2024ರಲ್ಲಿ ಭಾರತದ ಪ್ರಧಾನಿ ಮಹಿಳೆ ಆಗಬೇಕು : ಜಯಾ ಬಚ್ಚನ್
ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಇನ್ನೂ ಕಾಲವಿದೆ. ಆದ್ರೆ ಮುಂದಿನ ಲೋಕಸಮರದಲ್ಲಿ ಒಂದು ವಿಚಾರ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಅದು ಏನಂದ್ರೆ ಮುಂದಿನ ಲೋಕ ಅಖಾಡದಲ್ಲಿ ಮೋದಿ ವರ್ಸಸ್ ದೀದಿ ಎಂಬ ಮಾತುಗಳು ಕೇಳಿಬರುತ್ತಿವೆ.
ಅಂದ್ರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳೆಲ್ಲಾ ಸೇರಿ ಮಹಿಳಾ ಪ್ರಧಾನಿ ಕಾರ್ಡ್ ಪ್ಲೇ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವಿಚಾರ ಸುದ್ದಿಯಲ್ಲಿರುವಾಗಲೇ ಈಗ ನಟಿ, ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಒಂದು ಹೇಳಿಕೆ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಜಯಾ ಬಚ್ಚನ್ ಹೇಳಿಕೆ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದ್ದು, ವಿವಿಧ ಚರ್ಚೆಗಳು ಆರಂಭಗೊಂಡಿವೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಜಯ ಬಚ್ಚನ್, ಎಲ್ಲ ವಲಯಗಳಲ್ಲಿ ಮಹಿಳೆಯರು ಮುಂದೆ ಬರುತ್ತಿದ್ದು, ಒಲಿಂಪಿಕ್ಸ್ ನಲ್ಲಿಯೂ ದೇಶಕ್ಕೆ ಎರಡು ಪದಕ ತಂದಿದ್ದಾರೆ.
ಅದೇ ರೀತಿ 2024ರಲ್ಲಿ ಭಾರತದ ಪ್ರಧಾನಿ ಮಹಿಳೆ ಆಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಇದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿಯೇ ಜಯಾ ಬಚ್ಚನ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.