ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಗಳು ನಮ್ಮದೇಶದ ದೊಡ್ಡ ಬಲ. ಅದರಲ್ಲೂ ಚಿನೂಕ್ ಹೆಲಿಕಾಪ್ಟರ್ ಗಳು ಸಾಕಷ್ಟು ವಿಶೇಷತೆಗಳನ್ನು ಹೊಂದಿವೆ.
ಇದು ವಿಭಿನ್ನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಬಲ್ಲದು. ಚಿನೂಕ್ ಹೆಲಿಕಾಪ್ಟರ್ ಎಂ 777 ಲಘು ತೂಕದ ಹೊವಿಟ್ಜರ್ ವಿಮಾನವನ್ನು ಏರ್ಲಿಫ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಈ ಹೆಲಿಕಾಪ್ಟರ್ ಫಿರಂಗಿ, ವಾಹನ ಹಾಗೂ ತಾಂತ್ರಿಕ ವಸ್ತುಗಳನ್ನು ಸುಲಭವಾಗಿ ಸಾಗಿಸಬಲ್ಲದು. ಇದರೊಂದಿಗೆ, ಭಾರವಾದ ವಸ್ತುಗಳನ್ನು ಎತ್ತುವ ಮೂಲಕ ಹೆಚ್ಚು ಎತ್ತರಕ್ಕೆ ಹಾರಬಲ್ಲದು.
ಯಾವುದೇ ರೀತಿಯ ಹವಾಮಾನದಲ್ಲಿಯೂ ಈ ಹೆಲಿಕಾಪ್ಟರ್ ಉತ್ತಮವಾಗಿ ಕಾರ್ಯ ನಿರಗವಹಿಸಬಲ್ಲ ಸಾಮರ್ಥ್ಯ ಹೊಂದಿವೆ. ಹೆಲಿಕಾಪ್ಟರ್ ಪೂರ್ಣ ಪ್ರಮಾಣದಲ್ಲಿ ಇಂಟಿಗ್ರೇಟ್ ಮಾಡಲಾದ ಡಿಜಿಟಲ್ ಕಾಕ್ಪಿಟ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ.
ಭಾರತ-ಚೀನಾ ಲಡಾಖ್ ಗಡಿ ಘರ್ಷಣೆ ಬಳಿಕ ತನ್ನ ಸಮರ ಸಿದ್ಧತೆಯನ್ನು ಹೆಚ್ಚಿಸಿರುವ ಭಾರತೀಯ ವಾಯುಸೇನೆ, ಲಡಾಖ್ ಗಡಿಯಲ್ಲಿ ರಾತ್ರಿ ಕಾರ್ಯಾಚರಣೆಗೂ ಈ ಹೆಲಿಕಾಪ್ಟರ್ ಗಳನ್ನು ಬಳಸಿದೆ.
2015ರಲ್ಲಿ ಭಾರತ ಸರ್ಕಾರ ಅಮೆರಿಕ ಮೂಲದ ಬೋಯಿಂಗ್ ಕಂಪನಿಯ ಜೊತೆ 15 ಚಿನೂಕ್ ಹೆಲಿಕಾಪ್ಟರ್ ಖರೀದಿ ಸಂಬಂಧ 10 ಸಾವಿರ ಕೋಟಿ ರೂ. ವೆಚ್ಚದ ಒಪ್ಪಂದ ಮಾಡಿಕೊಂಡಿತ್ತು.

ಬೋಯಿಂಗ್ ಕಂಪನಿ ಇದೂವರೆಗೆ ಒಟ್ಟು 1,179 ಹೆಲಿಕಾಪ್ಟರ್ ಗಳನ್ನು ಉತ್ಪಾದಿಸಿದೆ.
ಇಬ್ಬರು ಪೈಲಟ್ ಮತ್ತು ಫ್ಲೈಟ್ ಎಂಜಿನಿಯರ್ ಈ ಹೆಲಿಕಾಪ್ಟರ್ ಅನ್ನು ನಿಯಂತ್ರಿಸಬಹುದು. ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳ ಬಳಕೆಯಲ್ಲಿ ಚಿನೂಕ್ ಹೆಲಿಕಾಪ್ಟರ್ ಇದ್ದು ತನ್ನ ಸಾಮರ್ಥ್ಯವನ್ನು ತೋರಿಸಿದೆ.
ಬಹುಉಪಯೋಗಿ ಹೆಲಿಕಾಪ್ಟರ್ ಚಿನೂಕ್ ಎಲ್ಲ ಬಗೆಯ ಸೇನಾ ಕಾರ್ಯಾಚರಣೆಗೆ ನೆರವಾಗಲಿದ್ದು, ಪ್ರಮುಖವಾಗಿ ಪ್ರವಾಹ, ಅಗ್ನಿ ಅವಘಡ, ಸೇನಾ ವಸ್ತುಗಳ ಪೂರೈಕೆಯಂತಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಇದು ಆರು ರೆಕ್ಕೆ ಇರುವ ಅಪರೂಪದ ಹೆಲಿಕಾಪ್ಟರ್. ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಬೇಕಾದ ಎಲ್ಲ ಬಗೆಯ ಸರಕನ್ನು ಈ ಕಾಪ್ಟರ್ ಹೊತ್ತೊಯ್ಯಬಲ್ಲದು.
ಹಿಂದೆ ಹಾಗೂ ಮುಂದೆ ಎರಡು ಭಾಗದಲ್ಲಿ ದೈತ್ಯ ರೆಕ್ಕೆಗಳನ್ನು ಹೊಂದಿರುವ ಈ ಕಾಪ್ಟರ್ ಪರ್ವತ ಪ್ರದೇಶಗಳಿಗೆ ಯೋಧರನ್ನು ಇಳಿಸುವ, ಕರೆತರುವ ಕೆಲಸ ಮಾಡುತ್ತದೆ.








