ಕೋವಿಡ್ 3ನೇ ಅಲೆ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕುಸಿತ
ಮ್ಯಾಕ್ಸ್ ಹೆಲ್ತ್‌ಕೇರ್ ಆಸ್ಪತ್ರೆಗಳಲ್ಲಿ ದಾಖಲಾದ ಎಲ್ಲಾ ಕೋವಿಡ್ -19 ರೋಗಿಗಳ ಮೇಲಿನ ಅಧ್ಯಯನದ ಪ್ರಕಾರ ಮೂರನೇ ಅಲೆಯ ಸಮಯದಲ್ಲಿ, ಐಸಿಯು ಬೆಡ್ ಬೇಡಿಕೆ ಮತ್ತು ಆಮ್ಲಜನಕದ ಅಗತ್ಯವು ಹಿಂದಿನ ಎರಡು ಅಲೆಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಿದೆ.
ಮ್ಯಾಕ್ಸ್ ಹೆಲ್ತ್‌ಕೇರ್ ಆಸ್ಪತ್ರೆಗಳಾದ್ಯಂತ ದಾಖಲಾದ ಎಲ್ಲಾ ರೋಗಿಗಳಿಂದ ಈ ತುಲನಾತ್ಮಕ ಅಧ್ಯಯನವನ್ನು ಕೋವಿಡ್ -19 ರೋಗಿಗಳಲ್ಲಿ ದಾಖಲಾತಿ ದರ, ಐಸಿಯು ಅಗತ್ಯತೆ, ಮೊದಲ ಅಲೆ ಮತ್ತು ಎರಡನೇ ಅಲೆ ಮತ್ತು ಮೂರನೇ ಅಲೆ ಮರಣ ಪ್ರಮಾಣವನ್ನು ಹೋಲಿಸಿ ನಡೆಸಲಾಗಿದೆ.
“ಕಳೆದ ವರ್ಷ ಎರಡನೇ ಅಲೆಯ ಸಮಯದಲ್ಲಿ ದೆಹಲಿಯು ದಿನಕ್ಕೆ 28,000 ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ದಾಖಲಿಸುತ್ತಿದ್ದಾಗ, ನಗರದಾದ್ಯಂತ ಆಸ್ಪತ್ರೆಗಳು ತುಂಬಿದ್ದವು ಮತ್ತು ಯಾವುದೇ ಐಸಿಯು ಹಾಸಿಗೆಗಳು ಲಭ್ಯವಿರಲಿಲ್ಲ. ಅದಕ್ಕೆ ಹೋಲಿಸಿದರೆ, ಪ್ರಸ್ತುತ ಅಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 28,000 ಕೇಸ್ ದಾಖಲಿಸಿದರೂ ಆಸ್ಪತ್ರೆಯ ಕೋವಿಡ್ ಆಕ್ಯುಪೆನ್ಸಿ ಕಡಿಮೆಯಾಗಿದೆ. ನಮ್ಮ ಆಸ್ಪತ್ರೆಗಳಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ, ಎಂದು ಮ್ಯಾಕ್ಸ್ ಹೆಲ್ತ್ ಕೇರ್ ಹೇಳಿಕೆ ನೀಡಿದೆ.