ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ – ಗೆದ್ದ ತಂಡಕ್ಕೆ ನಗದು ಬಹುಮಾನ ಎಷ್ಟು ?
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಅಂತಿಮ ಹಂತದ ತಯಾರಿ ನಡೆಸುತ್ತಿವೆ.
ಜೂನ್ 18ರಿಂದ ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಎದುರು ನೋಡುತ್ತಿದೆ.
ಈಗಾಗಲೇ ವಿಶ್ವ ಟೆಸ್ಟ್ ಫೈನಲ್ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಅಂತ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬುದನ್ನು ಕೂಡ ಹೇಳಿಕೊಳ್ಳುತ್ತಿದ್ದಾರೆ.
ಈ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿಯ ಕುತೂಹಲವೂ ಇತ್ತು. ವಿಶ್ವ ಟೆಸ್ಟ್ ಫೈನಲ್ ಪಂದ್ಯವನ್ನು ಗೆದ್ದ ತಂಡ ಎಷ್ಟು ನಗದು ಬಹುಮಾನ ಪಡೆದುಕೊಳ್ಳುತ್ತೆ ಅನ್ನೋ ಪ್ರಶ್ನೆ, ಕುತೂಹಲವೂ ಇತ್ತು.
ಇದೀಗ ಐಸಿಸಿ ಈ ಪ್ರಶ್ನೆ ಮತ್ತು ಕುತೂಹಲಕ್ಕೆ ಸ್ಪಷ್ಟತೆಯನ್ನು ನೀಡಿದೆ. ಹೌದು, ವಿಶ್ವ ಟೆಸ್ಟ್ ಫೈನಲ್ ಪಂದ್ಯವನ್ನು ಗೆದ್ದ ತಂಡದ ಬೊಕ್ಕಸಕ್ಕೆ 1.6 ಮಿಲಿಯನ್ ಡಾಲರ್ ಸೇರಿಕೊಳ್ಳಲಿದೆ.
ಇನ್ನು ರನ್ನರ್ ಅಪ್ ತಂಡ 8ಲಕ್ಷ ಡಾಲರ್ ಅನ್ನು ಗಿಟ್ಟಿಸಿಕೊಳ್ಳಲಿದೆ.
ಅದೇ ರೀತಿ ಮೂರನೇ ಸ್ಥಾನ ಪಡೆದಿರುವ ತಂಡ 4,50,000 ಡಾಲರ್ (ನಾಲ್ಕುವರೆ ಲಕ್ಷ ಡಾಲರ್) ಮತ್ತು ನಾಲ್ಕನೇ ಸ್ಥಾನ ಪಡೆದಿರುವ ತಂಡ 3,50,000 ಡಾಲರ್ (ಮೂರುವರೆ ಲಕ್ಷ ಡಾಲರ್) ನಗದು ಬಹುಮಾನವನ್ನು ಪಡೆದುಕೊಳ್ಳಲಿದೆ.
ಹಾಗೇ ಐದನೇ ಸ್ಥಾನ ಪಡೆದ ತಂಡ 2 ಲಕ್ಷ ಡಾಲರ್ ಹಾಗೂ ಇನ್ನುಳಿದ ನಾಲ್ಕು ತಂಡಗಳು ತಲಾ ಒಂದು ಲಕ್ಷ ಡಾಲರ್ ಬಹುಮಾನವನ್ನು ಗಿಟ್ಸಿಸಿಕೊಳ್ಳಲಿವೆ.
ಎರಡು ವರ್ಷಗಳ ಕಾಲ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ 9 ತಂಡಗಳು ಆಡಿವೆ.