ಚಿತ್ರ ವಿಚಿತ್ರ ಬಟ್ಟೆ ತೊಟ್ಟು, ಮಿಂಚುತ್ತಿದ ನಟಿ ಉರ್ಫಿ ಜಾವೇದ್ ಗೆ ಬಾಲಕನೊಬ್ಬ ಅಸಹ್ಯವಾದ ಪ್ರಶ್ನೆಯೊಂದನ್ನು ಕೇಳಿದ್ದು, ನಟಿ ಶಾಕ್ ಆಗಿದ್ದಾರೆ.
ಬಾಲಕನು (Boy) ಈ ಅಶ್ಲೀಲ ಪ್ರಶ್ನೆ ಕೇಳಿದ್ದಕ್ಕೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ತಾಯಿಯ ಮುಂದೆಯೇ ಎಷ್ಟು ಜನರ ಜೊತೆ ಮಲಗಿದ್ದೀ? ಎಂದು ಕೇಳಿದ ಬಾಲಕನ ಅಸಭ್ಯ ಮಾತಿಗೆ ಉರ್ಫಿ ಶಾಕ್ ಆಗಿದ್ದಾರೆ.
ಪಾಪರಾಜಿಗಳು ನನ್ನ ಫೋಟೋ ತೆಗೆಯುತ್ತಿರುವಾಗ ಹುಡುಗರ ಗುಂಪು ನನ್ನ ನೋಡಿ ಕಮೆಂಟ್ ಮಾಡಿದರು. ಆಗ ಎಲ್ಲರ ಮುಂದೆಯೇ ಬಾಲಕ ನೀನು ಎಷ್ಟು ಜನರ ಜೊತೆ ಮಲಗಿದ್ದೀಯಾ? ಎಂದು ಕೇಳಿದ್ದಾನೆ. ಆ ಹುಡುಗನಿಗೆ ಅಂದಾಜು 15 ವರ್ಷ ಇರಬಹುದು. ನನ್ನ ಕುಟುಂಬ ಮತ್ತು ತಾಯಿ ಎದುರಿನಲ್ಲೇ ಅವನು ಹಾಗೆ ಕೇಳಿದ ಎಂದು ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಆ ಪ್ರಶ್ನೆಯಿಂದ ನನ್ನ ಕುಟುಂಬ ತುಂಬಾ ಮುಜುಗರ ಅನುಭವಿಸಿತು. ನನ್ನ ತಾಯಿಗೆ ಬೇಸರವಾಯಿತು. ಪಾಪರಾಜಿಗಳ ಎದುರಿನಲ್ಲೇ ನಾನು ಆ ಹುಡುಗನಿಗೆ ಬಾರಿಸಬೇಕು ಎಂದುಕೊಂಡೆ. ಮಹಿಳೆಯರಿಗೆ ಮತ್ತು ಎಲ್ಲ ಜನರಿಗೆ ಗೌರವ ಕೊಡುವುದನ್ನು ನಿಮ್ಮ ಹುಡುಗರಿಗೆ ಕಲಿಸಿಕೊಡಿ ಎಂದಿದ್ದಾರೆ.