ಬಲವಂತದ ಮತಾಂತರಕ್ಕೊಳಪಟ್ಟವರು ಎಷ್ಟು ದೂರು ನೀಡಿದ್ದಾರೆ? congress bjp
ಬೆಂಗಳೂರ : ಮತಾಂತರ ನಿಷೇಧ ಮಸೂದೆ ವಿಚಾರವಾಗಿ ಬಿಜೆಪಿ- ಕಾಂಗ್ರೆಸ್ ಮಧ್ಯೆ ಟ್ವಿಟ್ ವಾರ್ ಮುಂದುವರೆದಿದೆ.
ಬಲವಂತದ ಮತಾಂತರದ ತಡೆಗೆ ಈಗಾಗಲೇ ಕಾನೂನುಗಳಿರುವುದು ನಿಜ. ಆದರೂ ಬಲವಂತದ ಮತಾಂತರ ನಡೆಯುತ್ತಿದೆ. ಹೀಗಾಗಿ ಕಾನೂನನ್ನು ಮತ್ತಷ್ಟು ಬಲಿಷ್ಠಗೊಳಿಸಿದರೆ ನಿಮಗೆ ಏನು ಸಮಸ್ಯೆ ಎಂದು ಪ್ರಶ್ನಿಸಿತ್ತು. ಇದಕ್ಕೆ ಉತ್ತರ ನೀಡಿರುವ ಕಾಂಗ್ರೆಸ್, ಕೊಟ್ಟ ಕುದುರೆ ಏರಲಾರದೆ, ಸುಮ್ಮನೇ ಮೈಪರಚುಕೊಳ್ಳುವವರು, ವೀರರೂ ಅಲ್ಲ, ಧೀರರೂ ಅಲ್ಲ, ಈ ಮಾತು ಕೇಂದ್ರ & ರಾಜ್ಯದ ಬಿಜೆಪಿ ಸರ್ಕಾರಗಳು ಈಗಿರುವ ಕಾನೂನನ್ನು ಸಮರ್ಪಕವಾಗಿ ಬಳಸಿಲ್ಲ ಎಂಬುದಕ್ಕೆ ಸಾಕ್ಷಿ ಬಲವಂತದ ಮತಾಂತರಕ್ಕೊಳಪಟ್ಟವರು ಎಷ್ಟು ದೂರು ನೀಡಿದ್ದಾರೆ? ಸಮೀಕ್ಷೆ ಆಗಿದೆಯೇ? ವರದಿ ಇದೆಯೇ? ಎಂಬುದನ್ನ ಸದನದ ಮುಂದಿಟ್ಟು ಮಾತಾಡಲಿ ಎಂದು ಒತ್ತಾಯಿಸಿದೆ.
ಮೊದಲು ಕಾಂಗ್ರೆಸ್ ಟ್ವೀಟ್ ನಲ್ಲಿ.. ಜಾತಿ-ಧರ್ಮಗಳನ್ನು ಒಡೆದಾಳುವ ಜೀವ ವಿರೋಧಿ ಸಿದ್ಧಾಂತದ ಬಿಜೆಪಿ, ಭಾವನಾತ್ಮಕ-ಪ್ರಚೋದನಾತ್ಮಕ ರಾಜಕಾರಣದ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಅಪಮಾನಿಸುತ್ತಲೇ ಬಂದಿದೆ. ಬಿಜೆಪಿ ಎಲ್ಲವನ್ನೂ ಧರ್ಮದ ದೃಷ್ಟಿಯಲ್ಲಿ ನೋಡಿದರೆ, ನಾವು ಸಂವಿಧಾನದ ದೃಷ್ಟಿಯಲ್ಲಿ ನೋಡುತ್ತೇವೆ. ನಮ್ಮ ನಿಲುವು ಮಾನವ ಧರ್ಮ & ಶಾಂತಿ ಸಹಬಾಳ್ವೆಯ ಕಡೆಗೆ ಎಂದಿತ್ತು.
https://twitter.com/INCKarnataka/status/1473308768666480640?s=20
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ಬಿಜೆಪಿ, ಬಲವಂತದ ಮತಾಂತರದ ತಡೆಗೆ ಈಗಾಗಲೇ ಕಾನೂನುಗಳಿರುವುದು ನಿಜ. ಆದರೂ ಬಲವಂತದ ಮತಾಂತರ ನಡೆಯುತ್ತಿದೆ. ಹೀಗಾಗಿ ಕಾನೂನನ್ನು ಮತ್ತಷ್ಟು ಬಲಿಷ್ಠಗೊಳಿಸಿದರೆ ನಿಮಗೆ ಏನು ಸಮಸ್ಯೆ? ಮತಾಂತರಕ್ಕೆ ನೀವು ಏಕೆ ಪ್ರೋತ್ಸಾಹ ನೀಡುತ್ತಿದ್ದೀರಿ? ಮತ ಹೆಚ್ಚುತ್ತದೆ ಎಂಬ ದುರಾಸೆಯೇ ಎಂದು ಕುಟುಕಿತ್ತು.
ಇದೀಗ ಬಿಜೆಪಿ ಟ್ವೀಟ್ ಗೆ ಟಾಂಗ್ ನೀಡಿರುವ ಕಾಂಗ್ರೆಸ್, ಕೊಟ್ಟ ಕುದುರೆ ಏರಲಾರದೆ, ಸುಮ್ಮನೇ ಮೈಪರಚುಕೊಳ್ಳುವವರು, ವೀರರೂ ಅಲ್ಲ, ಧೀರರೂ ಅಲ್ಲ, ಈ ಮಾತು ಕೇಂದ್ರ & ರಾಜ್ಯದ ಬಿಜೆಪಿ ಸರ್ಕಾರಗಳು ಈಗಿರುವ ಕಾನೂನನ್ನು ಸಮರ್ಪಕವಾಗಿ ಬಳಸಿಲ್ಲ ಎಂಬುದಕ್ಕೆ ಸಾಕ್ಷಿ ಬಲವಂತದ ಮತಾಂತರಕ್ಕೊಳಪಟ್ಟವರು ಎಷ್ಟು ದೂರು ನೀಡಿದ್ದಾರೆ? ಸಮೀಕ್ಷೆ ಆಗಿದೆಯೇ? ವರದಿ ಇದೆಯೇ? ಎಂಬುದನ್ನ ಸದನದ ಮುಂದಿಟ್ಟು ಮಾತಾಡಲಿ ಎಂದು ಒತ್ತಾಯಿಸಿದೆ.








