ವಾಷಿಂಗ್ಟನ್, ಮೇ 14 : ಕೊರೋನಾ ಸೋಂಕಿನ ಗಂಭೀರತೆಯನ್ನು ಜಗತ್ತಿನಿಂದ ಮುಚ್ಚಿಟ್ಟು ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿರುವ ಚೀನಾದ ಮೇಲೆ ಅಮೆರಿಕದ ಸಂಸತ್ ನಲ್ಲಿ ದಿಗ್ಬಂಧನ ಹೇರಲು ಮಸೂದೆಯನ್ನು ಮಂಡಿಸಲಾಗಿದೆ. ಅಮೆರಿಕ ಸಂಸತ್ತಿನ ಪ್ರಭಾವಶಾಲಿ ಸಂಸದ ಲಿಂಡ್ಸೆ ಗ್ರಹಾಂ ಮತ್ತು ಇತರ ಎಂಟು ಮಂದಿ ಸಂಸದರು ಕೋವಿಡ್-19 ಉತ್ತರದಾಯಿತ್ವ ಕಾಯ್ದೆ ಕುರಿತಾದ ಮಸೂದೆಯನ್ನು ಮಂಡಿಸಿದ್ದು, ಚೀನಾ ತನಿಖೆಗೆ ಸಹಕಾರ ನೀಡದ ಪಕ್ಷದಲ್ಲಿ ಚೀನಾ ವಿರುದ್ಧ ದಿಗ್ಬಂಧನ ಹೇರುವ ಅಧಿಕಾರ ಅಧ್ಯಕ್ಷ ಟ್ರಂಪ್ ಗೆ ಬರಲಿದೆ. ಕೊರೋನಾ ಸೋಂಕಿನ ಕುರಿತಾಗಿ ಚೀನಾ, ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ನೇತೃತ್ವದ ಅಥವಾ ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತನಿಖಾ ತಂಡಕ್ಕೆ ಸಂಪೂರ್ಣ ಮಾಹಿತಿ ನೀಡಬೇಕು. ಅಲ್ಲದೇ ಮಾನವನ ಆರೋಗ್ಯಕ್ಕೆ ತೊಂದರೆ ನೀಡಬಹುದಾದ ಮಾರುಕಟ್ಟೆಗಳನ್ನು ಮುಚ್ಚಬೇಕು ಮತ್ತು ಸಂಸತ್ ಗೆ ಅಧ್ಯಕ್ಷರು 60 ದಿನಗಳ ಒಳಗಾಗಿ ಚೀನಾ ತನಿಖೆಗೆ ಸಹಕಾರ ನೀಡಿದೆ ಎಂದು ಪ್ರಮಾಣ ಪತ್ರ ಸಲ್ಲಿಸಬೇಕು. ಒಂದು ವೇಳೆ ಚೀನಾ ತನಿಖೆಗೆ ಸಹಕರಿಸದ ಪಕ್ಷದಲ್ಲಿ, ಚೀನಾ ವಿರುದ್ಧ ಅರ್ಥಿಕ ಮತ್ತು ಆಡಳಿತಾತ್ಮಕ ನಿರ್ಬಂಧಗಳನ್ನು ಹೇರುವ ಅಧಿಕಾರ ಈ ಮಸೂದೆ ಟ್ರಂಪ್ ಗೆ ನೀಡಲಿದೆ. ಈ ಮಸೂದೆಯ ಹೊರತಾಗಿಯೂ ಚೀನಾ ವಿರುದ್ಧ ವೀಸಾ ನಿಷೇಧ, ಚೀನಾ ಪ್ರಯಾಣ ನಿರ್ಬಂಧ, ಅಮೆರಿಕದ ಕಂಪೆನಿಗಳಿಗೆ ಚೀನಾದ ಸಂಸ್ಥೆಗಳಲ್ಲಿ ಹೂಡಿಕೆ ಮಾಡದಂತೆ ತಡೆ ಇತ್ಯಾದಿ ಆದೇಶ ಹೊರಡಿಸುವ ಅಧಿಕಾರ ಅಮೆರಿಕದ ಅಧ್ಯಕ್ಷ ಟ್ರಂಪ್ ಗೆ ಇದೆ.
ಕೊರೋನಾ ಸೋಂಕಿನ ಕಾರಣದಿಂದ ಶುರುವಾದ ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತು ಏಷ್ಯಾದ ಬಲಿಷ್ಠ ರಾಷ್ಟ್ರ ಚೀನಾದ ನಡುವಿನ ಜಟಾಪಟಿ ಮತ್ತಷ್ಟು ಬಿಗಡಾಯಿಸಿದ್ದು, ಇದು ಹೊಸತೊಂದು ಬಿಕ್ಕಟ್ಟಿಗೆ ಕಾರಣವಾಗಬಹುದೇ ಎಂಬ ಆತಂಕ ಕಾಡುತ್ತಿದೆ.
ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ
ದುಷ್ಟ ಗ್ರಹಗಳಿಂದ ನಿಮ್ಮ ಜೀವನದಲ್ಲಿ ಎಂದಿಗೂ ದುಃಖ ಇರುವುದಿಲ್ಲ. ಹನುಮಂತನ ಈ ತಾರಕ ಮಂತ್ರವನ್ನು ಒಮ್ಮೆ ಪಠಿಸಿದರೂ ಸಹ ಗ್ರಹಗಳು ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಕುಟುಂಬಕ್ಕೆ...








