ಈ ಬಾರಿಯ ಐಪಿಎಲ್ ನಿಂದ ಬಿಸಿಸಿಐಗೆ ಬಂದ ಆದಾಯವೆಷ್ಟು..?
ನವದೆಹಲಿ : ಯುಎಇನಲ್ಲಿ ಈ ಬಾರಿಯ ಐಪಿಎಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಚಾಂಪಿಯನ್ ಆಗಿದ್ದರೇ ಕೋರೊನಾ ಮಧ್ಯೆ ಮಿಲಿಯನ್ ಡಾಲರ್ ಟೂರ್ನಿಯನ್ನು ಆಯೋಜಿಸಿ ಬಿಸಿಸಿಐ ಗೆದ್ದಿದೆ.
ಆದ್ರೆ ಆರಂಭದಲ್ಲಿ ಈ ಬಾರಿಯ ಐಪಿಎಲ್ ನಿಂದ ಬಿಸಿಸಿಐಗೆ ನಷ್ಟ ಉಂಟಾಗಿದೆ ಎಂಬ ಮಾತುಗಳ ಹರಿದಾಡುತ್ತಿದ್ದವು.
ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗಳಿಸಿರುವ ಲಾಭದ ಮಾಹಿತಿಯನ್ನು ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ನೀಡಿದ್ದಾರೆ.
ಈ ಬಾರಿಯ ಐಪಿಎಲ್ ನಿಂದ ಬಿಸಿಸಿಐ 4 ಸಾವಿರ ಕೋಟಿ ರೂ. ಆದಾಯ ಗಳಿಸಿದೆ. ಹಾಗೇ ಟಿವಿ ವೀಕ್ಷಕರ ಪ್ರಮಾಣ ಶೇ. 25 ರಷ್ಟು ಹೆಚ್ಚಿದೆ ಬಿಸಿಸಿಐ ಅರುಣ್ ಧುವಾಲ್ ಮಾಹಿತಿ ನೀಡಿದ್ದಾರೆ.
5 ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ ಪ್ಲೀಸ್
ಪತ್ರಿಕೆಯೊಂದರ ಜೊತೆ ಮಾತನಾಡುತ್ತ ಅರುಣ್ ಧುಮಾಲ್, ಹಿಂದಿನ ಐಪಿಎಲ್ ಸೀಸನ್ ಗಳಿಗೆ ಹೋಲಿಸಿದರೇ ಈ ಐಪಿಎಲ್ ಶೇ. 35 ರಷ್ಟು ಖರ್ಚು ಕಡಿಮೆಗೊಳಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲೂ ನಾವು 4 ಸಾವಿರ ಕೋಟಿ ಆದಾಯ ಗಳಿಸಿದ್ದೇವೆ. ಮುಂಬೈ ಇಂಡಿಯನ್ಸ್ – ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯವನ್ನು ಅಧಿಕ ಮಂದಿ ವೀಕ್ಷಿಸಿದ್ದಾರೆ.
ಐಪಿಎಲ್ ನಡೆಯಲ್ಲ ಅನ್ನುತ್ತಿದ್ದವರು ಇದೀಗ ಬಂದು ನಮ್ಮನ್ನು ಅಭಿನಂದಿಸುತ್ತಿದ್ದಾರೆ ಎಂದು ಧುಮಾಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಅಂತಹ ಮಧುರ ಕ್ಷಣಗಳು ಮತ್ತೆ ಮತ್ತೆ ಬರುವುದಿಲ್ಲ..!
ಇನ್ನೊಂದೆಡೆ ಮುಂದಿನ ವರ್ಷ ನಡೆಯುವ ಐಪಿಎಲ್ ಗೆ ಬಿಸಿಸಿಐ ಈಗಿನಿಂದಲೇ ತಯಾರಿ ಆರಂಭಿಸಿದೆ. ಐಪಿಎಲ್ 2021 ನಲ್ಲಿ ಎರಡು ಹೊಸ ತಂಡಗಳು ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಹಾಗೇ ತಂಡಗಳ ಫ್ರಾಂಚೈಸಿಗಳು ಆಡುವ 11ರಲ್ಲಿ 5 ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ನೀಡುವಂತೆ ಮನವಿ ಮಾಡಿವೆ. ಇದಕ್ಕೆ ಬಿಸಿಸಿಐಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










