಜಪ್ಪ, ಕೆ ಎಂ ಪಟೇಲಪ್ಪ, ಕೆ ಎಚ್ ಮುನಿರಾಜು, ಹರೀಶ್ ಚಿಕ್ಕಬಳ್ಳಾಪುರ್, ಶಿವು, ಬಾಂಬೆ ಟೆಕ್ಸ್ಟೈಲ್ ಮಂಜುನಾಥ್, ಶೈಲೇಂದ್ರ, ಮೈಸೂರ್ ನಾರಾಯಣಸ್ವಾಮಿ, ಎಸ್ಟಿಡಿಪಿ ಚಂದ್ರಪ್ಪ, ಎಲೆಕ್ಟ್ರಿಷಿಯನ್ ಸೀನ, ಗೋಪಾಲ್ ರೆಡ್ಡಿ, ಅಡ್ವಕೇಟ್ ಪ್ರಶಾಂತ್, ಅಂಗಡಿ ಸ್ವಾಮಿ, ಕೆಎಂ ಶಿವ , ಮಂಡ್ಯ ಮಧು, ಪರಶುರಾಮ್, ಟೈಲರ್ ಸತ್ಯಮೂರ್ತಿ, ರೈಲ್ವೆ ಪಾಂಡಿಯನ್, ಚಂದಿರ್, ಮುನೇಶ್ವರ ನಗರ ರವಿಕುಮಾರ್, ನಾಗಪ್ಪ ,ರಾಮೇಗೌಡ ಎಲ್ಲಾ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹನುಮನಾಳು ಕೇಬಲ್ ಆನಂದ್ ಮತ್ತು ದಂಪತಿಗೆ ಶುಭ ಹಾರೈಸುವ ಮೂಲಕ ಸಂತಸ ವ್ಯಕ್ತಪಡಿಸಿದರು,
ಈ ಸನ್ಮಾನದ ಬಗ್ಗೆ ಆನಂದ್ ರವರು ಮಾತನಾಡಿ ತಂದೆ – ತಾಯಿಯನ್ನು ನೆನೆದು ಭಾವುಕರಾಗಿ ಆನಂದ ಭಾಷ್ಪ ಸುರಿಸುವುದರ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ ಈ ಯಶಸ್ಸು ಗಳಿಸಲು ಕಾರಣಕರ್ತರಾದ ಕೇಬಲ್ ಟಿವಿ ವೀಕ್ಷಣೆಯ ಗ್ರಾಹಕರಿಗೆ ಮತ್ತು ಆತ್ಮೀಯ ಸ್ನೇಹಿತರೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.