ಪೊಲೀಸ್ ಬಸ್ ಕೆಳಗೆ ಸಿಲುಕಿ ಮೂವರು ಯುವಕರು ಸಜೀವ ದಹನ
ಪೊಲೀಸ್ ಬಸ್ ಗೆ ಡಿಕ್ಕಿ ಹೊಡೆದು ಮೂವರು ಸವಾರರು ಸಜೀವ ದಹನವಾಗಿರುವ ಘಟನೆ ಬಿಹಾರದ ಸರನ್ ಜಿಲ್ಲೆಯ ರೇವಲ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-531ರಲ್ಲಿ ನಡೆದಿದೆ.
ಪೊಲೀಸ್ ಬಸ್‌ಗೆ ಡಿಕ್ಕಿ ಹೊಡೆದು ಬಸ್ ಅಡಿಯಲ್ಲಿ ಸಿಲುಕಿದ ಬೈಕ್ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಯವಕರು ಕಣ್ಣೇದುರೆ ಸುಟ್ಟು ಕರಕಲಾಗುತ್ತಿದ್ದರೂ ಪೊಲೀಸರು ಬಸ್ಸಿನಿಂದ ಇಳಿದು ತೆರಳುತ್ತಿರುವುದು ಅತ್ಯಂತ ಆಘಾತಕಾರಿ ಸಂಗತಿ ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಜಯಪ್ರಕಾಶ್ ನಾರಾಯಣನ್ ಅವರ 120ನೇ ಜನ್ಮದಿನಾಚರಣೆಗೆ ಭದ್ರತೆ ಒದಗಿಸಲು ತೆರಳಿದ್ದ ಪೊಲೀಸ್ ತಂಡ ಸೀತಾಬ್ ದೇರಾದಿಂದ ಬಸ್ ನಲ್ಲಿ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ವಾಹನ ಸವಾರರು ಬಸ್‌ನಡಿ ಸಿಲುಕಿಕೊಂಡಿದ್ದು, ದ್ವಿಚಕ್ರ ವಾಹನವನ್ನು ಬಸ್ ಕೆಲವು ಮೀಟರ್‌ವರೆಗೆ ಎಳೆದೊಯ್ದಿದೆ. ಕೂಡಲೇ ಇಂಧನ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ನಡುವೆಯೇ ಪೊಲೀಸ್ ಬೆಟಾಲಿಯನ್ ಒಬ್ಬೊಬ್ಬರಾಗಿ ಇಳಿದು ದೂರ ಸರಿದಿದ್ದಾರೆ.
ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ. ಮೃತರನ್ನು ಪಂಚಭಿಂಡಾ ಗ್ರಾಮದ ಕುಂದನ್ ಮಾಂಝಿ (22), ಬುಲ್ಬುಲ್ ಮಾಂಝಿ (25) ಮತ್ತು ಕಿಶೋರ್ ಮಾಂಝಿ (24) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಯುವಕರು ಬೆಂಕಿಗೆ ಆಹುತಿಯಾದಾಗ ಪೊಲೀಸರು ದೂರದಿಂದ ನೋಡುತ್ತಾ ನಿಂತಿದ್ದರ ಬಗ್ಗೆ ಮಾಧ್ಯಮದವರು ಎಸ್ಪಿ ಅವರನ್ನು ಪ್ರಶ್ನಿಸಿದ್ದು, ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
Horrific accident: Three youths were burnt alive after falling under a police bus