ಉತ್ತರ ಪ್ರದೇಶ – ಭೀಕರ ರಸ್ತೆ ಅಪಘಾತ ಸಂಭವಿಸಿ ಐವರ ಸಾವು…
ವೇಗವಾಗಿ ಬಂದ ಕಾರು ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ವಯಸ್ಸು ಸುಮಾರು 28 ರಿಂದ 32 ವರ್ಷ ಎಂದು ಹೇಳಲಾಗಿದೆ. ಕಾರು ಸವಾರರು ಜಲೌನ್ ಜಿಲ್ಲೆಯ ಓರೈಗೆ ಪ್ರಯಾಣಿಸುತ್ತಿದ್ದರು.
ಅಪಘಾತದಲ್ಲಿ ಮೃತಪಟ್ಟವರನ್ನ ಮುಷರಫ್ (24), ಶಂಸುಲ್ (24), ಗುಫ್ರಾನ್ (28), ಟಿಲ್ಲು (30), ರಿಂಕು (30) ಎಂದು ಗುರುತಿಸಲಾಗಿದೆ. ಎಲ್ಲರೂ ಚಿತ್ರಕೂಟ ಜಿಲ್ಲೆಯ ಕಾರ್ವಿ ನಿವಾಸಿಗಳಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.
Horrific road accident in UP: Car collided with a truck parked on the National Highway from behind, five killed, one injured








